ಬಳ್ಳಾರಿ: ಪ್ರತೀ ವರ್ಷದಂತೆ ವಾರ್ಷಿಕ ಐ ಎಂ ಎ ರಾಜ್ಯಮಟ್ಟದ ಟೆನ್ನಿಸ್ ಪಂದ್ಯಾವಳಿಯನ್ನು ನಗರದ ಪೋಲೀಸ್ ಜಿಮ್‌ಖಾನಾದಲ್ಲಿ ನಡೆಸಿಕೊಡುವ ಜವಾಬ್ದಾರಿಯನ್ನು ಭಾರತೀಯ ವೈದ್ಯಕೀಯ ಸಂಘ, ಬಳ್ಳಾರಿ ಶಾಖೆ ಹೊತ್ತುಕೊಂಡಿದೆ. ರಾಜ್ಯದ ವಿವಿಧ ಭಾಗಗಳಿಂದ 50-70 ವೈದ್ಯರು ಭಾಗವಹಿಸುವ ನಿರೀಕ್ಷೆಯಲ್ಲಿ ಎಲ್ಲ ಪೂರ್ವಭಾವಿ ಸಿದ್ಧತೆಗಳು ನಡೆದಿವೆ ಎಂದು ಕಾರ್ಯಕ್ರಮದ ರುವಾರಿಗಳಾದ ಡಾ. ಶಿವನಾಯಕ್ ಮತ್ತು ಡಾ.ರಾಜಶೇಖರ್ ಗೌಡ ತಿಳಿಸಿದ್ದಾರೆ.
ಈ ಕಾರ್ಯಕ್ರಮ ಫೆ 22 ಮತ್ತು 23 ಎರಡು ದಿನಗಳು ನಡೆಯಲಿದ್ದು, 22 ರ ಬೆಳಿಗ್ಗೆ 9 ಗಂಟೆಗೆ ಕಾರ್ಯಕ್ರಮವನ್ನು ಡಾ.ವಿ.ವಿ.ಚಿನ್ನಿವಾಲರ್ ಪ್ರೆಸಿಡೆಂಟ್ (ಐಎಂಎ, ಕೆಎಸ್‌ಬಿ) ಅವರು ಉದ್ಘಾಟಿಸಲಿದ್ದಾರೆ. 23 ರ ಕಾರ್ಯಕ್ರಮವನ್ನು ಬಳ್ಳಾರಿಯ ಜಿಲ್ಲಾಧಿಕಾರಿ ಪ್ರಶಾಂತ್‌ಕುಮಾರ್ ಮಿಶ್ರಾ ಅವರು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ.ಶೋಭಾರಾಣಿ ಎಸ್ಪಿ ಬಳ್ಳಾರಿ ಮತ್ತು ಡಾ.ಎಂ.ಡಿ. ಜುಬೇರ್ ಅಪರ ಜಿಲ್ಲಾಧಿಕಾರಿಗಳು ಬಳ್ಳಾರಿ ಭಾಗವಹಿಸಲಿದ್ದಾರೆ. ಅಧ್ಯಕ್ಷರು, ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ರಾಜ್ಯ ಶಾಖೆ ಇವರ ಸಾನ್ನಿಧ್ಯದಲ್ಲಿ, ಈ ಪಂದ್ಯಾವಳಿ ಪೊಲೀಸ್ ಜಿಮ್ಖಾನದಲ್ಲಿ ವಿಧ್ಯುಕ್ತವಾಗಿ ಉದ್ಘಾಟನೆಗೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ಡಾ.ಮಾನಿಕ್ ರಾವ್ ಐಎಂಎ ಪ್ರೆಸಿಡೆಂಟ್ ಬಳ್ಳಾರಿ, ಡಾ.ಸಂಗೀತ ಕಟ್ಟಿಮನಿ ಐಎಂಎ ಕಾರ್ಯದರ್ಶಿ, ಡಾ.ಮಲ್ಲಿಕಾರ್ಜುನ್ ಐಎಂಎ ಕೋಶಾಧಿಕಾರಿ, ಮತ್ತಿತರರು ಉಪಸ್ಥಿತರಿರಲಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ