ಸಂಗೀತ ಕ್ಷೇತ್ರಕ್ಕೆ ವಿದುಷಿ ಶೀಲಾ ದಿವಾಕರ್ ಕೊಡುಗೆ ಅಪಾರ: ಪ್ರೊ. ಗೋಪಾಲ ಎಂ. ಗೋಖಲೆ

Upayuktha
0

ಸುರತ್ಕಲ್‌ನಲ್ಲಿ ಗಾನ ಶಾರದೆಗೆ ನಮನ- ಗುರುವಿಗೊಂದು ನಾಟ್ಯ ನಮನ ಕಾರ್ಯಕ್ರಮ




ಸುರತ್ಕಲ್: ಸಂಗೀತವು ಕಠಿಣ ಪರಿಶ್ರಮ ಮತ್ತು ಶ್ರದ್ಧೆಯಿಂದ ಒಲಿದು ಬರುವಂತಹ ಕಲೆಯಾಗಿದ್ದು ವಿದುಷಿ ಶೀಲಾ ದಿವಾಕರ್ ಅವರು ತಮ್ಮ ಸುಮಧುರ ಕಂಠದ ಮೂಲಕ ಸರ್ವ ಪ್ರಸಿದ್ಧರಾಗಿದ್ದಾರೆ. ಶ್ರೇಷ್ಠ ಸಂಗೀತಗಾರ್ತಿಯಾಗಿ ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ಸಲ್ಲಿಸಿ ಅನೇಕ ಶಿಷ್ಯರನ್ನು ಸಂಗೀತ ಲೋಕಕ್ಕೆ ಅರ್ಪಿಸಿದ ಅವರ ಸಾಧನೆ ಅನನ್ಯವಾದ್ದದ್ದು ಎಂದು ಸುರತ್ಕಲ್ ಗೋವಿಂದ ದಾಸ ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ಪ್ರೊ. ಗೋಪಾಲ ಎಂ. ಗೋಖಲೆ ನುಡಿದರು.


ಅವರು ಶ್ರೀ ಶಾರದಾ ನಾಟ್ಯಾಲಯ, ಕುಳಾಯಿ- ಹೊಸಬೆಟ್ಟುವಿನ ವತಿಯಿಂದ ಹಿಂದೂ ವಿದ್ಯಾದಾಯಿನೀ ಸಂಘ (ರಿ), ಸುರತ್ಕಲ್‌ನ ಆಡಳಿತಕ್ಕೊಳಪಟ್ಟ ಗೋವಿಂದ ದಾಸ ಕಾಲೇಜಿನ ಲಲಿತಕಲಾ ಸಂಘದ ಸಹಯೋಗದಲ್ಲಿ ನಡೆದ ಸಂಗೀತ ವಿದುಷಿ ಶೀಲಾ ದಿವಾಕರ್‌ರವರಿಗೆ ಅರ್ಪಿಸಿದ ಗಾನ ಶಾರದೆಗೆ ನಮನ.. ಗುರುವಿಗೊಂದು ನಾಟ್ಯ ನಮನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.


ನುಡಿ ನಮನ ಸಲ್ಲಿಸಿದ ವಿದ್ವಾನ್ ಕೆ. ಮುರಳೀಧರ್ ಉಡುಪಿ ಅವರು ಶೀಲಾ ದಿವಾಕರ್ ಸಂಗೀತ ಕ್ಷೇತ್ರದಲ್ಲಿ ವಿವಿಧ ಆವಿಷ್ಕಾರಗಳಿಗೆ ಸ್ಪಂದಿಸಿ ಉತ್ತಮ ಶಿಷ್ಯ ವೃಂದದವರನ್ನು ಬೆಳೆಸಿದವರು ಎಂದರು.


ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ. ಪಿ. ಕೃಷ್ಣಮೂರ್ತಿ ಮಾತನಾಡಿ ಗೋವಿಂದ ದಾಸ ಕಾಲೇಜಿನ ಹಳೆ ವಿದ್ಯಾರ್ಥಿನಿಯಾಗಿದ್ದ ವಿದುಷಿ ಶೀಲಾ ದಿವಾಕರ್ ಅವರು ಸಂಗೀತ ಕ್ಷೇತ್ರದಲ್ಲಿ ಮಾಡಿದ ಸಾಧನೆಗಳು ಸಂಗೀತಾಭ್ಯಾಸಿಗಳಿಗೆ ಪ್ರೇರಣೆಯಾಗಿದೆ ಎಂದರು.


ಸಂಗೀತ ನಿರ್ದೇಶಕ ಸತೀಶ್ ಸುರತ್ಕಲ್ ಮಾತನಾಡಿ ಎಳವೆಯಂದಲೇ ಶೀಲಾ ದಿವಾಕರ್ ಅವರ ಬೆಳವಣಿಗೆ ಕಂಡವನಾಗಿದ್ದು ಅವರೊಂದಿಗಿನ ಒಡನಾಟ ವಿಶಿಷ್ಟವಾದದ್ದು ಎಂದರು.


ಶೀಲಾ ದಿವಾಕರ್ ಅವರ ಪತಿ ಎಲ್. ದಿವಾಕರ್ ಮಾತನಾಡಿ ಶಿಷ್ಯ ವಾತ್ಸಲ್ಯದ ಶೀಲಾ ದಿವಾಕರ್‌ರವರು ಮಾತೃ ಸ್ವರೂಪಿಣಿಯಾಗಿ ಕಲಾವಿದರನ್ನು ಬೆಳೆಸಿದವರು ಎಂದರು.


ಶೀಲಾ ದಿವಾಕರ್ ಅವರ ಶಿಷ್ಯೆಯರಾದ ಕಲಾವತಿ ಕೆ, ಸಂಧ್ಯಾ ಗಣೇಶ್, ಪೂಜಾ ಆಚಾರ್ಯ, ದೀಕ್ಷಾ ಮತ್ತು ಲಹರಿ ಗೀತ ನಮನ ಸಲ್ಲಿಸಿದರು. ಹರೀಶ್ ಮುಲ್ಕಿ ರಿದಂ ಪ್ಯಾಡ್‌ನಲ್ಲಿ, ವಿಜಯ್ ಕುಳಾಯಿ ಕೀಬೋರ್ಡ್ನಲ್ಲಿ ಮತ್ತು ದರ್ಶನ್ ಮುಲ್ಕಿ ತಬಲಾದಲ್ಲಿ ಸಹಕರಿಸಿದರು.


ಶ್ರೀ ಶಾರದಾ ನಾಟ್ಯಾಲಯದ ಶಿಷ್ಯೆಯರಾದ ವಿದುಷಿ ಪ್ರಣತಿ ಸತೀಶ್, ಅಪೂರ್ವ ರಾವ್, ಮಾಸ್ಟರ್ ತನ್ಮಯ್ ಸುರೇಶ್, ಚಿನ್ಮಯೀ ಸುರೇಶ್, ಚಾರ್ವಿ ಕೆ. ಕುಲಾಲ್, ಸಾಕ್ಷಿ ಆಚಾರ್, ತ್ವಿಷಾ, ಕಶ್ವಿ ಪಿ. ಅಂಚನ್, ಅವನಿ ರಾವ್, ಚಾರ್ವಿ ಟಿ. ಕೊಟ್ಟಾರಿ, ಯಶಿಕಾ ಅಡ್ಯಾರ್, ಹಿರಣ್ಯ ಭಟ್, ಅಂಕಿತ ಬಿ.ಜಿ., ಅನನ್ಯ ವಿ. ಅಂಚನ್ ಇವರ ನೃತ್ಯ ನಮನಕ್ಕೆ ಹಾಡುಗಾರಿಕೆಯಲ್ಲಿ ರಜನಿ ವರುಣ್ ಗೋರೆ ಬೆಂಗಳೂರು, ಕೊಳಲಿನಲ್ಲಿ ವಿದ್ವಾನ್ ಕೆ. ಮುರಳೀಧರ್, ಮೃದಂಗದಲ್ಲಿ ವಿದ್ವಾನ್ ಕೆ. ಬಾಲಚಂದ್ರ ಭಾಗವತ್ ಮತ್ತು ಪಿಟೀಲಿನಲ್ಲಿ ವಿದ್ವಾನ್ ಪಿ. ಶ್ರೀಧರ್ ಆಚಾರ್ ಸಹಕರಿಸಿದರು.

ಶ್ರೀ ಶಾರದ ನಾಟ್ಯಾಲಯ ಹೊಸಬೆಟ್ಟು – ಕುಳಾಯಿಯ ನಿರ್ದೇಶಕಿ ವಿದುಷಿ ಭಾರತಿ ಸುರೇಶ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಎನ್. ಆರ್. ದಾಮೋದರ ಶರ್ಮ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಶಾರದಾ ನಾಟ್ಯಾಲಯದ ಸುರೇಶ್ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top