ಕಾಸರಗೋಡು: ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ ಬ್ರಹ್ಮಕಲಶೋತ್ಸವದ ಅಂಗವಾಗಿ ಮುಳಿಯಾರು ಸಮಿತಿ ವ್ಯಾಪ್ತಿಯ ಮಜಕ್ಕಾರ್ ಅಂಬುಕುಂಜೆ ಪ್ರಾದೇಶಿಕ ಸಮಿತಿ ಪೂರ್ವ ತಯಾರಿ ಸಭೆಯು ಮಜಕ್ಕಾರು ಶ್ರೀ ದೂಮಾವತಿ ವಿಷ್ಣುಮೂರ್ತಿ ದೈವಸ್ಥಾನದ ವಠಾರದಲ್ಲಿ ಜರಗಿತು. ಬಾಲಕೃಷ್ಣ ರೈ ಮಜಕ್ಕಾರು ಅಧ್ಯಕ್ಷ ಸ್ಥಾನ ವಹಿಸಿದರು.
ಗೋವಿಂದ ಬಳ್ಳಮೂಲೆ ಸಮಿತಿಯ ರಚನೆ, ಮುಂದಿನ ಕಾರ್ಯವಿಧಾನಗಳ ಬಗ್ಗೆ ಸಮಗ್ರ ಮಾಹಿತಿಗಳನ್ನಿತ್ತರು.
ಕೃಷ್ಣೋಜಿ ಮಾಸ್ಟರ್ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸಭಾ ಸಂಯೋಜನೆ ಮಾಡಿದರು. ಪಂಚಾಯತ್ ಮಾಜಿ ಸದಸ್ಯೆ ಉಷಾ ಮಜಕ್ಕಾರ್ ಉಪಸ್ಥಿತರಿದ್ದರು. ಅಗಲ್ಪಾಡಿ ವಾಸುದೇವ ಭಟ್ ವಿಶೇಷ ಉಪಸ್ಥಿತರಿದ್ದು ಶುಭಾಶಯ ಮಾತುಗಳನ್ನಾಡಿದರು.
ಸಭೆಯಲ್ಲಿ ಸಮಾಲೋಚಿಸಿ ಫೆ.9ರಂದು ಆದಿತ್ಯವಾರ 10 ಗಂಟೆಗೆ ಸಾರ್ವಜನಿಕ ಸಭೆ ಮಾಡಲು ತೀರ್ಮಾನಿಸಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ