ನಡು ರಾತ್ರಿಯಲ್ಲಿ ಯಶಸ್ಸು ಗಳಿಸುವುದು ಎಂದರೆ ಅದು ಸುಲಭದ ಕೆಲಸವಲ್ಲ. ಕಷ್ಟ ಪಟ್ಟು, ತಾನು ಯಾರು ಎಂದು ಹೇಳಲು, ತನ್ನ ಅಸ್ತಿತ್ವವನ್ನು ಜಗತ್ತಿಗೆ ತೋರಿಸಲು ಹಲವಾರು ದಿನ, ವರುಷಗಳು ಬೇಕು. ಅಂತೆಯೇ ಇಂದಿನ ಸೋಶಿಯಲ್ ಮೀಡಿಯಾದಲ್ಲೂ ತಮಗೆ ಸಾವಿರಾರು ಸಂಖ್ಯೆಯಲ್ಲಿ ಫಾಲೋವರ್ಸ್ ಪಡೆಯಲು ಅನೇಕ ರೀತಿಯ ಪ್ರಾಯೋಗಿಕ ಪೋಸ್ಟ್, ಕಂಟೆಟ್‌ಗಳನ್ನು ಹಾಕಬೇಕು. ಆದರೆ ಇಲ್ಲಿ ಒಬ್ಬರು ಯಾವುದೇ ರೀತಿಯಲ್ಲಿ ಪೋಸ್ಟ್ ಹಾಕದೇ ಸೋಶಿಯಲ್ ಮೀಡಿಯಾದ ಫೀಡ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಹೌದು, ಲಿಯೋ ನಾರ್ಡೋ ಚಿತ್ರೀಕರಿಸಿದ ಮೊನಲಿಸಾ ಪೈಂಟಿಂಗ್‌ಗಿಂತಲೂ ಅದ್ಬುತವಾಗಿರುವ ಈ ಅಸಲಿ ಮೊನಾಲಿಸ ಎಲ್ಲರ ಇನ್ಟಾಗ್ರಾಂನಲ್ಲಿ ಸುದ್ದಿಯಾಗುತ್ತಿದ್ದಾಳೆ.
ಕಣ್ಣ ನೋಟದಲ್ಲಿ ಆಕರ್ಷಿತಳಾಗುವವಳೇ ಇವಳು. ಯಾವುದೇ ಬಾಲಿವುಡ್ ತಾರೆಯ ಸೌಂದರ್ಯಕ್ಕೂ ಕಮ್ಮಿ ಇರದ ಈಕೆ, ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ 2025ರ ಮಹಾಕುಂಭಾಭಿಷೇಕದಲ್ಲಿ ರುದ್ರಾಕ್ಷಿ ಮಾಲೆಗಳನ್ನು ಮಾರುತ್ತಿರುವವಳೇ 16 ಹರೆಯದ ಮೊನಾಲಿಸ, ಮೂಲತಃ ಈಕೆ ಇಂದೋರ್‌ನವಳು.
ಈಗಾಗಲೇ ಹಲವಾರು ಮಂದಿ ಶೇರ್ ಮಾಡಿರುವ ವಿಡಿಯೋದಲ್ಲಿ ಇವಳ ಕಣ್ಣು, ನೀಲ ವರ್ಣದ ಮೈ ಬಣ್ಣ, ಹಾಗೂ ಮಾತನಾಡುವ ಶೈಲಿಯ ವಿಡಿಯೋ ತುಣುಕು ವೈರಾಲ್ ಆಗಿವೆ. ಅಂತೆಯೇ ವಿಡಿಯೋದಲ್ಲಿ ವಿದೇಶೀ ಭಕ್ತರೊಂದಿಗೆ ಈಕೆ ಇಂಗ್ಲಿಷ್‌ನಲ್ಲಿ ಸಂವಾದ ನಡೆಸುವುದು, ಸೋಶಿಯಲ್ ಮೀಡಿಯಾ ಇನ್ಫ್ಲ್ಯೂಯೆನ್ಸರ್ 5 ಸಾವಿರ ರೂಪಾಯಿ ಕೊಡಲು ಮುಂದಾದಾಗ ಅದನ್ನು ನಿರಾಕರಿಸಿ, ಇದರ ಬದಲಾಗಿ ತಾನು ಮಾರಾಟ ಮಾಡುತ್ತಿರುವ ಮಾಲೆಯ ಸರವನ್ನು ಖರೀದಿಸುವಂತೆ ಹೇಳುವ ದೃಶ್ಯ, ಜೊತೆಗೆ ಇನ್ನೊಬ್ಬ ಫೋಟೋಗ್ರಾಫರ್ ಆಕೆಯ ಚಿತ್ರಗಳನ್ನು ನದಿ ದಂಡೆಯ ಬಳಿ ಚಿತ್ರೀಕರಿಸಿದ್ದೂ ಕೂಡಾ ಕಾಣಬಹುದು. ಅಷ್ಟೇ ಅಲ್ಲದೆ ಈಗಾಗಲೇ ಮೊನಾಲಿಸ ಹೆಸರಿನ 4-5 ಇನ್ಟಾಗ್ರಾಂ ಪೇಜ್‌ಗಳೂ ತೆರೆಯುತ್ತಿರುವುದು ಕಾಣಬಹುದು.
- ಅಶ್ವಿನಿ ಅನುಶ್
ಪತ್ರಿಕೋದ್ಯಮ ವಿಭಾಗ
ಸಂತ ಅಲೋಶಿಯಸ್ ಪರಿಗಣಿತ ವಿವಿ, ಮಂಗಳೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ