ಕಾಸರಗೋಡು: ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ ಬ್ರಹ್ಮಕಲಶೋತ್ಸವದ ಅಮ್ಮಂಗೋಡು ಗೋಳಿಯಡ್ಕ ಪ್ರಾದೇಶಿಕ ಸಮಿತಿಯ ವಿಸ್ತರಣಾ ಸಭೆ ಅಮ್ಮಂಗೋಡು ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಇಂದು (ಜ.26) ಜರಗಿತು.
ಸದಾಶಿವ ಭಟ್ ಮುಂಡಪ್ಪಳ್ಳ ಅಧ್ಯಕ್ಷ ಸ್ಥಾನ ವಹಿಸಿ ದಿಕ್ಸೂಚೀ ಮಾತುಗಳನ್ನಾಡಿದರು. ಗೋವಿಂದಬಳ್ಳಮೂಲೆ ಸಮಿತಿಯ ಮುಂದಿನ ಕಾರ್ಯ ಯೋಜನೆ, ಮನೆ ಮನೆ ಅಭಿಯಾನ, ಕರಸೇವೆ, ಸ್ವಯಂಸೇವಕರ ಕಾರ್ಯ ವಿಧಾನ, ಹೊರೆಕಾಣಿಕೆ ಮೊದಲಾದ ವಿಷಯಗಳ ಬಗ್ಗೆ ಮಾಹಿತಿಗಳನ್ನಿತ್ತರು.
ಪ್ರಕಾಶ ಅಮ್ಮಂಗೋಡು ಪ್ರಾಸ್ತಾವಿಕ ಮಾತುಗಳನ್ನಾಡಿ ಸಭಾ ಸಂಯೋಜನೆ ಮಾಡಿದರು. ಕಾರ್ಯದರ್ಶಿ ಪುರುಷೋತ್ತಮ ಗೋಳಿಯಡ್ಕ ಸ್ವಾಗತಿಸಿ, ಪ್ರಿಯ ಗೋಳಿಯಡ್ಕ ಧನ್ಯವಾದವಿತ್ತರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ