ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು

Upayuktha
0




ವಿವೇಕಾನಂದ ,ಈ ಹೆಸರನ್ನು ಕೇಳಿದೊಡನೆ ಭಾರತೀಯರಿಗೆ ಹೆಮ್ಮೆಯಿಂದ ಮೈ ರೋಮಾಂಚನ ಗೊಳ್ಳುತ್ತದೆ. ಸ್ವಾಮಿ ವಿವೇಕಾನಂದ ಒಬ್ಬ ಶತಮಾನಕ್ಕೆ ಒಮ್ಮೆ ಹುಟ್ಟಿ ಬರುವ ಅದ್ಬುತ ಪ್ರತಿಭೆ ಮತ್ತು  ಭಾರತ ಮಾತೆಯ ಶ್ರೇಷ್ಠ ಸುಪುತ್ರ  ಎಂದು ಹೇಳ ಬಹುದು.


ಪ್ರತಿ ವರ್ಷ  ಜನವರಿ 12 ಸ್ವಾಮೀ ವಿವೇಕಾನಂದರ ಜಯಂತಿಯನ್ನು  "" ರಾಷ್ಟ್ರೀಯ ಯುವಕ ದಿನ"" ವೆಂದು ಆಚರಿಸಿ ಸಂಭ್ರಮ. ಪಡಲಾಗುತ್ತದೆ.

 

1863ರಲ್ಲಿ ಕಲ್ಕತ್ತಾ ನಗರದಲ್ಲಿ  ಜನಿಸಿದ ಸ್ವಾಮಿ. ವಿವೇಕಾನಂದರು ಭಾರತೀಯರು ಕಂಡ ಅದ್ಬುತ ಪ್ರತಿಭೆ. ಮುಂದೆ ರಾಮಕೃಷ್ಣ ಪರಮಹಂಸರ ಶಿಷ್ಯರಾಗಿ ಜಗತ್ತನ್ನೇ ಬೆಳಗಿದರು. ಎಲ್ಲವನ್ನೂ ಪ್ರಶ್ನಿಸುವ ಸ್ವಭಾವ ಬೆಳೆಸಿಕೊಂಡಿದ್ದ ನರೇಂದ್ರ ದತ್ತ ಪರಮ ಹಂಸರ ಶಿಷ್ಯರಾಗಿ ಆಧ್ಯಾತ್ಮಿಕ ನಕ್ಷತ್ರ ಎನಿಸಿಕೊಂಡು ಮಿಂಚಿದರು.


1893ನೇ ಇಸವಿಯಲ್ಲಿ ಮೈಸೂರು ಮಹಾರಾಜರ ಸಹಾಯದಿಂದ ಚಿಕಾಗೊ ವಿಶ್ವ ಧರ್ಮ ಸಮ್ಮೇಳನದಲ್ಲಿ ಮಾಡಿದ ಕೇವಲ 3 ನಿಮಿಷದ ಭಾಷಣ ಈಗಲೂ ಪ್ರಸಿದ್ಧವಾಗಿದೆ. ""Ladies and Gentlemen ""  ಪ್ರಾರಂಭ ನಿರೀಕ್ಷಿಸಿದ್ದ ಅಮೇರಿಕಾದ ಜನತೆಗೆ ""My brothers and sisters of America ""  ಕೇಳಿದೊಡನೆ  ಪ್ರೇಕ್ಷಕ ವರ್ಗವು ಸಂಭ್ರಮ ಪಟ್ಟಿತು. ಈಗಲೂ ಆ 3 ನಿಮಿಷದ ಭಾಷಣ ಜಗತ್ತಿನ ಇತಿಹಾಸದಲ್ಲಿ ದಾಖಲಾಗಿದೆ.ಭಾರತ ದೇಶವೆಂದರೆ ಕೇವಲ ಹಾವು ಆಡಿಸುವವರ ದೇಶವೆಂದು ಭಾವಿಸಿದ್ದ  ಪಾಶ್ಯಾತ್ಯರ ಕಣ್ಣನ್ನು ತೆರೆದರು.


ಆಗ ಭಾರತವು ಬ್ರಿಟಿಷರ ವಶದಲ್ಲಿತ್ತು. ಭಾರತದ ಮೇಲೆ ನಿಯಂತ್ರಣ ಹೊಂದಿದ್ದ ಬ್ರಿಟಿಷರು ಭಾರತೀಯರನ್ನು ನಾಗರಿಕ ಪ್ರಜ್ಞೆಯನ್ನು  ಇಲ್ಲದ, ಮೂಢ ನಂಬಿಕೆಯನ್ನು ಹೊಂದಿದ ಕಾಡು ಜನರೆಂದು ತಿಳಿದಿದ್ದ, ಬ್ರಿಟಿಷರಿಗೆ  ವಿವೇಕಾನಂದರು ಸಿಂಹ ಸ್ವಪ್ನವಾಗಿದ್ದರು. ಬ್ರಿಟಿಷರು ಭಾರತೀಯರನ್ನು ಉದ್ಧರಿಸಲು ದೇವರು ತಮ್ಮನ್ನು ಭಾರತಕ್ಕೆ  ಕಳಿಸಿ ಕೊಟ್ಟಿದ್ದಾನೆ ಎಂದು ಭಾವಿಸಿದ್ದರು. ಆ ಧೋರಣೆಯನ್ನು """White man's burden"" ಎಂದು ಕರೆಯಲಾಗುತ್ತಿತ್ತು.


ಆದರೆ ಸ್ವಾಮಿ ವಿವೇಕಾನಂದರು ಪಾಶ್ಯತ್ಯ ದೇಶಗಳಿಗೆ ಭೇಟಿ ಮಾಡಿ  ಭಾರತೀಯರ ಬಗ್ಗೆ  ಇರುವ ಪೂರ್ವಗ್ರಹ ಭಾವನೆಯನ್ನು ತಿದ್ದಿದರು. ಹೇಗೆ ತಾಯಿ ಹರಕು ಸೀರೆಯನ್ನು ಉಟ್ಟು ನಿಂತರೂ ಅವಳು ತಾಯಿಯಾಗಿ  ಗೌರವ ಸ್ವೀಕರಣೆ ಇರುತ್ತದೆಯೋ ಹಾಗೆ ನನ್ನ ದೇಶದಲ್ಲಿ ಬಡತನ, ನಿರುದ್ಯೋಗ ಇದ್ದರೂ ನನ್ನ ದೇಶ ಶ್ರೀಮಂತ ಪರಂಪರೆಯನ್ನು ಹೊಂದಿರುವ ದೇಶ ಎಂದು ಘೋಷಿಸಿದರು.


ಒಮ್ಮೆ ಸ್ವಾಮಿ ವಿವೇಕಾನಂದರು ಇಂಗ್ಲೆಂಡಿಗೆ ಭೇಟಿ ಕೊಟ್ಟಾಗ ಅಲ್ಲಿ ಅವರಿಗೆ ಭಾರತ ದೇಶದಲ್ಲಿ ಸ್ತ್ರೀಯರನ್ನು ಹೇಗೆ ನೋಡಲಾಗುತ್ತದೆ? ಎಂದು ಕೇಳಿದರು. ಅದಕ್ಕೆ ವಿವೇಕಾನಂದರು  "" ನಿಮ್ಮ ದೇಶದಲ್ಲಿ ಮಹಾರಾಣಿ ಯನ್ನು ಹೇಗೆ ಗೌರವಿಸಲಾಗುತ್ತಿದೆ ಹಾಗೆಯೇ. ನಮ್ಮ ದೇಶದಲ್ಲಿ ಪ್ರತಿಯೊಬ್ಬ ಸ್ತ್ರೀ ಕೂಡ  ಪತ್ನಿಯಲ್ಲಿ,ತಾಯಿಯಲ್ಲಿ , ಮಹಾರಾಣಿಯನ್ನು ಕಾಣಲಾಗುತ್ತಿದೆ ಎಂದು ಉತ್ತರಿಸಿದರು.


ಅವರ ಆಕರ್ಷಕ ವ್ಯಕ್ತಿತ್ವ  ನೋಡಿ ಒಬ್ಬ ಯುವತಿ ನಿಮ್ಮಿಂದ  ನಿಮ್ಮಂತಹ ಮಗುವನ್ನು ಪಡೆಯ ಬಯಸುತ್ತೇನೆ. ಎಂದು  ಕೇಳಿದಾಗ ನನ್ನನ್ನು ನಿನ್ನ  ಮಗನೆಂದು ತಿಳಿದುಕೋ ಎಂದು ಉತ್ತರಿಸಿದರು.


ಒಮ್ಮೆ ಅವರನ್ನು  ಹಾಸ್ಯ ಮಾಡಲು ಕೆಳಗೆ ಭಗವದ್ಗೀತೆಯನ್ನು ಇಟ್ಟು ಮೇಲೆ ಉಳಿದ ಧರ್ಮ ಗ್ರಂಥಗಳನ್ನು ಇಟ್ಟು ನಿಮ್ಮ  ಭಗವದ್ಗೀತೆ ಕೆಳಗೆ ಇದೆ ಎಂದು ಚುಚ್ಚಿದಾಗ ವಿವೇಕಾನಂದರು ನಮ್ಮ ಭಗವದ್ಗೀತೆಯನ್ನು ತೆಗೆದರೆ ಉಳಿದ ಎಲ್ಲ ಗ್ರಂಥಗಳು ಬೀಳುತ್ತವೆ ಎಂದು ಸರಿಯಾಗಿ ಪ್ರತ್ಯುತ್ತರ ನೀಡಿದರು.


ಆಗ  ಸ್ವಾಂತಂತ್ರ್ಯ ಚಳುವಳಿ ನಡೆಯುತ್ತಿತ್ತು ಆಗ ಹೋರಾಟಗಾರರಿಗೆ ಸ್ವಾಮಿ ವಿವೇಕನಂದರ ಭಾಷಣಗಳು ಸ್ಪೂರ್ತಿಯನ್ನು ತುಂಬಿದ್ದವು. ಪರಮಹಂಸರ ಮರಣಾನಂತರ ರಾಮಕೃಷ್ಣ ಮಿಷನ್ ಸಂಸ್ಥೆ ಸ್ಥಾಪಿಸಿ ತಮ್ಮ ಜೀವನವನ್ನು ದೀನ ದಲಿತರ ಸೇವೆಗೆ ಮುಡಿಪಾಗಿಟ್ಟರು. ರಾಮಕೃಷ್ಣ ಮಿಷನ್ ಈಗಲೂ ಸಮಾಜ ಸೇವೆಗೆ ತನ್ನನ್ನು ಅರ್ಪಿಸಿಕೊಂಡಿದೆ.


ಜುಲೈ 4,1902 ರಂದು ನಿಧನರಾದ ವಿವೇಕಾನಂದರು ಹೇಳಿದ್ದು ""Arise,Awake, not Stop till you reach the goal"" ಎಂದು  ಮಲಗಿದ್ದ ಭಾರತೀಯರನ್ನು ಬಡಿದೆಬ್ಬಿಸಿ ಭಾರತ ದೇಶದ ಒಬ್ಬ ಶತಮಾನದ ವೀರ ಸನ್ಯಾಸಿಯನ್ನು ಸ್ಮರಿಸೋಣ. 


-ಗಾಯತ್ರಿ ಸುಂಕದ ಬದಾಮಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top