ಶ್ರೀ ಗಾಯಿತ್ರಿ ಪರಿವಾರದ ಆಶ್ರಯದಲ್ಲಿ ಬನದ ಹುಣ್ಣಿಮೆ ಅಂಗವಾಗಿ ಸಾಮೂಹಿಕ ಶ್ರೀ ಗಾಯತ್ರಿ ಪೂಜೆ ಹಾಗೂ ಉಪಾಸನೆ ಕಾರ್ಯಕ್ರಮ
ದಾವಣಗೆರೆ: ನಗರದ ಶ್ರೀ ಗಾಯತ್ರಿ ದೇವಿಯ ಉಪಾಸಕರ ಕ್ರಿಯಾತ್ಮಕ ಆಧ್ಯಾತ್ಮ ಸಂಸ್ಥೆ ಗಾಯತ್ರಿ ಪರಿವಾರದಿಂದ ಪ್ರತೀ ತಿಂಗಳ ಹುಣ್ಣಿಮೆಯಂದು ನಡೆಸುವ ಸಾಮೂಹಿಕ ಗಾಯತ್ರಿ ಪೂಜೆ, ಉಪಾಸನೆ, ಬನದ ಹುಣ್ಣಿಮೆ ಅಂಗವಾಗಿ ಜ.12ರಂದು ಸೋಮವಾರ ಬೆಳಿಗ್ಗೆ7-00ಕ್ಕೆ ನಡೆಯಲಿದೆ ಎಂದು ಶ್ರೀ ಗಾಯಿತ್ರಿ ಪರಿವಾರದ ಅಧ್ಯಕ್ಷ ಡಾ. ರಮೇಶ್ ಪಟೇಲ್ ತಿಳಿಸಿದ್ದಾರೆ.
ನಗರದ ಜಯದೇವ ವೃತ್ತದಲ್ಲಿರುವ ಶ್ರೀ ಶಂಕರಮಠದಲ್ಲಿ ನಡೆಯಲಿರುವ ಈ ಅಪ್ಪಟ ಆಧ್ಯಾತ್ಮ ಸಮಾರಂಭದ ಈ ಬಾರಿಯ ಪೂಜಾ ಸೇವಾಕರ್ತರು ಪರಿವಾರದ ಸಂಚಾಲಕ ವಿ. ವೀರಭದ್ರಪ್ಪ ಮತ್ತು ಕುಟುಂಬದವರು. ಕಳೆದ 25 ವರ್ಷಗಳಿಂದಲೂ ನಿರಂತರವಾಗಿ ಪ್ರತೀ ಪೂರ್ಣಿಮೆ ಯಂದು ನಡೆಯುವ ಈ ಧಾರ್ಮಿಕ ಪ್ರಕ್ರಿಯೆಯಲ್ಲಿ ಆಸಕ್ತ ಸಾರ್ವಜನಿಕರು ಯಾವುದೇ ಜಾತಿ, ಮತ, ವರ್ಣ, ಲಿಂಗ ಬೇಧವಿಲ್ಲದೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ಪರಿವಾರದ ಪ್ರಧಾನ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್ ಶೆಣೈ ವಿನಂತಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ