ಕಾಸರಗೋಡು: ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದಲ್ಲಿ ಕಿರು ಷಷ್ಠಿ ಉತ್ಸವ ಸಂಪನ್ನವಾಯಿತು. ಮೂಡುಮನೆ ಸುಬ್ರಾಯ ಬಳ್ಳುಳ್ಳಾಯ ಮತ್ತು ಮನೆಯವರ ವತಿಯಿಂದ ಷಷ್ಠಿ ಸೇವೆಯು ಜರಗಿತು.
ಸಮಾರಂಭದ ಅಂಗವಾಗಿ ಭಕ್ತರಿಂದ ತುಲಾಭಾರ ಸೇವೆ ಮಾಡಲಾಯಿತು. ಈ ಸಂದರ್ಭದಲ್ಲಿ ಹರಿದಾಸ ಶೇಣಿ ಮುರಳಿ ಅವರಿಂದ ಹರಿಕಥಾ ಕಾಲಕ್ಷೇಪ ಜರಗಿತು.
ಹಾರ್ಮೋನಿಯಂನಲ್ಲಿ ಅಕ್ಷಯ ಭಟ್ ಪಟ್ಲ, ಹರ್ಷಿತಾ ಭಟ್, ತಬಲದಲ್ಲಿ ಲಕ್ಷ್ಮೀಶ ಬೊಳುಂಬು ಇವರು ಸಹಕಲಾವಿದರಾಗಿ ಸಹಕರಿಸಿದರು. ಗೋವಿಂದ ಬಳ್ಳಮೂಲೆ ನಿರೂಪಣೆ ಮಾಡಿದರು. ಸೀತಾರಾಮ ಬಳ್ಳುಳ್ಳಾಯ ಅವರು ಕಲಾವಿದರನ್ನು ಶಾಲು ಹೊದೆಸಿ ಪ್ರಸಾದವನ್ನಿತ್ತು ಗೌರವಿಸಿದರು. ಮಧ್ಯಾಹ್ನ ಪೂಜೆ, ಪ್ರಸಾದ ಭೋಜನ ಜರಗಿದವು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ