ಮತ್ತೆ ಬಂದಿದೆ ಸಂಕ್ರಾಂತಿ. ವರ್ಷದ ಆರಂಭದಲ್ಲಿ ಬರುವ ಸುಗ್ಗಿಯ ಹಬ್ಬ ರೈತ ವರ್ಷವಿಡೀ ದುಡಿದು ಭೂಮಿಯನ್ನು ಹದಗೊಳಿಸಿ ಶ್ರಾವಣ ಮಾಸದಲ್ಲಿ ಉತ್ತಿ ಬಿತ್ತಿ, ಪುಷ್ಯ ಮಾಸದಲ್ಲಿ ಬರುವ ಮಕರ ಸಂಕ್ರಾಂತಿ ಹೊತ್ತಿಗೆ ಬೆಳೆ ಬೆಳೆದು ಕೊಯ್ಲಿಗೆ ಸಿದ್ಧವಾಗಿರುತ್ತದೆ.
ಕಬ್ಬು ಬಾಳೆ ಇನ್ನಿತರ ಬೆಳೆಗಳು ಕೂಡ ಬೆಳೆದು ರಾಶಿ ಮಾಡಿ ಮನೆಗೆ ತರುತ್ತಾರೆ. ಮನೆಗೆ ಬಂದ ರಾಶಿಯನ್ನು ಇದರ ಜೊತೆಗೆ ಇನ್ನಷ್ಟು ಸಾಮಾನುಗಳನ್ನು ಸೇರಿಸಿ ಮೊರದಲ್ಲಿ ಹಾಕಿ ತುಂಬಿಸಿ ಮುತ್ತೈದೆಯರಿಗೆ ಉಡಿ ತುಂಬಿ ಆಶೀರ್ವಾದ ಬೇಡುತ್ತಾರೆ.
ಮೊರದಲ್ಲಿಅರಿಶಿನ ಕುಂಕುಮ, ಅಕ್ಕಿ ಹೆಸರುಬೇಳೆ, ಕಡಲೆಬೇಳೆ, ಬೆಲ್ಲ, ಸೆಜ್ಜಿ ಹಿಟ್ಟು, ಗೋದಿ ಹಿಟ್ಟು, ಅಕ್ಕಿ, ಹುಣಸೆಹಣ್ಣು, ಗಜ್ಜರಿ, ಬದನೇಕಾಯಿ, ಈರುಳ್ಳಿಹೂವು, ಎಳ್ಳು ಬೆಲ್ಲ, ಬೆಣ್ಣೆ ತುಪ್ಪ, ಸೀಗೆಕಾಯಿ ಕೊಬ್ಬರಿ ಎಣ್ಣೆ ಮುಂತಾದ ಪದಾರ್ಥ ತುಂಬಿಸಿ ಅದರೊಂದಿಗೆ ಖಣ, ತೆಂಗಿನಕಾಯಿ ಬಳೆ ಎಲ್ಲವನ್ನೂ ಉಡಿ ತುಂಬಿ ಮೊರದಲ್ಲಿ ಬಾಗಿಣ ಕೊಡುತ್ತಾರೆ.
ಮಾಂಗಲ್ಯ ಭಾಗ್ಯ ಸದಾ ಇರಲೆಂದು ಸುಗ್ಗಿಯ ಕಾಲ ಶುಭಕಾಲವಾಗಲಿ ಎಂದು ಹಾರೈಸುತ್ತಾರೆ. ಮುತ್ತೈದೆಯರಿಗೆ ನಮಸ್ಕರಿಸಿ ಆಶೀರ್ವಾದ ಬೇಡುತ್ತಾರೆ.
ಮಕರ ಸಂಕ್ರಾಂತಿಯಂದು ಎಳ್ಳು ಬೆಲ್ಲದ ಜೊತೆಗೆ ಯಾವುದಾದರು ವಿಶೇಷ ಭಕ್ಷ್ಯ ತಯಾರಿಸಿ ದೇವರ ಪೂಜೆ ಮಾಡಿ ಊಟ ಮಾಡಿ, ಸಂಜೆಗೆ ಮಂದಿರಗಳಿಗೆ ಹೋಗಿ ದೇವರ ದರ್ಶನ ಪಡೆದು ಆಶೀರ್ವಾದ ಪಡೆದು ಮನೆಯ ಹಿರಿಯರಿಗೆ, ಕಿರಿಯರಿಗೆ, ಸ್ನೇಹಿತರಿಗೆ ಎಲ್ಲ ಎಳ್ಳು ಬೆಲ್ಲ ವಿನಿಮಯ ಮಾಡಿ ಹಬ್ಬ ಆಚರಿಸುತ್ತಾರೆ.
ಎಳ್ಳು ಬೆಲ್ಲದಂಗ ಇರೂಣು ಎನ್ನುತ್ತಾ ಖುಷಿಯಾಗಿ ಹಬ್ಬ ಆಚರಿಸುತ್ತಾರೆ. ಬಾಳಲ್ಲಿ ಸಿಹಿ ಕಹಿ ಏನೇ ಇರಲಿ ಸಮನಾಗಿ ಸ್ವೀಕರಿಸೋಣ ಎಂಬುದೇ ಇದರ ಅರ್ಥ.
ಹೀಗೇ ಮಕರ ಸಂಕ್ರಾಂತಿ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸುತ್ತಾರೆ
- ರೇಖಾ ಮುತಾಲಿಕ್, ಬಾಗಲಕೋಟ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ