ಕಾಸರಗೋಡು: ಬೆಂಗಳೂರಿನ ಅರಮನೆ ಮೈದಾನದಲ್ಲಿ ಡಿಸೆಂಬರ್ 27 ರಿಂದ ಮೂರು ದಿನಗಳ ಕಾಲ ನಡೆಯಲಿರುವ ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಕಾಸರಗೋಡಿನ ಹಿರಿಯ ಸಾಹಿತಿ, ಶಿಕ್ಷಣತಜ್ಞ, ವಿ.ಬಿ. ಕುಳಮರ್ವ ಅವರ ಬಹುಮುಖ ಸಾಧನೆಗಾಗಿ "ಹವ್ಯಕ ಸಾಧಕ ರತ್ನ" ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. "ಹವಿ-ಸವಿ ಕೋಶ" ಎಂಬ ಪ್ರಪ್ರಥಮ ಹವ್ಯಕ-ಕನ್ನಡ ನಿಘಂಟನ್ನು ರಚಿಸಿದ ಇವರು ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನದ ಪ್ರಧಾನ ಗೋಷ್ಠಿಯೊಂದರ ಅಧ್ಯಕ್ಷ ಸ್ಥಾನದ ಗೌರವಕ್ಕೂ ಪಾತ್ರರಾಗಿದ್ದರು. ಸಾಹಿತ್ಯ ಹಾಗೂ ಶಿಕ್ಷಣದಲ್ಲಿ ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಯೆನಿಸಿ ಬಹುಶ್ರುತ ವಿದ್ವಾಂಸರಾದ ಇವರನ್ನು ಕಾಸರಗೋಡಿನ ಕನ್ನಡ ಬಂಧುಗಳು ಅಭಿನಂದಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ