ಪುತ್ತೂರು: ವಿವೇಕಾನಂದ ಕಲಾ ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜು, (ಸ್ವಾಯತ್ತ) ಪುತ್ತೂರು, ನವದೆಹಲಿಯ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ ಆಫ್ ಇಂಡಿಯಾ ಜೊತೆಗೆ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ, ಡಾಕ್ಟರ್ ಶ್ರೀಪತಿ ಕಲ್ಲೂರಾಯ, “ಈ ಮೆಮೊರಾಂಡಮ್‍ನಿಂದ ಎರಡೂ ಸಂಸ್ಥೆಯ ಸಿಬ್ಬಂದಿಗಳ ನಡುವಿನ ಸಂಬಂಧ ಅಭಿವೃದ್ಧಿ ಹೊಂದಲಿದೆ” ಎಂದರು.
“ಉಪನ್ಯಾಸಕರ ವಿನಿಮಯ, ಉಪನ್ಯಾಸಕರ ಜ್ಞಾನಾಭಿವೃದ್ಧಿ ಕಾರ್ಯಕ್ರಮ, ಜಂಟಿ ಅಧ್ಯಯನ ಕಾರ್ಯಕ್ರಮಗಳು, ಸರ್ಟಿಫಿಕೇಟ್ ಕೋರ್ಸ್, ಶೈಕ್ಷಣಿಕ ಪ್ರಕಟಣೆಗಳು ಸೇರಿದಂತೆ ಹತ್ತಾರು ಕಾರ್ಯಕ್ರಮಗಳ ಆಯೋಜನೆಗೆ ಅನುಕೂಲವಾಗಲಿದೆ. "ಇದರೊಂದಿಗೆ ಕಾರ್ಯಾಗಾರ, ಸಮ್ಮೇಳನ ಹಾಗೂ ಸೆಮಿನಾರ್‍ಗಳ ಜಂಟಿ ಆಯೋಜನೆಗೂ ಅನುಕೂಲವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಕಾಲೇಜಿನ ಸಂಚಾಲಕ, ಮುರುಳಿಕೃಷ್ಣ ಕೆ.ಎನ್, ಕಾಲೇಜಿನ ವಾಣಿಜ್ಯ ವಿಭಾಗದ ಡೀನ್, ಡಾ. ರವಿಕಲಾ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ