ಹಾಸನ: ಮೇಘ ಮೈತ್ರಿ ಕನ್ನಡ ಸಾಹಿತ್ಯ ಸಂಘ (ರಿ) ಹಾಗೂ ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ (ರಿ) ಬೆಂಗಳೂರು ಅಕ್ಕಮಹಾದೇವಿ ಸಭಾಂಗಣ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರಿನಲ್ಲಿ 69ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಕರ್ನಾಟಕ ರಾಜ್ಯ ವಕೀಲರ ಸಾಹಿತ್ಯ ಸಮ್ಮೇಳನ 2024 ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜಿಸಿತ್ತು.
ಕಾರ್ಯಕ್ರಮದಲ್ಲಿ ಹಾಸನ ನಗರದ ಲೇಖಕಿ ಶ್ರೀಮತಿ ಹೆಚ್.ಎಸ್. ಪ್ರತಿಮಾ ಹಾಸನ್ ರವರಿಗೆ ಸಾಮಾಜಿಕ,' ಸಾಹಿತ್ಯ ಕ್ಷೇತ್ರ' ಶೈಕ್ಷಣಿಕ ಕ್ಷೇತ್ರಕ್ಕೆ ರಾಜ್ಯಮಟ್ಟದ 'ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ' ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಪ್ರತಿಮಾವಲೋಕನ (ಕೃತಿ ವಿಮರ್ಶನಾ ಲೋಕದಲ್ಲೊಂದು ಪಯಣ) ಕೃತಿಯನ್ನು ಬೆಂಗಳೂರು ನಗರ ಜಿಲ್ಲೆ ಕಸಾಪ ಅಧ್ಯಕ್ಷ ಎಂ ಪ್ರಕಾಶಮೂರ್ತಿ ಬಿಡುಗಡೆಯನ್ನು ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ನೂ ಹೆಚ್ಚು ಹೆಚ್ಚು ಕೃತಿಗಳು ಇವರಿಂದ ಸಾಹಿತ್ಯ ಲೋಕಕ್ಕೆ ಹೊರಹೊಮ್ಮಲೆಂದು ಆಶಿಸುತ್ತೇನೆ. ಬಹುಮುಖ ಪ್ರತಿಭೆಯಾಗಿರುವ ಇವರಿಗೆ ಶುಭವಾಗಲಿ ಎಂದು ಹಾರೈಸಿದರು.
ಕೃತಿಗಳನ್ನು ಓದಿದ ನಂತರದ ವಿಮರ್ಶಾ ರೀತಿಯ ಬರಹಗಳ ಸಂಕಲನ ಇದಾಗಿದೆ. ಕೃತಿಯಲ್ಲಿರುವ ಲೇಖನಗಳು ಈಗಾಗಲೇ ಬಿಡಿಬಿಡಿಯಾಗಿ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಈ ಕೃತಿಯಲ್ಲಿ ಒಟ್ಟು 35 ಕೃತಿಗಳ ಅವಲೋಕನಗಳಿವೆ. ವಿಭಿನ್ನವಾಗಿ ಅವರ ಹೆಸರಿನ ಜೋಡಣೆಯಲ್ಲಿ ಅವಲೋಕನದ ಹೆಸರು ಬಂದಿರುವುದು ವಿಶೇಷತೆಯಾಗಿದೆ. ಕೃತಿಯ ವಿಮರ್ಶೆಗಳು ಉತ್ತಮವಾಗಿ ಹೊರಬಂದಿದೆ. ಕೃತಿ ಬಗ್ಗೆ ತಿಳಿಯಬೇಕಾದರೆ ಕೃತಿಯನ್ನು ಓದಬೇಕು. ಲೇಖಕಿಯ 10ನೇ ಕೃತಿ ಇದಾಗಿದೆ.
ನಂತರ ಇವರ ಎಲ್ಲ ಕ್ಷೇತ್ರದ ಸಾಧನೆಗೆ ಪ್ರತಿಮಾ ಹಾಸನ್ ರವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಮ್ಮೇಳನ ಸರ್ವಾಧ್ಯಕ್ಷ ನಂಜಪ್ಪ ಕಾಳೇಗೌಡ ವಕೀಲರು, ಸಂಸ್ಕೃತಿ ಚಿಂತಕ ಪ್ರಕಾಶ್ ವಸ್ತ್ರದ, ಮೇಘ ಮೈತ್ರಿ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಸಿ.ಎಂ. ರಮೇಶ ಕಮತಗಿ, ಹಾಗೂ ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಡಾ. ಶಿವಣ್ಣ ಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ