ಖಾರ ಮಸಾಲೆ: 'ಡ್ರಾಮಾ ಸೀನಿಯರ್ಸ್... ಸರಿಗಮಪ'

Upayuktha
0


'ಏನಪಾ ಡುಮ್ಯಾ, ಏನ ಅಂತತಿ ಹಿಂಹುಲಿ?' ಕೇಳಿದ ಕಾಳ್ಯಾ

'ಹಿಂಹುಲಿ 'ಅಸಂತೋಸ'ದಿಂದ ಅಬ್ಬರಸ್ಲಿಕ್ಕೆ ಹತ್ತೇತಿ' ಎಂದ ಡುಮ್ಯಾ

'ಯಾಕ? ವಕ್ಖ ವಕ್ಖ ಅಂತಿತ್ತಲಾ?' ಕೇಳಿದಳು ರಾಶಿ


'ಏ ನಾ ಯಾರಿಗೂ ಅಂಜು ಮಗಾ ಅಲ್ಲಾ, ತಿಳಕೋರಿ ನೀವು ಜರಾ ತಿಳ್ಕೋರಿ' ಅಂತ ಹಿಂಹುಲಿ ಅಬ್ಬರಸೇತಿ' ಎಂದ ಡುಮ್ಯಾ

'ಮತ್ತs ಸಿಟ್ಟೂರಪ್ಪ ಮತ್ತ ಅವ್ನ ಮರಿ ಮ್ಯಾಗ ಹರಿಹಾಯಕತ್ತೇತೇನೂ?' ಕೇಳಿದ ಕಾಳ್ಯಾ

'ಇನ್ನಾ ಕಣಿ ಕೇಳಿ ಬಾ ನೀ! ಅಲ್ಲಾ ಚಳಿ ಮುಗಿದ್ರಾಗೇ ಇವರ ಚಳಿ ಬಿಡಸ್ತೇನಿ ಅಂತ ಅಬ್ಬರಸೇತಿ ಹುಲಿ' ಎಂದ ಡುಮ್ಯಾ

'ಅದು ಹುಲಿ ಅಲ್ಲ ಇಲಿ ಐತಿ ಅಂತ ರೇಣಪ್ಪ ಹೇಳ್ಯಾನಲಾ?' ಕೇಳಿದಳು ರಾಶಿ


'ಅದ್ಕs ಹುಲಿ ಏನಂದೈತಿ ಗೊತ್ತತೇನು? ಲಪುಟರ ಬಗ್ಗೆ ನಾ ರಿಯಾಕ್ಸನ್ ಕೊಡಂಗಿಲ್ಲ ಅಂತ ಹೇಳೇತಿ' ಎಂದ ಡುಮ್ಯಾ

'ಮತ್ತ ದಾವಣಗೇರೆ ಬೆಣ್ಣೆ ಸಮಾವೇಶ ಭಾರಿ ಆಕೈತಿ ಅಂದಾನು ರೇಣಪ್ಪ' ಎಂದ ಕಾಳ್ಯಾ

'ಮೊದ್ಲ ದಿಲ್ಲ್ಯಾಗ ಕುಚಪೂಡಿ ಆಕೈತಿ, ಆಮ್ಯಾಗ ದಾವಣಗೇರಿ ನಿರ್ಧಾರ ಆಕೈತಿ' ಎಂದಳು ರಾಶಿ

'ಮತ್ತs ಹಾಸನದ್ದು ಕುಸ್ತಿ ಅದು ಬ್ಯಾರೆ ಏನು?' ಕೇಳಿದ ಕಾಳ್ಯಾ


'ಅದು ಟಗರು ಪಲ್ಯಾ, ಬಂಡೆ ಕೆತ್ತನೆ, ಪರಮಾತ್ಮರಿಗೆ ಸಂಬಂಧಿಸಿದ್ದು' ಎಂದ ಡುಮ್ಯಾ

'ಅಂದ್ರs ಇದು ಬ್ಯಾರೇನೇ ಅದೂ ಬ್ಯಾರೇನೇ ಅಂದಂಗಾತು' ಎಂದಳು ರಾಶಿ

'ಎಲ್ಲಾ ಕುರ್ಚಿಗಿ ಸಂಬಂಧಿಸಿದ್ದೇ! ಆದ್ರs ವೇರೈಟಿ ಬ್ಯಾರೆ ಬ್ಯಾರೆ ಅಷ್ಟೇ!' ಎಂದು ನಕ್ಕ ಡುಮ್ಯಾ

'ಭಾಳ ಭಾರಿ ಐತಿ ಬಿಡು ನಿಂದೂ ತೆಲಿ! ಯಾರ ಬಳಿ ಟ್ರೇನಿಂಗ್ ತೊಗೊಂಡಿ?' ಕೇಳಿದ ಕಾಳ್ಯಾ

'ನಾ 'ಅಸಂತರಾ ಅಸಂತೋಸ 'ಬಳಿ ಟ್ರೇನಿಂಗ್ ತಗೊಂಡಿನಿ ತಿಳಿತಾ?' ಕೇಳಿದ ಡುಮ್ಯಾ

'ಆದ್ರs ..... ಬಂಡೆ ಮತ್ತs ಟಗರು ತಾವು ತಾವೇ ಡಿಸೈಡ್ ಮಾಡಂಗಿದ್ರs ಮತ್ತ ನಾವೆಲ್ಲಾ ಯಾಕ ಬೇಕು? ಅಂತ ಪರಮಾತ್ಮ ಗುಡಿಗೇತಿ' ಎಂದ ಕಾಳ್ಯಾ


'ಆದ್ರೂ ಸ್ವಾಭಿಮಾನಿ ಅಂತ ಇದ್ದದ್ದನ್ನು ತೆಗೆದು ಜನಕಲ್ಯಾಣ ಸಮಾವೇಶ ಅಂತ ಮಾಡಿ ಬಂಡೆ ಮುಡಾ ಕ್ಯಾಂಡಿಡೇಟಗ ಗುಮ್ಮೇತಿ' ಎಂದ ರಬಡ್ಯಾ

'ನಮ್ಮ ನಮ್ಮಲ್ಲಿ ಮಾತುಕತೆ ಆಗ್ಯಾವು, ಕೆಲವೊಂದನ್ನು ಈಗೇ ಹೇಳಾಕ ಆಗೂದಿಲ್ಲ, ಅವುನ್ನ ಟೈಮ್ ಬಂದಾಗ ಹಂ ಬೋಲ್ತೆ' ಅಂತ ಬಂಡೆ ಗುಡುಗೈತಲಾ?' ಎಂದ ಬಾಶಾ


'ಏ ಯಾವ ಮಾತಿಲ್ಲ ಕಥಿ ಇಲ್ಲ, ಐದು ವರ್ಷ ನಾನೇ ಸಿಎಂ! ಅಂತ ಟಗರು ಗುಮ್ಮೇತಿ ಬಂಡೆಗ' ಎಂದ ಕಾಳ್ಯಾ

'ಹಂಗಿದ್ರs ಅದೇ ಕರೇಕ್ಟ! ಅಂತ ಬಂಡೆ ಓಕೆ ಅಂದೈತಿ' ಎಂದಳು ರಾಣಿ

'ಆದ್ರs ಸುಮ್ಮನೇ ಕೂಡೂ ಪೈಕಿ ಅಲ್ಲ ಈ ಬಂಡೆ, ಯಾವಾಗ ತಲಿ ಮ್ಯಾಲ ಚಪ್ಪಡಿ ಎಳಿತೈತಿ ಗೊತ್ತಿಲ್ಲ' ಎಂದ ಕಾಕಾ

'ಅರೇ,ಅದು 'ಹಾವಿನ ದ್ವೇಷ ಹನ್ನೇರಡು ವರುಷ ನನ್ನ ರೋಷ ನೂರು ವರುಷ' ಅಂತೈತಿ, ಮತ್ತ ಹಂಗೇ ಮಾಡತೈತಿ' ಎಂದ ಡುಮ್ಯಾ

'ಮತ್ತs ಬೊಂಬೆಪಟ್ನದಾಗ ಮೊನ್ನೆ ಸೇಡು ತೀರಿಸಿಕೊಳ್ಳಲ್ಲೇನು?' ಕೇಳಿದ ಟುಮ್ಯಾ


'ಯಾರದು?' ಕೇಳಿದಳು ರಾಶಿ

'ಅದೇ ಮರಿಬಂಡೆ ಮಖಾಡೆ ಮಲಗಿತ್ತಲ್ಲ ಎಂಪಿ ಎಲೆಕ್ಷನ್ದಾಗ? ಅದ್ನ ಬಡ್ಡಿ ಸಮೇತ ತೀರಿಸಿಕೊಂಡ್ತು ನೋಡು' ಎಂದು ನಕ್ಕ ಟುಮ್ಯಾ

'ಇಲ್ಲಿ 'ಕೈ'ದಾಗ ಸಮಸ್ಯೆ ಆದ್ರs ಅದ್ನ ಬಗಿಹರ್ಸಲಿಕ್ಕೆ ಬಂಡೆ ಬೇಕು! ಆದ್ರs ನಿರಾಯಾಸವಾಗಿ ಅದರ ಫಲ ಉಣತೈತಿ ಟಗರು! ಹ್ಯಾಂಗೈತೆ ಇದು?' ಕೇಳಿದ ಕಾಳ್ಯಾ


'ಸಿಂಹಾಸನ ನಂಗ ಇರ್ಲಿ, ಸಮಸ್ಯಾಸನಾ ನಿಂಗ ಇರಲಿ ಅಂತ ಬಂಡೆಕ್ಕ ಹೇಳತೈತಿ ಟಗರು!' ಎಂದಳು ರಾಣಿ

'ಆದ್ರೂನೂ ಸ್ಕೆಚ್ ಹಾಕೊಂಡು ಕುಂತಿರತೈತಿ ಬಂಡೆ, ಅಷ್ಟ ಹಗರ ತಿಳಿಬ್ಯಾಡ ನೀ!' ಎಂದ ಟುಮ್ಯಾ

'ಮತ್ತs ಹಿಂಹುಲಿ ಡೆಲ್ಲಿಗಿ ಹೋಗಿ ಅಲ್ಲಿ ಮುಖಂಡರಿಗೆ ಭೇಟಿ ಆದ ಮ್ಯಾಗ, ಸಿಟ್ಟೂರಿ ಬಗ್ಗೆ ಸಾಫ್ಟ್ ಕಾರ್ನರ್ ತಾಳೇತಿ!' ಎಂದ ಡುಮ್ಯಾ

'ಈಗ ಗೋಕಾಕ ಕರದಂಟು ಗರಂ ಆಗೇತಿ ಮರಿಸಿಟ್ಟೂರಿ ಮ್ಯಾಗ' ಎಂದ ರಬಡ್ಯಾ


'ಏನಂದೈತಿ ಮರಿಗೆ?' ಕೇಳಿದ ಕಾಕಾ

'ಏ ಮರಿಗೇ ಸ್ವಂತ ವ್ಯಕ್ತಿತ್ವನೇ ಇಲ್ಲ, ಸುಮ್ನ ಅವರಪ್ಪನ ಹೆಸರು ಹೇಳಿಕೊಂಡು ಓಡ್ಯಾಡತೈತಿ, ಅದ್ನs ಕೆಳಗೆ ಇಳಿಸೇ ಬಿಡ್ತಿವಿ ಅಂತ ಅಂದತಿ' ಎಂದ ರಬಡ್ಯಾ

'ಈಗ ಮರಿ ವಕ್ಖ ವಕ್ಖ ಅಂತ ಮೆರವಣಿಗಿ ಶುರು ಮಾಡೇತಿ' ಎಂದ ಕಾಳ್ಯಾ

'ಮತ್ತ ಆ ಹಿಂದುಲಿ ಗುತ್ನಾಳ ಟೀಂ ಮಾಡ್ಯಾರ ಈಗ ಹ್ಯಾಂಗ ಬಿಡ್ಲಿಕ್ಕೆ ಬರತೈತಿ? ಅದಕ್ಕ ಆ ಕಿಸ್ಕಿಂಗ್ನ್ನ ತಗೊಂಡು ಹೊಂಟೈತಿ' ಎಂದ ಟುಮ್ಯಾ

'ಆ ಹಿಂದುಲಿ ಬೈಯ್ಯುದು ಕೇಳಿ ಕೇಳಿ ನಿಶ್ಯಕ್ತ ಆಗಿ ಸಿಟ್ಯೂರಪ್ಪನೂ ಅವರಿಗೆ ಕುಂತು ಬಗಿಹರಸಿಕೊಳ್ಳಾಣ ಬರ್ರೋ ಅಂತ ಕರದೈತಿ' ಎಂದು ನಕ್ಕಳು ರಾಣಿ


' ಅಂದ್ರs ಹಿಂಹುಲಿ ನೆಕ್ಸ್ಟ ಸಿಎಂ ಏನು?' ಕೇಳಿದಳು ರಾಶಿ

'ಅದನ್ನ ನಮ್ಮ ಶಾ ಅಣ್ಣ ಮತ್ತs ಭಾಯಿಯೋ ಔರ್ ಬೆಹನೋ ನಿರ್ಧಾರ ಮಾಡ್ತಾರು' ಡುಮ್ಯಾ ಹೇಳ್ದ

' ಗ್ಯಾರಂಟಿ ಹಾಸನ'ದ್ದೂ ಮುಗಿತಲ್ಲ, ಗೌಡ್ರಿಗೇ ಟಗರು ನಂಬರ ಮ್ಯಾಗ ತಗೊಂಡತಿ ನೋಡು' ಅಂತಂದ ಕಾಳ್ಯಾ

'ಏ ಟಗರಿಗಿ ಭಾಳ ಸೊಕ್ಕ ಬಂದೈತಿ ಇಳಸ್ರಿ ಅದ್ನ ಕೆಳಗ' ಅಂತ ಗೌಡ್ರು ಗುಡುಗಿದ್ರಲಾ, ಅದಕ್ಕ ಭಾಳ ಸಿಟ್ಟಿಗೆದ್ದಿತ್ತು ಟಗರು' ಎಂದ ಟುಮ್ಯಾ

'ನೆಕ್ಸ್ಟ ಎಲ್ಲಿ  ಟೂರಿಂಗ್ ಸಮಾವೇಶ ?' ಕೇಳಿದ ಡುಮ್ಯಾ

ಇದನ್ನ ಕೇಳಿ ಎಲ್ಲಾರೂ ಗಾಭರಿಯಾಗಿ ಅವನನ್ನ ನೋಡೂದಕ್ಕೂ,

'ಅಸಂತೋಸ ಮಾರಾಜ ಕೀ ಜೈ' ಅಂತ ಕರದಂಟು ಒದರುದಕ್ಕೂನೂ ಸರಿ ಹೋಯ್ತು!


- ಶ್ರೀನಿವಾಸ ಜಾಲವಾದಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top