ಸುರತ್ಕಲ್: ಬದುಕಿನ ಔನ್ನತ್ಯಕ್ಕೆ ಗುರು ಹಿರಿಯರ ಮಾರ್ಗದರ್ಶನ ಪ್ರೇರಣೆಯೇ ಕಾರಣ. ಸಂಸ್ಕೃತಿ, ಸಂಸ್ಕಾರಗಳನ್ನು ಕಲಿಸಿಕೊಟ್ಟು ಬದುಕುರೂಪಿಸುವ ಶಿಕ್ಷಣ ಸಂಸ್ಥೆಗಳ ಮೇಲೆ ಅಭಿಮಾನವಿರಿಸಿ ಕೊಂಡು ಬೆಂಬಲಿಸಬೇಕು ಎಂದು ಕೊಡುಗೈ ದಾನಿ ಹಾಗೂ ವಿದ್ಯಾದಾಯಿನೀ ಶಿಕ್ಷಣ ಸಂಸ್ಥೆಗಳ ಹಳೆ ವಿದ್ಯಾರ್ಥಿ, ಉದ್ಯಮಿ ಮುಂಬೈ ವಿನೀತ್ ಪ್ರೆಶಿಯಸ್ ಕ್ಯಾಟಲಿಸ್ಟ್ ಪ್ರೈ. ಲಿ. ಸ್ಥಾಪಕ ವಿಶ್ವನಾಥ.ಪಿ.ಶೆಟ್ಟಿ ನುಡಿದರು.
ಅವರು ಸುರತ್ಕಲ್‍ನ ಹಿಂದು ವಿದ್ಯಾದಾಯಿನೀ ಸಂಘ (ರಿ) ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸಮ್ಮಾನ ಸ್ವೀಕರಿಸಿ ಮಾತನಾಡಿದರು.
ಹಿಂದು ವಿದ್ಯಾದಾಯಿನೀ ಸಂಘದ ವತಿಯಿಂದ ಕೊಡುಗೈ ದಾನಿ ವಿಶ್ವನಾಥ ಪಿ.ಶೆಟ್ಟಿ ಹಾಗೂ ವಿನಯ ವಿ.ಶೆಟ್ಟಿಯವರನ್ನು ಸ್ವರ್ಣ ಪದಕ ಮತ್ತು ಸ್ಮರಣಿಕೆಗಳನ್ನು ನೀಡಿ ಭಾವಪೂರ್ಣವಾಗಿ ಅಭಿನಂದಿಸಲಾಯಿತು.
ಮುಖ್ಯ ಅತಿಥಿ ಭಾರತ ಸರಕಾರದ ಪರಿಸರ ಮತ್ತು ಮಾಲಿನ್ಯ ಸಚಿವಾಲಯದ ನಿವೃತ್ತ ನಿರ್ದೇಶಕ ಹಾಗೂ ಜಿ.ವಿ.ಕೆ. ಗ್ರೂಪ್‍ನ ನಿರ್ವಾಹಕ ನಿರ್ದೇಶಕ ಡಾ.ನರೇಂದ್ರ ಹತ್ವಾರ್ ಹೊಸಬೆಟ್ಟು ಮಾತನಾಡಿ ಹಿಂದು ವಿದ್ಯಾದಾಯಿನೀ ಸಂಘದ ಆಡಳಿತಕ್ಕೊಳಪಟ್ಟ ಶಿಕ್ಷಣ ಸಂಸ್ಥೆಗಳ ಮೇಲೆ ವಿಶೇಷ ಅಭಿಮಾನವಿರಿಸಿರುವ ವಿಶ್ವನಾಥ ಪಿ.ಶೆಟ್ಟಿ ವಿದ್ಯಾಸಂಸ್ಥೆಗಳ ಅಭಿವೃದ್ಧಿಗೆ ಅನೇಕ ಕೊಡುಗೆಗಳನ್ನು ನೀಡಿ ಎಲ್ಲರಿಗೂ ಆದರ್ಶವಾಗಿದ್ದಾರೆ. ವಿದ್ಯಾ ಸಂಸ್ಥೆಗಳ ಅಭಿವೃದ್ಧಿಗೆ ಹಳೆ ವಿದ್ಯಾರ್ಥಿಗಳಿಂದ ಕೊಡುಗೆಗಳು ನಿರಂತರ ದೊರಕುವಂತಾಗಬೇಕು ಎಂದರು.
ಹಿಂದು ವಿದ್ಯಾದಾಯಿನೀ ಸಂಘದ ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ವಿದ್ಯಾದಾಯಿನೀ ಪ್ರೌಢಶಾಲೆಯ ಸಂಚಾಲಕ ಸುಧಾಕರ ರಾವ್ ಪೇಜಾವರ, ಜೊತೆ ಕೋಶಾಧಿಕಾರಿ ರಮೇಶ್‍ಟಿ.ಎನ್., ನಿಕಟಪೂರ್ವ ಕಾರ್ಯದರ್ಶಿ ಎಂ. ವೆಂಕಟ್ರಾವ್, ಸದಸ್ಯರಾದ ಸತೀಶ್‍ರಾವ್ ಇಡ್ಯಾ, ಹರೀಶ್ ಪೇಜಾವರ ಅಭಿನಂದನಾ ನುಡಿಗಳನ್ನಾಡಿದರು.
ಅಧ್ಯಕ್ಷತೆ ವಹಿಸಿದ್ದ ಹಿಂದು ವಿದ್ಯಾದಾಯಿನೀ ಸಂಘದ ಅಧ್ಯಕ್ಷ ಹೆಚ್.ಜಯಚಂದ್ರ ಹತ್ವಾರ್ ಮಾತನಾಡಿ ವಿಶ್ವನಾಥ ಪಿ. ಶೆಟ್ಟಿಯವರ ಉದಾರ ಮನೋಭಾವ, ಶಾಲಾ ಪ್ರೀತಿ, ಗುರುಭಕ್ತಿ ಸರ್ವರಿಗೂ ಮಾದರಿಯಾಗಿದ್ದು ಅವರು ಸಂಸ್ಥೆಗಳ ಅಭಿವೃದ್ಧಿಗೆ ವಿಶಿಷ್ಟ ಕೊಡುಗೆ ನೀಡಿದ್ದಾರೆ ಎಂದರು.
ಹಿಂದು ವಿದ್ಯಾದಾಯಿನೀ ಸಂಘದ ಕಾರ್ಯದರ್ಶಿ ಶ್ರೀರಂಗ ಹೆಚ್. ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಎಂ.ಜಿ. ರಾಮಚಂದ್ರ ವಂದಿಸಿದರು.ವಿದ್ಯಾದಾಯಿನೀ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿನಯ ಆಚಾರ್ ಅತಿಥಿಗಳನ್ನು ಪರಿಚಯಿಸಿದರು.
ಹಿಂದು ವಿದ್ಯಾದಾಯಿನೀ ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಕೆ. ಹಾಗೂ ಸದಸ್ಯ ಪ್ರೊ. ಟಿ.ಎಸ್. ಶ್ರೀಪೂರ್ಣ ಅಭಿನಂದನಾ ಪತ್ರಗಳನ್ನು ವಾಚಿಸಿದರು.
ಹಿಂದು ವಿದ್ಯಾದಾಯಿನೀ ಸಂಘದ ಕೋಶಾಧಿಕಾರಿ ಹೆಚ್.ಎಲ್. ರಾವ್, ವಿನಯ ವಿ.ಶೆಟ್ಟಿ, ಆಡಳಿತ ಮಂಡಳಿಯ ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ವಿವಿಧ ಶಿಕ್ಷಣ ಸಂಸ್ಥೆಗಳ ಸಂಚಾಲಕರು ಮತ್ತು ಆಡಳಿತಾತ್ಮಕ ನಿರ್ದೇಶಕರು, ಶಾಲಾ ಕಾಲೇಜುಗಳ ಮುಖ್ಯಸ್ಥರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದದವರು, ಸಾಮಾಜಿಕ ಸೇವಾ ಸಂಸ್ಥೆಗಳ ಪದಾಧಿಕಾರಿಗಳು, ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ವಿಶ್ವನಾಥ ಪಿ.ಶೆಟ್ಟಿ ಹಾಗೂ ವಿನಯ ವಿ. ಶೆಟ್ಟಿಯವರನ್ನು ಸಮ್ಮಾನಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ