ಬಾಗಲಕೋಟೆ: ಜಿಲ್ಲೆಯ ಇಳಕಲ್ ತಾಲೂಕಿನ ಕಂದಗಲ್ ಗ್ರಾಮದ ರೈತರು ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು ಸಮಾಜ ಸೇವಕರಾದ ಪಂಪಣ್ಣ ಸಜ್ಜನ ಇವರ ದ್ವಿತೀಯ ಸುಪುತ್ರ ವಿನೋದಕುಮಾರ ಪಂಪಣ್ಣ ಸಜ್ಜನ ರವರಿಗೆ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಬೆಳಗಾವಿಯ ಡಾ ಪಿ.ಎಂ ಗುರುಬಸವರಾಜ ರವರ ಮಾರ್ಗದರ್ಶನದಲ್ಲಿ ವಿನೋದಕುಮಾರ ಸಜ್ಜನ ಮಂಡಿಸಿದ "ಡಿಸೈನ್ ಸಿಂಥೆಸಿಸ ಅಂಡ್ ಕ್ಯಾರಕ್ಟಾರೈಜೆಶನ್ ಆಫ್ ವೆರಿಯಸ್ ಸ್ಕಿಪ್ ಬೇಸಡ ಕಾಂಪೌಂಡ್ಸ ಫಾರ್ ಬಯೋಮೆಡಿಕಲ್ ಅಪ್ಲಿಕೆಶನ ಅಂಡ್ ದಿಯರ್ ಕಾಂಪಿಟಿಶನಲ್ ಸ್ಟಡಿಸ್ "ಎಂಬ ರಸಾಯನ ಶಾಸ್ತ್ರ ಪ್ರಬಂಧಕ್ಕೆ ಡಾಕ್ಟರೆಟ್ ಪದವಿ ನೀಡಿ ಗೌರಿವಿಸಲಾಗಿದೆ.
ಪದವಿ ಪಡೆದು ಗ್ರಾಮದ ಕೀರ್ತಿಯನ್ನು ಹೆಚ್ಚಿಸಿದ ವಿನೋದಕುಮಾರ ಸಜ್ಜನರವರನ್ನು ಸಾಹಿತಿ ನಾಗೇಶ್ ನಿಲೋಗಲ್ಲ, ಶಿಕ್ಷಣ ಪ್ರೇಮಿ ಸಂಗಣ್ಣ ಹವಾಲ್ದಾರ, ಹೊನ್ನನುಡಿ ದಿನಪತ್ರಿಕೆ ಸಂಪಾದಕ ಜಾಕೀರಹುಸೇನ್ ತಾಳಿಕೋಟಿ, ಉದಯ ವಿಜಯ ದಿನಪತ್ರಿಕೆ ಸಂಪಾದಕ ಪ್ರಕಾಶ ಗುಳೇದಗುಡ್ಡ, ರೈತ ಸಂಫದ ಗುರು ಗಾಣಿಗೇರ, ವೈದ್ಯರಾದ ಡಾ ಸಂತೋಷ ಪೂಜಾರ, ಪತ್ರಕರ್ತ ವೀರೇಶ ಶಿಂಪಿ ಅಭಿನಂದಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ