ರಂಗಾಯಣ ನಾಟಕ ತರಬೇತಿ ಕಾರ್ಯಾಗಾರ ಆರಂಭ

Upayuktha
0

 

ಬಾಗಲಕೋಟೆ: ರಂಗಾಯಣ ಧಾರವಾಡ, ಹುನಗುಂದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಮನುಜಮತ ಫೌಂಡೇಶನ್ ಸಹಯೋಗದಲ್ಲಿ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಅವರ ಜೋಕುಮಾರ ಸ್ವಾಮಿ ನಾಟಕಾಭಿನಯ ಕಾರ್ಯಾಗಾರ ಜಿಲ್ಲೆಯ ಹುನಗುಂದ ತಾಲೂಕಿನ ಸೂಳೇಭಾವಿಯಲ್ಲಿ ನಡೆಯಲಿದೆ.


ನಾಟಕದ ಸ್ಕ್ರಿಪ್ಟ್ ನ್ನು ರಂಗಾಯಣದ ಪರವಾಗಿ ರಂಗ ಸಮಾಜದ ಸದಸ್ಯ ಮಹಾಂತೇಶ ಗಜೇಂದ್ರಗಡ ಬುಧವಾರ ಸಂಘಟಕರಿಗೆ ವಿತರಿಸಿ ಮಾತನಾಡಿ, ಹೊಸ ಪ್ರತಿಭೆಯನ್ನು ಗುರ್ತಿಸಿ, ಅವಕಾಶ ಕಲ್ಪಿಸುವುದು, ಹವ್ಯಾಸಿ ಕಲಾ ತಂಡಗಳನ್ನು ಪ್ರೋತ್ಸಾಹಿಸಲು ಈ ಯೋಜನೆ ರಂಗಾಯಣ ಜಾರಿಗೆ ತಂದಿದೆ. ಕಲಾವಿದರು, ಸಂಘ ಸಂಸ್ಥೆಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.


ಮನುಜಮತ ಫೌಂಡೇಶನ್ ಅಧ್ಯಕ್ಷ ಪಾಂಡುರಂಗ ಮಾಶಾಳ ಸ್ಕ್ರಿಪ್ಟ್ ಸ್ವೀಕರಿಸಿ ಮಾತನಾಡಿ ಗ್ರಾಮೀಣ ಭಾಗಗಳಲ್ಲಿ ರಂಗಾಯಣ ತನ್ನ ಚಟುವಟಿಕೆಗಳನ್ನು ವಿಸ್ತರಿಸಿಕೊಂಡಿರುವುದು ಸಂತಸದ ವಿಷಯ ಎಂದರು.


ಕಾರ್ಯಾಗಾರ ಆರಂಭವಾಗಿದ್ದು, ನಟರ ಆಯ್ಕೆ, ತಾಲೀಮು ಪ್ರಕ್ರಿಯೆ ನಡೆಯುತ್ತಿದೆ, ನಟನೆಯಲ್ಲಿ ಆಸಕ್ತಿಯುಳ್ಳ ಕಲಾವಿದರು ಭಾಗವಹಿಸಬಹುದು, ರಂಗಸಮಾಜದ ಮಹಾಂತೇಶ ಗಜೇಂದ್ರಗಡ ಅವರ ಸಲಹೆ ಮಾರ್ಗದರ್ಶನದಲ್ಲಿ ತರಬೇತಿ ನಡೆಯಲಿದೆ. ಕಾರ್ಯಾಗಾರ ನಂತರ ಸ್ಥಳೀಯ ಪ್ರದರ್ಶನ ಸೇರಿದಂತೆ ರಾಜ್ಯದ ವಿವಿಧೆಡೆ ನಾಟಕ ಪ್ರದರ್ಶನಗೊಳ್ಳಿಲಿದೆ ಎಂದು ರಂಗ ಸಂಘಟಕ, ನಾಟಕದ ನಿರ್ದೇಶಕ ಮಲ್ಲಿಕಾರ್ಜುನ ಸಜ್ಜನ ತಿಳಿಸಿದರು.


ಈ ಸಂದರ್ಭದಲ್ಲಿ ಕಲಾವಿದರಾದ ಲಕ್ಷ್ಮಣ ಕತ್ತಿ, ಗಂಗಾಧರ ಕಮ್ಮಾರ, ಷಣ್ಮುಖ ಮಡಿವಾಳರ, ಟಿ.ಬಿ.ಭಜಂತ್ರಿ,ರವಿ ರಾಮಥಾಳ, ಮಹಾಂತೇಶ ಕಂಬಾರ, ಬಸು ಒಡ್ಡೋಡಗಿ, ವಿಠ್ಠಲ ಮಾರಾ, ಮಹಾಂತೇಶ ಕಟಾಪುರ,ಮಲ್ಲಪ್ಪ ಕಮತಗಿ, ಶಿವು ಮಿಣಜಗಿ, ಶೇಖಪ್ಪ ಕಟಗೇರಿ, ಮಲ್ಲಪ್ಪ ಹಣಗಿ, ಇದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top