ಸರಕಾರಿ ನೌಕರ, ಯಶಸ್ವಿ ಶಿಕ್ಷಕ, ಸಿಆರ್ ಪಿ ಶಾಂತಕುಮಾರ ಕುಟಗಮರಿ

Upayuktha
0


ಕಂದಗಲ್ಲ: ಸರಕಾರಿ ಕೆಲಸ ದೇವರ ಕೆಲಸವೆಂದು ನಿಷ್ಠೆಯಿಂದ ಕೆಲಸ ಮಾಡುವ ಜೊತೆಗೆ ಶಿಕ್ಷಣ ಇಲಾಖೆಯ ಪ್ರತಿಯೊಂದು ಕಾರ್ಯಕ್ರಮ ಗಳನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವ ಹಾಗೂ ಇವುಗಳಿಗೆ ಯಾವುದೇ ರೀತಿಯಲ್ಲಿ ಚುತಿ ಬಾರದಂತೆ ನೂರಕ್ಕೆ ನೂರರಷ್ಟು ಯಶಸ್ವಿ ಕಾರ್ಯಕ್ರಮಗಳನ್ನು ನೀಡುವ ಮೂಲಕ ನಿಷ್ಠಾವಂತ ಸರಸ್ವತಿ ಪುತ್ರ ಸರಕಾರಿ ನೌಕರ ಶಾಂತಕುಮಾರ ಕುಟಗಮರಿ ಎಂದೇನಿಸಿದ್ದಾರೆ. ಇವರು ಪ್ರತಿಯೊಬ್ಬರಿಗೂ ಮಾದರಿಯಾಗಿದ್ದಾರೆ.


1979 ರಲ್ಲಿ ಇಲಕಲ್ಲ ದಲ್ಲಿ ಜನಿಸಿದ ಇವರು ಬಿ ಎಸ್ ಸಿ ಪದವಿ ಪಡೆದು 2002 ರಲ್ಲಿ ಸಮೀಪದ ಹೈತಿಹಾಸಿಕ ಪಟ್ಟಣ ಮುದಗಲ್ಲದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಗಳಪೇಟೆಯಲ್ಲಿ ಶಿಕ್ಷಕರಾಗಿ 5 ವರ್ಷಗಳ ಸೇವೆ ಸಲ್ಲಿಸಿ ನಂತರ ಕಂದಗಲ್ಲದ ಕೆಜಿಎಂಪಿಎಸ್ ಶಾಲೆಯಲ್ಲಿ 10 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ಮುಂದೆ ಇಲಕಲ್ಲ ನಗರ ಮಧ್ಯ ಸಿ ಆರ್ ಪಿ ಯಾಗಿ 4 ವರ್ಷ 6 ತಿಂಗಳು ಸೇವೆ ಸಲ್ಲಿಸಿ ಮರಳಿ ಕಂದಗಲ್ಲ ಕ್ಲಸ್ಟರ್ಗೆ ಸಿ ಆರ್ ಪಿ ಯಾಗಿ ನೇಮಕಗೊಂಡು ಯಶಸ್ವಿ ನಿರ್ವಹಿಣೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.


ಸದ್ಯ ನಂದವಾಡಗಿ ಸಿ ಆರ್ ಪಿ ಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.


ಶಿಕ್ಷಣ ಇಲಾಖೆ- ಶಾಲೆಗಳ ನಡುವಿನ ಸೇತುವೆಯಾಗಿ ಕಾರ್ಯ ನಿರ್ವಹಿಸುವ ವಲಯ ಸಂಪನ್ಮೂಲ ಕೇಂದ್ರಗಳು ಸೌಲಭ್ಯಗಳ ಕೊರತೆಯಿಂದ ಬಳಲುತ್ತಿವೆ ಕೆಲವೋಂದು ಸಂಪೂರ್ಣ ನಿರ್ಲಕ್ಷಕ್ಕೆ ಒಳಗಾಗಿವೆ ಅವುಗಳಲ್ಲಿ ನಮ್ಮ ಕಂದಗಲ್ಲದ ಸಿ ಆರ್ ಪಿ ಕಟ್ಟಡವು ಒಂದಾಗಿತ್ತು. ಶಾಲಾ ವ್ಯೆವಸ್ಥೆಯ ಮೇಲ್ವಿಚಾರಣೆ ಮಕ್ಕಳ ಶೈಕ್ಷಣಿಕ ಗುಣಮಟ್ಟ ಸುಧಾರಣೆ ಶಿಕ್ಷಣ ಇಲಾಖೆಯ ಚಟುವಟಿಕೆ ಶಿಕ್ಷಕರ ಸಭೆ ಸೇರಿಸುವದು ಈಗೆ ಹತ್ತಾರು ಚಟುವಟಿಕೆಗಳಿಗೆ ಇದು ಕೇಂದ್ರಬಿಂದು ಇಂತಹ ಮಹತ್ವದ ಕಂದಗಲ್ಲ ಗ್ರಾಮ ಪಂಚಾಯತ್ ಪಕ್ಕದಲ್ಲಿರುವ ಕಂದಗಲ್ಲ ಇಲಕಲ್ಲ ರಸ್ತೆಗೆ ಹೊಂದಿಕೊಂಡಿರುವ ಸಮೂಹ ಸಂಪನ್ಮೂಲ ಕೇಂದ್ರ ಸಂಪೂರ್ಣವಾಗಿ ನಿರ್ಲಕ್ಷಕ್ಕೆ ತುತ್ತಾಗಿತ್ತು. ಇದನ್ನು ಮನಗಂಡ ಸಿ ಆರ್ ಪಿ ಶಾಂತಕುಮಾರ್ ಕುಟಗಮರಿ ಸುಮ್ಮನೆ ಕೊಡಲಿಲ್ಲ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಡಿ ಡಿ ಪಿ ಐ ಅವರಿಂದ ಹಿಡಿದು ಶಾಲಾ ಗುರುಗಳಿಂದ ಅವರ ಕೈಲಾದಷ್ಟು ಕೊಟ್ಟ ಸಹಕಾರ ತೆಗೆದುಕೊಂಡು ನಿರ್ಜಿವವಾಗಿ ನಿಂತಿದ್ದ ಕಟ್ಟಡಕ್ಕೆ ಜೀವ ನೀಡಿ ಹೈಟೆಕ್ ಸ್ಪರ್ಶ ಕೊಟ್ಟು ಜಿಲ್ಲೆಯಲ್ಲಿಯೇ ಮಾದರಿ ಸಂಪನ್ಮೂಲ ಕೇಂದ್ರ ಮಾಡಿದ್ದಾರೆ.


ಕಟ್ಟಡಕ್ಕೆ ಸುಣ್ಣ ಬಣ್ಣ ಸೇರಿ ಸಂಪೂರ್ಣ ದುರಸ್ಥಿಗೊಳಿಸಿ ಸುಂದರವಾದ ಕಾರ್ಯಾಲಯ ಮಾಡಿದ್ದಾರೆ. ಗೋಡೆಗಳ ಮೇಲೆ ಜ್ಞಾನಪೀಠ ಪ್ರಶಸ್ತಿ ಪಡೆದವರು, ಸಾಹಿತಿಗಳು ವಚನಕರರು, ಸ್ವತಂತ್ರ ತಂದು ಕೊಟ್ಟ ಮಹನೀಯರು, ವಿಜ್ಞಾನ ಗಣಿತ ತಜ್ಞರು ಈಗೆ ಅನೇಕ ಮಹನೀಯರ ಭಾವಚಿತ್ರಗಳು ಕಣ್ಮನ ಸೆಳೆಯುವದೇ ಇದಕ್ಕೆ ಸಾಕ್ಷಿ. 


ಮಕ್ಕಳ ಸಂಖ್ಯೆ ಶಿಕ್ಷಕರ ಸಂಖ್ಯೆ ಅಕ್ಷರ ದಾಸೋಹದ ಬಿಸಿಯೂಟ, ಎಸ್ ಡಿ ಎಂ ಸಿ ಮಾಹಿತಿಗಳನ್ನು ಹಾಕಲಾಗಿದೆ. ಇಲಾಖೆಯಿಂದ ವರ್ಷಕ್ಕೊಮ್ಮೆ ಸಣ್ಣಪುಟ್ಟ ಖರ್ಚುಗಳಿಗೆ ಬರುವ 12000 ರೂ, ಸಂಬಂಧಿಸಿದ ಶಿಕ್ಷಕರ ವತಿಯಿಂದ ಅಂದಾಜು 130000 ರೂ ಕ್ಕಿಂತಲೂ ಹೆಚ್ಚು ಸಂಗ್ರಹಿಸಿ ತಮ್ಮದೇ ಸ್ವಂತ ಹಣ ಅಂದಾಜು 80000 ರೂ ಹಾಕಿ ಒಟ್ಟು 225000 ಕ್ಕಿಂತ ಹೆಚ್ಚು ಖರ್ಚು ಮಾಡಿ ಯಾರು ಕೂಡ ಮುಖ ತಿರುಗಿ ನೋಡದ ರೀತಿಯಲ್ಲಿದ್ದ ಕಂದಗಲ್ಲ ಸಮೂಹ ಸಂಪನ್ಮೂಲ ಕೇಂದ್ರದ ಕಟ್ಟಡವನ್ನು ಅಭಿವೃದ್ಧಿ ಪಡಿಸಿ ಜನರ ಮೆಚ್ಚುಗೆಗೆ ಪಾತ್ರವಾಗಿದ್ದರೆ. ಶಿಕ್ಷಕರ ತರಬೇತಿಗೆ ಅವಶ್ಯವಾದ ಸ್ಮಾರ್ಟ್ ಕ್ಲಾಸ್ ಕೂಡಾ ಇದ್ದು ಸುಸಜ್ಜಿತ ಪ್ರೋಜೇಕ್ಟರ್ ಸ್ಕ್ರೀನಿಂಗ ಸೌಂಡ್ ವ್ಯವಸ್ಥೆ ಇದ್ದು ಮೇಲಾಧಿಕಾರಿಗ ಪ್ರಶಂಸಗೆ ಪಾತ್ರವಾಗಿದೆ. ಇದಕ್ಕೆ ಸಂಪೂರ್ಣ ಸಹಕಾರ ನೀಡಿದ ಎಲ್ಲ ಮಹನೀಯರ ಹಾಗೂ ಕುಟಗಮರಿಯವರ ಕಾರ್ಯ ಶ್ಲಾಘನೀಯ. ಇವರನ್ನು ಕಂದಗಲ್ಲ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಅಭಿನಂದಿಸಿದ್ದಾರೆ.


ಕುರಿಗಾರರ ಕೇಂದ್ರ ವಾಗಿದ್ದ ಈ ಸರಕಾರಿ ಸಮೂಹ ಸಂಪನ್ಮೋಲ ಕೇಂದ್ರ ಇಂದು ಇವರ ಹಾಗೂ ಇದಕ್ಕೆ ಸಂಬಂಧಿಸಿದ ಗುರುಬಳಗದಿಂದ ನೋಡಲು ಅತ್ಯಂತ ಸುಂದರವಾಗಿ ಇಲಾಖೆಯ ಕಾರ್ಯ ಚಟುವಟಿಕೆಗಳಿಗೆ ವಿನಿಯೋಗವಾಗುತ್ತಿದೆ.


ಪರಿಸರ ಕಾಪಾಡಿ, ಕಾಡು ಬೆಳೆಸಿ ನಾಡು ಉಳಿಸಿ ಅನ್ನುತ್ತಾ ಕೇವಲ ಭಾಷಣ ಮಾಡಿ ಹೋಗೋ ಮಂದಿಗಿಂತ ಯಾವುದೇ ಫಲಾಪೇಕ್ಷೆ ಇಲ್ಲದೆ ಪರಿಸರ ಸೇವೆ ಮಾಡುತ್ತಿರುವ ಇವರು ನಿಜಕ್ಕೂ ಪರಿಸರ ಪ್ರೇಮಿ. ತಮ್ಮ ಅಧೀನದಲ್ಲಿ ಬರುವ ಪ್ರತಿಯೊಂದು ಶಾಲೆಗೂ ಮೇಲಿಂದ ಮೇಲೆ ಭೇಟಿ ನೀಡಿ ಶಾಲೆಗೆ ಸರಕಾರದಿಂದ ಬರುವ ಬರುವ ಎಲ್ಲ ಅನುದಾನಗಳನ್ನು ಸಮರ್ಪಕವಾಗಿ ತಂದು ಅವುಗಳನ್ನು ಪ್ರಾಮಾಣಿಕವಾಗಿ ಸದ್ಭಳಕೆ ಮಾಡುವ ನಿಟ್ಟಿನಲ್ಲಿ ಆಯಾ ಶಾಲಾ ಶಿಕ್ಷಕರೊಂದಿಗೆ ಬೆರೆತು ಕೆಲಸ ಮಾಡಿ ಶಿಕ್ಷಣ, ಶಾಲಾಭಿವೃದ್ಧಿ ಜೊತೆಗೆ ಪರಿಸರಕ್ಕು ವಿಶೇಷ ಕಾಳಜಿ ವಹಿಸಿ,ಪರಿಸರ ಪ್ರೇಮಿಯಾಗಿದ್ದಾರೆ.

ಶಿಕ್ಷಣ ಇಲಾಖೆಯ ನೌಕರರಾದರು ಸಮಾಜದ ಎಲ್ಲರೊಂದಿಗೆ ಸಮಾನ ಮನಸ್ಕರಾಗಿ ಸಮುದಾಯದ ಎಲ್ಲ ಜನರ ಪ್ರೀತಿ ವಿಶ್ವಾಸ ಗಳಿಸಿ ಇಲಾಖೆಯ ಕಾರ್ಯಕ್ರಮಗಳಲ್ಲಿ ಎಲ್ಲ ಸಮುದಾಯದ ಜನರನ್ನು ಸೇರಿಸಿ ನೂರಾರು ಯಶಸ್ವಿ ಕಾರ್ಯಕ್ರಮ ಕೊಟ್ಟ ಕೀರ್ತಿ ಇವರಿಗೆ ಸಲ್ಲುತ್ತದೆ.


-ವೀರೇಶ ಚ. ಶಿಂಪಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top