ಹುನಗುಂದ: ಮಾಧ್ಯಮ ಸಮಾಜದ ನಿಜವಾದ ಪ್ರತಿಬಿಂಬ. ಅದು ಸಮಾಜ ಸೌಖ್ಯ ಮತ್ತು ಒಳಿತಿನೆಡೆಗೆ ಸಾಗಲಿ ಎಂದು ಹಿರಿಯ ಲೇಖಕ ಎಸ್ಕೆ ಕೊನೆಸಾಗರ ಹೇಳಿದರು.
ಅವರು ನಗರದ ಗಚ್ಚಿನಮಠದಲ್ಲಿ ಶುಕ್ರವಾರ ನಡೆದ ಮುರುಘೇಂದ್ರ ಶ್ರೀಗಳ 58 ನೇ ಪುಣ್ಯಸ್ಮರಣೋತ್ಸವ ಮತ್ತು ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ 'ಮಾಧ್ಯಮ ಮತ್ತು ಸಮಾಜ' ಕುರಿತು ಉಪನ್ಯಾಸ ನೀಡಿ ಮಾತನಾಡಿ, ಮಾಧ್ಯಮಗಳು ವಿವಿಧ ಆಯಾಮಗಳ ಮುಖಾಂತರ ಸಮಾಜದ ಮೇಲೆ ಪರಿಣಾಮ ಬೀರುತ್ತವೆ. ಇವುಗಳ ಬಳಕೆಯನ್ನು ಸಕಾರಾತ್ಮಕವಾಗಿ ಮಾಡಿಕೊಳ್ಳಬೇಕು ಎಂದರು.
ಅಮರೇಶ್ವರ ದೇವರು ಅಧ್ಯಕ್ಷತೆ ವಹಿಸಿದ್ದರು. ಹಿರಿಯರಾದ ಮಹಾಂತಯ್ಯ ಗಚ್ಚಿನಮಠ ಮತ್ತು ಶೇಖರಪ್ಪ ಬಾದವಾಡಗಿ ಉಪಸ್ಥಿತರಿದ್ದರು. ಪರಸಪ್ಪ ಆಲೂರ, ಎಸ್.ಎನ್. ಹಾದಿಮನಿ, ಸುರೇಶ ಹಳಪೇಟಿ, ಚನ್ನಬಸಪ್ಪ ಇಲಕಲ್ಲ, ಮಹಾಲಿಂಗಯ್ಯ ಹಿರೇಮಠ, ಶಿವಕುಮಾರ ಗುರುವಿನ ಮತ್ತು ವಿಜಯ ಮಹಾಂತೇಶ ಮಲಗಿಹಾಳರ ತಾಯಿ ಸಂಗಮ್ಮ ಅವರನ್ನು ಸತ್ಕರಿಸಲಾಯಿತು.
ಗಣೇಶ ಶಾಸ್ತ್ರಿ ಅವರಿಂದ ಪ್ರವಚನ ಮತ್ತು ಪ್ರತಾಪಕುಮಾರ ಹಾಗೂ ಚಂದ್ರು ಹಲಕಾವಟಗಿ ಅವರಿಂದ ಸಂಗೀತ ಸೇವೆ ನಡೆಯಿತು. ಶಿವಪುತ್ರಪ್ಪ ತಾರಿವಾಳ ಪ್ರಾರ್ಥಿಸಿದರು. ಗೀತಾ ತಾರಿವಾಳ ಸ್ವಾಗತಿಸಿದರು. ಡಾ.ಶಿವಗಂಗಾ ರಂಜಣಗಿ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ