ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಮಹಾವಿದ್ಯಾಲಯ ಉಜಿರೆ ಇಲ್ಲಿ ರಂಗಕಲೆಗಳ ಸ್ವರೂಪ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶಿಕ್ಷಕ ಕೇವಲ ಶಿಕ್ಷಣ ನೀಡುವ ಶಿಕ್ಷಕನಾಗಬಾರದು, ಬದಲು ಎಲ್ಲಾ ಲಘುತನಗಳನ್ನು ದಾಟಿ ಗುರುವಾಗಬೇಕು. ಮಕ್ಕಳ ಜೀವನದಲ್ಲಿನ ದಾರಿ ನೇರಗೊಳಿಸುವ ಗುರುವು ಆಗಬೇಕು. ಜಗತ್ತಿನ ಗುರುತನಗಳ ಸ್ವೀಕರಿಸುವ ಲಘುತನ ಎಲ್ಲಾ ಶಿಕ್ಷಕರಲ್ಲಿರಬೇಕು ಎಂದು ರಂಗಕಲಾವಿದ ‘ನಾದ’ ಮಣಿನಾಲ್ಕೂರು ಹೇಳಿದರು.
ಓದು, ಬರಹ, ಹಾಡು, ಸುತ್ತಾಟ, ಕಲೆ ಹಾಗೂ ರಂಗಭೂಮಿ ಹೀಗೆ ನಾನಾ ಕ್ಷೇತ್ರದಲ್ಲಿ ಮೇಲುಗೈ ಸಾಧಿಸಿರುವ ರಂಗಕಲಾವಿದ ‘ನಾದ’ ಎಂಬ ನಾಮಾಂಕಿತರಾದ ಭಾಸ್ಕರ್ ಮಣಿನಾಲ್ಕೂರು ಅತಿಥಿಯಾಗಿ ಮಾತನಾಡಿದರು. ಕಲಿಸುವ ಗುರು ಸಣ್ಣವನಾದರೆ, ಕಲಿಯುವ ಶಿಷ್ಯನು ಸಣ್ಣತನಕ್ಕೆ ಸೀಮಿತನಾಗುತ್ತಾನೆ. ಈ ಜಗತ್ತಿನಲ್ಲಿ ಕಲಿಕೆಯು ಮುಗಿಯುವಂತಹದಲ್ಲ. ಗುರುವಾದವನು ಸೋತ ಮಕ್ಕಳ ಜೊತೆ ನಿಲ್ಲಬೇಕು ಎಂದು ತಮ್ಮ ಸುಮಧುರ ಗಾಯನ ಹಾಗೂ ಎಕ್ತಾರಿಯ ಗಾಯನದ ಮೂಲಕ ತಿಳಿಸಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷರು, ಕಾಲೇಜಿನ ಪ್ರಾಂಶುಪಾಲ ಸಂತೋಷ್ ಸಲ್ಡಾನ ಇವರು ಮಾತನಾಡಿ, ಇತ್ತೀಚಿನ ಕಾಲದಲ್ಲಿ ಗುರುವನ್ನು ಕೇಳಿ ಕಲಿಯುವವರೇ ಹೆಚ್ಚು ಅದರ ಬದಲು ಗುರುವನ್ನು ನೋಡಿ ಕಲಿಯುವ ಹಂತಕ್ಕೆ ಗುರು ಬೆಳೆಯಬೇಕು. ಶಿಕ್ಷಕರು ಕೇವಲ ಆದರ್ಶಗಳನ್ನು ಕಲಿಸುವುದು ಮಾತ್ರವಲ್ಲದೆ ಅದನ್ನು ತಮ್ಮ ಜೀವನದಲ್ಲಿ ಅನುಸರಿಸಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಎಸ್‌ಡಿಎಂ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ರಾಜಶೇಖರ್ ಹಳೆಮನೆ, ಬಿ.ಎಡ್. ಹಾಗೂ ಡಿ.ಎಡ್. ಕಾಲೇಜಿನ ಉಪನ್ಯಾಸಕ ವೃಂದ ಮತ್ತು ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು. ದ್ವಿತೀಯ ವರ್ಷದ ಬಿ.ಎಡ್. ಪ್ರಶಿಕ್ಷಣಾರ್ಥಿ ತೇಜಾಕ್ಷಿ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ