- ಟಿ. ದೇವಿದಾಸ್
ವರ್ಣಚಿತ್ರ ಕಲಾಕಾರ ಸತೀಶ್ಚಂದ್ರ ಅವರು ಉಡುಪಿಯ ಬೈಲೂರಿನವರು. ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಬಿಕಾಂ ಪದವೀಧರರು. ಮಂಗಳೂರಿನ ZED ಕೆರಿಯರ್ ಅಕಾಡೆಮಿಯಿಂದ ವೆಬ್ ಮತ್ತು ಮಲ್ಟಿಮೀಡಿಯಾದಲ್ಲಿ ಡಿಪ್ಲೊಮಾ ಪಡೆದಿದ್ದಾರೆ. ಸದ್ಯ ಮಣಿಪಾಲದ್ದಲೇ ವಾಸ್ತವ್ಯ ಇದ್ದಾರೆ. ಸತೀಶ್ಚಂದ್ರ ಅವರು ಮಣಿಪಾಲ್ ಟೆಕ್ನಾಲಜೀಸಲ್ಲಿ ಕೆಲಸ ಮಾಡುತ್ತಿದ್ದಾರೆ. ಸತೀಶ್ಚಂದ್ರ ಅವರು ತೀವ್ರತರ ಸಂವೇದನೆಯುಳ್ಳ ಸೃಜನಶೀಲ ಹಿನ್ನೆಲೆಯನ್ನು ಹೊಂದಿದ್ದಾರೆಂಬುದನ್ನು ಅವರ ಪೇಂಟಿಂಗ್ಸ್ ಗಳನ್ನು ಅವಲೋಕಿಸಿದರೆ ಮತ್ತು ಮಂಗಳೂರಿನ ಪ್ರಮುಖ ಜಾಹೀರಾತು ಏಜೆನ್ಸಿಯಲ್ಲಿ ಕಲಾ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.
2001ರಲ್ಲಿ ಸತೀಶ್ಚಂದ್ರ ಅವರು ಮಣಿಪಾಲ್ ಗ್ರೂಪ್‌ಗೆ ಸೇರಿಕೊಂಡರು. ಜೀಟಾ ಸೈಬರ್ ಸೊಲ್ಯೂಷನ್ಸ್‌ನಲ್ಲಿ ಕ್ರಿಯೇಟಿವ್ ಹೆಡ್ ವೆಬ್ ಮತ್ತು ಮಲ್ಟಿಮೀಡಿಯಾದಲ್ಲಿ ಕೆಲಸವನ್ನು ಮಾಡಿದರು. ಆ ಸಂದರ್ಭದಲ್ಲಿ ಅವರು ಅಮೇರಿಕನ್ ಕಂಪೆನಿಗಳಿಗಾಗಿ ಅನೇಕ ವೆಬ್‌ಸೈಟ್‌ಗಳನ್ನು ವಿನ್ಯಾಸಗೊಳಿಸಿದ್ದಾರೆ. ಝೀಟಾ ಸೈಬರ್ ಸೊಲ್ಯೂಷನ್ಸ್‌ಗಾಗಿ ಕೆಲಸ ಮಾಡುವಾಗ ಅವರ ಕ್ರಿಯೇಟಿವಿಟಿಗೆ ಯುರೋಪಿಯನ್ ಎಕ್ಸಲೆನ್ಸ್ ಫಾರ್ ಮಲ್ಟಿಮೀಯಾ ಪ್ರಶಸ್ತಿ ಸಂದಿದೆ. ಸತೀಶ್ಚಂದ್ರ ಅವರು ಮಣಿಪಾಲ್ ಟೆಕ್ನಾಲಜೀಸ್‌ನ ಡಿಜಿಟಲ್ ಪ್ರಿಂಟಿಂಗ್ ಘಟಕವಾದ ಡಿಜಿಜಿಒ ಮುಖ್ಯಸ್ಥರಾಗಿದ್ದರು. ಡಿಜಿಟಲ್ ಪ್ರಿಂಟಿಂಗ್‌ಗಾಗಿ ಫ್ರಾಂಚೈಸಿಗಳನ್ನು ಯಶಸ್ವಿಯಾಗಿ ಸ್ಥಾಪಿಸಿದರು. ಪ್ರಸ್ತುತ ಅವರು ಮಣಿಪಾಲ್ ಟೆಕ್ನಾಲಜೀಸ್‌ನಲ್ಲಿ ಇಕಾಮರ್ಸ್ ಕಂಟೆಂಟ್ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸತೀಶ್ಚಂದ್ರ ಅವರು ಪ್ರಸಿದ್ಧ ಕಲಾವಿದರಾಗಿದ್ದು, ಉಡುಪಿಯ ಕಲಾವಿದರ ವೇದಿಕೆಯ ಸದಸ್ಯರೂ ಆಗಿದ್ದಾರೆ. ಅವರು ಮಣಿಪಾಲದ ತರಂಗ ವಾರಪತ್ರಿಕೆಯಲ್ಲಿ ಕಥೆಗಳು ಮತ್ತು ಧಾರಾವಾಹಿಗಳಿಗಾಗಿ 1000ಕ್ಕೂ ಹೆಚ್ಚು ವರ್ಣಚಿತ್ರಗಳನ್ನು ಚಿತ್ರಿಸಿದ್ದಾರೆ. ತರಂಗ ವಾರಪತ್ರಿಕೆಗೆ ಫ್ರೀಲಾನ್ಸ್ ಆಗಿ ಇಲ್ಯೂಸ್ಟ್ರೇಷನ್ ಮಾಡುತ್ತಾರೆ. ಅವರ ವರ್ಣಚಿತ್ರಗಳನ್ನು ಪ್ರಸಿದ್ಧ ಕಲಾ ಗ್ಯಾಲರಿಗಳಲ್ಲಿ ಮತ್ತು ಅನೇಕ ಕಾರ್ಪೊರೇಟ್ ಕಂಪೆನಿ ಮತ್ತು ಮನೆಗಳ ಗೋಡೆಗಳಲ್ಲಿ ಅಲಂಕರಿಸಲಾಗಿದೆ.
ಸತೀಶ್ಚಂದ್ರ ಅವರದು ಎರಡು ಮಕ್ಕಳಿರುವ ಚಿಕ್ಕ ಕುಟುಂಬ. ಪತ್ನಿ ನಿಮಿತಾ ಅವರು ವಾಣಿಜ್ಯೋದ್ಯಮಿ ಮತ್ತು ಯೂಟ್ಯೂಬರ್ ಕೂಡ. ಎಲ್ಲ ಸೃಜನಶೀಲ ಮತ್ತು ವೃತ್ತಿಪರ ಅಂಶಗಳಲ್ಲಿ ನಿಮಿತಾ ಅವರು ಸತೀಶ್ಚಂದ್ರ ಅವರನ್ನು ಬೆಂಬಲಿಸುತ್ತಾರೆ. ಮಗ ಹಿಮಾಂಶು. ಮಗಳು ಹಿಮಾನಿ.
ಸತೀಶ್ಚಂದ್ರ ಅವರು ಭಾವಪ್ರಧಾನ ಗಾಯಕರು. ಕರಾವಳಿ ಸ್ಟಾರ್ ಮ್ಯೂಸಿಕ್ ಕ್ಲಬ್, ಉಡುಪಿಯ ಸದಸ್ಯರೂ ಆಗಿದ್ದಾರೆ. ಅವರು 2023 ರಿಂದ ಟೋಸ್ಟ್ ಮಾಸ್ಟರ್ಸ್ ಕ್ಲಬ್ ಉಡುಪಿ ಸದಸ್ಯರಾಗಿದ್ದಾರೆ. ಸತೀಶ್ಚಂದ್ರ ಅವರು ಎರಡು ಅವಧಿಗೆ ಲಯನ್ಸ್ ಕ್ಲಬ್ ಮಣಿಪಾಲದ ಅಧ್ಯಕ್ಷರಾಗಿದ್ದರು. ಸತೀಶ್ಚಂದ್ರ ಪ್ರಸ್ತುತ ಟೋಸ್ಟ್ ಮಾಸ್ಟರ್ಸ್ ಕ್ಲಬ್ ಉಡುಪಿಯ ಸಾರ್ವಜನಿಕ ಸಂಪರ್ಕ ವಿಭಾಗದ ಉಪಾಧ್ಯಕ್ಷರಾಗಿದ್ದಾರೆ.
ಗಮನಾರ್ಹವಾದ ವಿಚಾರವೇನೆಂದರೆ, ಅವರ ಇತ್ತೀಚಿನ ಕಾಂತಾರ ಪಂಜುರ್ಲಿ ಪೇಂಟಿಂಗ್ ವಿಡಿಯೋ ವೈರಲ್ ಆಗಿದೆ. ಫೇಸ್‌ಬುಕ್ ಗ್ರೂಪ್‌ನಲ್ಲಿ ಆ ವಿಡಿಯೋ 0.5 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಚಿತ್ರನಟ ರಿಷಬ್ ಶೆಟ್ಟಿ ಅವರು ಫೇಸ್‌ಬುಕ್ ವಾಲ್‌ನಲ್ಲಿ ಸ್ವತಃ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಶೇಷವಾದ ಸಂಚಿಕೆಗಳಿಗಾಗಿ, ಪತ್ರಿಕೆಗೆ ಬೇಕಾದ ವರ್ಣಚಿತ್ರಗಳಿಗಾಗಿ, ಕಾರ್ಟೂನ್‌ಗಳಿಗಾಗಿ ಇವರನ್ನು ಈ ನಂಬರಿನಲ್ಲಿ ಸಂಪರ್ಕಿಸಬಹುದು: 9900235519
- ಟಿ. ದೇವಿದಾಸ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ