ಮುರ್ಡೇಶ್ವರ ಬೀಚ್ ಪ್ರವಾಸಿಗರಿಗೆ ನಿರ್ಬಂಧ: ಅಂಗಡಿ, ಮುಂಗಟ್ಟು ಸಂಪೂರ್ಣ ಬಂದ್

Upayuktha
0


ಮುರ್ಡೇಶ್ವರ: ಸಮುದ್ರದಲ್ಲಿ ಮುಳುಗಿ ನಾಲ್ಕು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಹಿನ್ನೆಲೆಯಲ್ಲಿ ಪ್ರವಾಸಿ ತಾಣ ಮುರ್ಡೇಶ್ವರದ ಅಂಗಡಿ ಮುಂಗಟ್ಟು ಬಂದ್ ಮಾಡಿ ಬೀಚ್‌ಗೆ ತೆರಳುವ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ ಎನ್ನಲಾಗುತ್ತಿದೆ.


ಜಿಲ್ಲಾಡಳಿತ ಹಾಗೂ ಪ್ರವಾಸೋಧ್ಯಮ ಇಲಾಖೆಯ ನಿರ್ಲಕ್ಷದಿಂದ ನಾಲ್ಕು ವಿದ್ಯಾರ್ಥಿಗಳು ಮೃತಪಟ್ಟ ಬಗ್ಗೆ ಆರೋಪ ಕೇಳಿಬಂದಿದ್ದು, ಲೈಪ್ ಗಾರ್ಡಗಳಿಗೆ ಜೀವ ಉಳಿಸಲು ಬೇಕಾದ ಸಲಕರಣೆಗಳಾದ ಮೈಕ್, ಸೈರನ್, ರೆಸ್ಕ್ಯೂ ಬೋರ್ಡ್, ಹಗ್ಗ ಹಾಗೂ ಇನ್ನಿತರ ವಸ್ತುಗಳು ಪೂರೈಕೆ ಆಗದಿರುವುದರ ಕುರಿತು ಜಿಲ್ಲೆಯ ಜನರು ಅಸಮದಾನ ವ್ಯಕ್ತಪಡಿಸಿದ್ದಾರೆ.


ಪ್ರತಿ ಬಾರಿ ಇಂತಹ ಅವಘಡಗಳು ನಡೆದಾಗ ಸ್ಥಳಿಯ ಜಲಸಾಹಸ ಕ್ರೀಡಾ ಬೋಟ್‌ಗಳು ಪ್ರವಾಸಿಗರ ರಕ್ಷಣೆಗೆ ಮುಂದಾಗಿ ಎಷ್ಟೋ ಜನರ ಜೀವ ರಕ್ಷಿಸಿದ ಘಟನೆಗಳು ನಡೆದಿವೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಒಳ ರಾಜಕೀಯದಿಂದ ಸ್ಥಳೀಯ ಬೋಟಿಂಗ್ ಚಟುವಟಿಕೆ ಬಂದ್ ಮಾಡಲಾಗಿದೆ. ಬೋಟಿಂಗ್ ಚಟುವಟಿಕೆ ಪ್ರಾರಂಭವಿದ್ದರೆ ಮನೆಗೆ ದಾರೀ ದೀಪವಾಗಬೇಕಿದ್ದ ಮುಗ್ದ ಮಕ್ಕಳ ಜೀವ ಉಳಿಯಬಹುದಿತ್ತೇನೋ ಎಂಬುದು ಸ್ಥಳೀಯರ ವಾದವಾಗಿದೆ.


ಬೀಚ್ ನ ಅಂಗಡಿ ಮುಂಗಟ್ಟುಗಳು ಬಂದ್:

ಬೀಚ್‌ನ ಪಕ್ಕದಲ್ಲಿ ಜೀವನ ಸಾಗಿಸಲು ಸಣ್ಣ ಪುಟ್ಟ ಅಂಗಡಿಗಳನ್ನು ಸ್ಥಳಿಯರು ಹಾಕಿಕೊಂಡಿದ್ದು, ಅಂಗಡಿ ಮುಂಗಟ್ಟು ಬಂದ್ ಮಾಡಿ ಬಡವರ ಹೊಟ್ಟೆ ಮೇಲೆ ಬರೆ ಎಳೆದಂತಾಗಿದೆ.


ಘಟನೆ ನಡೆಯುವ ಮುನ್ನ ಯೋಚಿಸಿ ಪ್ರವಾಸಿಗರ ಸುರಕ್ಷತೆ ಬಗ್ಗೆ ಯೊಚಿಸಿದರೆ ಇಂತ ಘಟನೆ ನಡೆಯುತ್ತಿರಲಿಲ್ಲ. ಘಟನೆ ಸಂಭವಿಸಿದ ನಂತರ ಯಾರ್ಯಾರದೋ ಮೇಲೆ ದರ್ಪ ತೋರಿದರೆ ಏನು ಪ್ರಯೋಜನವಿಲ್ಲ. ಚಿಕ್ಕ ಅಂಗಡಿ ಮುಂಗಟ್ಟು ಇಟ್ಟಿಕೊಂಡು ಸಣ್ಣ ಪುಟ್ಟ ಜೀವನ ನಡೆಸುತ್ತಿರುವವರಿಗೂ ತೊಂದರೆ ಉಂಟಾಗುತ್ತಿದ್ದು ಸ್ಥಳೀಯಾಡಳಿತ ಹಾಗೂ ತಾಲೂಕಾಡಳಿತ ಗಮನಹರಿಸಿ ಅಂಗಡಿಕಾರರಿಗೆ ತೊಂದರೆ ಉಂಟಾಗದಂತೆ ನೋಡಿಕೊಳ್ಳಬೇಕಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top