ಭಗವದ್ಗೀತಾ ಕಂಠಪಾಠ ಸ್ಪರ್ಧೆ: ನವಮಿ ವಿಶ್ವನಾಥ ಭಟ್‌ ಪ್ರಥಮ

Upayuktha
0


ಪಣಜಿ: ಗೋವಾ ಶಾಸನಸ್ಯ ರಾಜ್ಯ ಶೈಕ್ಷಣಿಕ ಅನುಸಂಧಾನ ಪ್ರಶಿಕ್ಷಣ ಪರಿಷತ್, ಗೋಮಂತಕ ಸಂಸ್ಕೃತೋತ್ತೇಜಕ ಮಂಡಳ ಕವಳೆ ವತಿಯಿಂದ ಪೊಂಡಾ ಕವಳೆಯಲ್ಲಿ "ಗೀತಾ ಜಯಂತಿ" ಅಂಗವಾಗಿ ಶ್ರೀಮದ್ಭಗವದ್ಗೀತಾ ಪಂಚಮೋಧ್ಯಾಯ ಕಂಠಪಾಠ ಸ್ಫರ್ಧೆಯಲ್ಲಿ ಪಣಜಿಯ ಪೀಪಲ್ಸ್‌ ಹೈಸ್ಕೂಲ್ ವಿದ್ಯಾರ್ಥಿನಿ ನವಮಿ ವಿಶ್ವನಾಥ ಭಟ್ ಇವಳು ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ.


ಪ್ರಥಮ ಸ್ಥಾನ ಪಡೆದ ನವಮಿ ಭಟ್ ಇವಳಿಗೆ ವಿದ್ಯಾಪ್ರಬೋಧಿನಿ ಕಾಲೇಜಿನ ಪ್ರಾಂಶುಪಾಲರಾದ ಮನಿಶಾ ಕುಲಕರ್ಣಿ ರವರು ಪ್ರಶಸ್ತಿ ಪ್ರದಾನ ಮಾಡಿದರು.


ವಿದ್ಯಾರ್ಥಿನಿ ನವಮಿ ಭಟ್ ಇವಳು ಈ ಹಿಂದೆಯೂ ಕೂಡ ಭಗವದ್ಗೀತಾ ಕಂಠಪಾಠದ ಹಲವು ಸ್ಫರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾಳೆ. ವಿದ್ಯಾರ್ಥಿನಿ ನವಮಿ ಇವಳ ತಂದೆ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ತೆರೆಗಾಳಿ ಮೂಲದವರು. ಇವರು ಉದ್ಯೋಗದ ನಿಮಿತ್ತ ಪಣಜಿ ಸಮೀಪದ ಮೆರಶಿಯಲ್ಲಿ ನೆಲೆಸಿದ್ದಾರೆ.


ವಿದ್ಯಾರ್ಥಿನಿ ನವಿ ಭಟ್ ಇವಳಿಗೆ ಗೋವಾದ ವಿವಿಧ ಸಂಘಟನೆಗಳಿಂದ ಪ್ರಶಂಸೆ ವ್ಯಕ್ತವಾಗಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top