ಡಾ. ಕೋಟ ಶಿವರಾಮ ಕಾರಂತರ 27ನೇ ಸ್ಮೃತಿ ದಿನಾಚರಣೆ

Upayuktha
0


ಸಾಲಿಗ್ರಾಮ: ಡಾ ಕೋಟ ಶಿವರಾಮ ಕಾರಂತರ 27 ನೇ ಸ್ಮೃತಿ ದಿನಾಚರಣೆಯನ್ನು ಡಾ. ಕೋಟ ಶಿವರಾಮ ಕಾರಂತ ರಿಸರ್ಚ್ ಮತ್ತು ಸ್ಟಡಿ ಸೆಂಟರ್ ಟ್ರಸ್ಟ್ ಹಾಗೂ ಗೆಳೆಯರ ಬಳಗ (ರಿ.) ಕಾರ್ಕಡ, ಸಾಲಿಗ್ರಾಮ ಇವರ ಸಂಯುಕ್ತ ಆಶ್ರಯದಲ್ಲಿ ಕಾರಂತ ಸ್ಮೃತಿ ಚಿತ್ರಶಾಲೆಯಲ್ಲಿ ಆಚರಿಸಲಾಯಿತು.


ಕೆ. ಸೀತಾರಾಮ ಸೋಮಯಾಜಿ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಎಲ್ಲಾ ಗಣ್ಯರು ಕಾರಂತರ ಪೋಟೋಗೆ ಪುಷ್ಪ ನಮನ ಸಲ್ಲಿಸಿದರು. ಸಂಸ್ಥೆಯ ಅಧ್ಯಕ್ಷ ಬಿ.ಎಂ. ಗುರುರಾಜ ರಾವ್ ಎಲ್ಲರನ್ನು ಸ್ವಾಗತಿಸಿ, ಶಿವರಾಮ ಕಾರಂತರ ನೆನಪುಗಳು ಮುಂದಿನ ತಲೆಮಾರಿಗೆ ತೆಗೆದುಕೊಂಡು ಹೋಗುವ ಬಗ್ಗೆಎಲ್ಲರೂ ಶ್ರಮ ವಹಿಸಬೇಕು ಎಂದರು.


ಸಮಾರಂಭದ ಮುಖ್ಯ ಅತಿಥಿ ಕಾರ್ಕಡ ಗೆಳೆಯರ ಬಳಗದ ಅಧ್ಯಕ್ಷ ಕೆ. ತಾರಾನಾಥ ಹೊಳ್ಳ, ಕಾರಂತರ ಸಮಾಜಮುಖೀ ಕಾಳಜಿ ಹಾಗೂ ಬಹುಮುಖ ಪ್ರತಿಭೆಯನ್ನು ಶ್ಲಾಘಿಸಿದರು. ಕಾರಂತರ ನೇರ ನುಡಿಯ ಬಗ್ಗೆ ಕೆಲವು ನೆನಪುಗಳನ್ನು ಹಂಚಿಕೊಂಡರು. ಕಾರ್ಯದರ್ಶಿ ನಾರಾಯಣ ಆಚಾರ್ಯ ವಂದಿಸಿದರು.


ಕೆ. ಪಂಜು ಪೂಜಾರಿ, ಉದ್ಯಮಿ ಸಂದೀಪ್ ಶೆಟ್ಟಿ, ಕೆ. ಜಗದೀಶ ಆಚಾರ್ಯ, ಕೆ. ರಘ ಭಂಡಾರಿ, ಕೆ. ಶ್ರೀಪತಿ ಆಚಾರ್ಯ, ವಿವೇಕ ಹಿಂದಿನ ವಿದ್ಯಾರ್ಥಿ ಸಂಘ ಕೋಟದ ಕಾರ್ಯದರ್ಶಿ ಸುಧಾಕರ ಪಿ. ಸಾಲಿಗ್ರಾಮ ಪಟ್ಟಣ ಪಂಚಾಯತ್‌ನ ಕೆ. ಸಂಜೀವ ದೇವಾಡಿಗ, ಸಂಗೀತಾ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top