ಶ್ರೀ ಭಾರತೀ ಇಂಗ್ಲಿಷ್ ಮೀಡಿಯಂ ಹೈಸ್ಕೂಲಿನಲ್ಲಿ ವಿಜ್ಞಾನ ಮಾದರಿ ರಚನಾ ಸ್ಪರ್ಧೆ

Upayuktha
0

 



ನಂತೂರು: ಮಂಗಳೂರು ನಂತೂರು ಶ್ರೀ ಭಾರತೀ ಇಂಗ್ಲಿಷ್ ಮೀಡಿಯಂ ಹೈಸ್ಕೂಲಿನ ವಿಜ್ಞಾನ ಸಂಘದ ವತಿಯಿಂದ ಶನಿವಾರ ಅಂತರ್ ಶಾಲಾ ಮಟ್ಟದ "ಸೈಫೇರ್" ವಿಜ್ಞಾನ ಮಾದರಿ ರಚನಾ ಸ್ಪರ್ಧೆ ಆಯೋಜಿಸಲಾಯಿತು.


ಶಾಲಾ ಆವರಣದಲ್ಲಿರುವ ಶಂಕರಶ್ರೀ ಸಭಾಭವನದಲ್ಲಿ ನಡೆದ ಸಮಾರಂಭವನ್ನು ಸಹ್ಯಾದ್ರಿ ಎಂಜಿನಿಯರಿಂಗ್ ಅಂಡ್ ಮ್ಯಾನೇಜ್ ಮೆಂಟ್ ನ   ಡೀನ್ ರಮೇಶ ಕೆ.ಜಿ. ಅವರು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಕನಸು ಕಾಣುವುದರ ಜೊತೆಗೆ ಅದನ್ನು ನನಸು ಮಾಡುವ ಛಲವಿರಬೇಕೆಂದು ಹೇಳಿದರು.


ಈ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಭಾರತೀ ಸಮೂಹ ಸಂಸ್ಥೆಯ ನಿರ್ದೇಶಕ ಗಿರೀಶ್ ಎಂ ಅವರು ವಹಿಸಿದ್ದರು. ಸಕ್ಷಮ ಜಿಲ್ಲಾಧ್ಯಕ್ಷ ರಾಜಶೇಖರ ಭಟ್ ಕಾಕುಂಜೆ ಮಾತನಾಡಿ ಮಕ್ಕಳ ಕಲಿಕೆಯು ಪುಸ್ತಕಕ್ಕೆ ಮಾತ್ರ ಸೀಮಿತವಾಗಬಾರದು. ಎಲ್ಲವನ್ನೂ  ನೋಡುತ್ತಾ ಮಾಡುತ್ತಾ ಕಲಿಯ ಬೇಕೆಂದು ಸಲಹೆ ನೀಡಿದರು. 


ಶ್ರೀ ಭಾರತೀ ಸಮೂಹ ಸಂಸ್ಥೆಯ ಕಾರ್ಯದರ್ಶಿ ಶ್ರೀಕೃಷ್ಣ ನೀರಮೂಲೆ, ಮುಖ್ಯೋಪಾಧ್ಯಾಯರಾದ ಗಂಗಾರತ್ನ ಅವರು ಉಪಸ್ಥಿತರಿದ್ದರು.ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ವಿವಿಧ ಶಾಲೆಗಳ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದರು. ಸಂಸ್ಥೆಯ ವಿದ್ಯಾರ್ಥಿ ಸಂಘದ ಉಪನಾಯಕ ಶ್ರೇಯಸ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಾದ ರಿವಾನಿ ಸ್ವಾಗತಿಸಿ ಅನಂತಕೃಷ್ಣ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top