ಪಥ್ಯ ಬಲ್ಲವನಿಗೆ ಔಷಧಿ ಅಗತ್ಯವಿಲ್ಲ: ಡಾ ಸುರೇಶ ನೆಗಳಗುಳಿ

Upayuktha
0


ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಮಂಗಳೂರು ತಾಲೂಕು ವ್ಯಾಪ್ತಿಯ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮಡಿದಲ್ಲಿ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಮಂಗಳೂರು ನಗರದ ಗರೋಡಿ ಸರ್ವ ಮಂಗಳ ಭವನದಲ್ಲಿ ಹಮ್ಮಿಕೊಳ್ಳಲಾಯಿತು.


ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಜೆಪ್ಪು ಗುಡ್ಡೆಗುತ್ತು ಸೂರ್ಯ ನಾರಾಯಣ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಣೇಶ್ ಗಟ್ಟಿ ಕಾರ್ಯಕ್ರಮ ಉದ್ಘಾಟನೆ ಮಾಡಿದರು.


ಮುಖ್ಯ ಅತಿಥಿಗಳಾಗಿ ಆಗಮಿಸಿರುವ ದ.ಕ ಜಿಲ್ಲೆಯ ನಿರ್ದೇಶಕ ಮಹಾಬಲ್ ಕುಲಾಲ್ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪರಿಕಲ್ಪನೆ ಹಾಗೂ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದ ಹುಟ್ಟು ಅದರ ಬೆಳವಣಿಗೆ ನಡೆದು ಬಂದ ಹಾದಿ, ಮಹಿಳೆಯರು ಸಮಾಜದಲ್ಲಿ ಸ್ವಾವಲಂಬಿಯಾಗಿ ಬದುಕನ್ನು ರೂಪಿಸಿಕೊಂಡು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಬೆಳೆಯಲು ಅವಕಾಶ ಮಾಡಿಕೊಟ್ಟಿದೆ. ಸಂಸಾರದ ಭಾರ, ಹತ್ತು ಹಲವು ಜವಾಬ್ದಾರಿಗಳನ್ನು ನಿಭಾಯಿಸುವ ಶಕ್ತಿಯನ್ನು ನೀಡಿ ಮಹಿಳೆಯರ ಬಾಳಿನಲ್ಲಿ ಹೊಸ ಚೈತನ್ಯ ತುಂಬಿದೆ. ಬ್ಯಾಂಕಿನ ಮೂಲಕ ಆರ್ಥಿಕ ಸಹಾಯವನ್ನು ಮಾಡಿ ಮಹಿಳೆಯರ ಬದುಕಿಗೆ ಬೆಳಕಾಗಿ ಧರ್ಮಸ್ಥಳ ಯೋಜನೆ ಕಾರ್ಯಕ್ರಮ ಅನುಷ್ಠಾನ ಮಾಡುತ್ತಿದೆ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ವಲಯ ಅಧ್ಯಕ್ಷೆ ಸರಳ ಕುಲಾಲ್, ಕೇಂದ್ರ ಒಕ್ಕೂಟ ಭ್ರಾಮರಿ ಜ್ಞಾನ ವಿಕಾಸ ಕೇಂದ್ರ ಸದಸ್ಯೆ ಗೀತಾ ಪ್ರವೀಣ್ ಉಪಸ್ಥಿತರಿದ್ದರು. ತಾಲೂಕು ಯೋಜನಾಧಿಕಾರಿ ಮಮತಾ ಶೆಟ್ಟಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳು ಆಗಬೇಕು ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ವಿಚಾರ ಗೋಷ್ಠಿಯಲ್ಲಿ ಮಹಿಳೆಯರು ಎದುರಿಸುವ ಸವಾಲುಗಳ ಬಗ್ಗೆ ಉಪನ್ಯಾಸಕಿ ಪಲ್ಲವಿ ರಾಜೇಶ್ ಮಾಹಿತಿ ನೀಡಿದರು. 


ಡಾ. ಭಾಗ್ಯಶ್ರೀ ಶರಣ ಪ್ರಕಾಶ್ ಪಾಟೀಲ್ ಹಾಗೂ ಸಂಪನ್ಮೂಲ ವ್ಯಕ್ತಿ, ಕಣಚೂರು ಆಯುರ್ವೇದ ವೈದ್ಯಕೀಯ ನಿರ್ದೇಶಕ ಡಾ ಸುರೇಶ ನೆಗಳಗುಳಿಯವರು ಕಾಲಮಾನಾನುಸಾರ ಉಪಯೋಗಿಸಬೇಕಾದ ಆಹಾರ ಸೇವನೆ ಬಗ್ಗೆ ಮಾಹಿತಿ ನೀಡಿದರು.


ಅವರು ಪಥ್ಯವಾಗುವ ಆಹಾರ ಸೇವನೆಯಿಂದ ರೋಗ ಬಾರದು ಹಾಗೂ ಪಥ್ಯವೇ ಮಾಡದಿದ್ದರೆ ಔಷಧಿಯೂ ನಿರರ್ಥಕ. ಆದ ಕಾರಣ ಆಯಾಯ ಕಾಲದಲ್ಲಿ ಉಂಟಾಗುವ ಹವಾಮಾನ ವೈಪರೀತ್ಯ ತಡೆಗಟ್ಟುವ ಆಹಾರ ಸೇವನೆ ಅಗತ್ಯ ಎಂದರು.


ಕಾರ್ಯಕ್ರಮದಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮ, ಆರತಿ ತಟ್ಟೆ ರಂಗೋಲಿ, ಪುಷ್ಪಗುಚ್ಛ ಸ್ಪರ್ಧೆ ನಡೆಯಿತು. ಬಹುಮಾನ ವನ್ನು ನೀಡಲಾಯಿತು.


ವಲಯ ಮೇಲ್ವಿಚಾರಕಿ ಶೋಭಾ ಐ, ಸಮನ್ವಯಾಧಿಕಾರಿ ಆಶಾ ಚಂದ್ರ, ತಾಲೂಕಿನ ಎಲ್ಲಾ ಜ್ಞಾನ ವಿಕಾಸ ಸೇವಾ ಪ್ರತಿನಿಧಿಗಳು ಮತ್ತು ಆರುನೂರು ಮಿಕ್ಕಿದ ಸದಸ್ಯರು ಭಾಗವಹಿಸಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top