ಮಂಗಳೂರು: 3SK ಅಕಾಡೆಮಿಯ ನಾಲ್ಕನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಬಾರೆಬೈಲಿನಲ್ಲಿರುವ ಸಂಸ್ಥೆಯ ಆವರಣದಲ್ಲಿ ಅಕಾಡೆಮಿಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ನಡೆದವು.
3SK ಅಕಾಡೆಮಿಯ ಸಂಸ್ಥಾಪಕಿ ಸಹನಾ ಕಾರ್ತಿಕ್ ಮತ್ತು ಕಾರ್ತಿಕ್ ಬಿ.ಎನ್ ರವರು ಬೆಳಗಿಸಿದ ಕ್ಯಾಂಡಲ್ ನ್ನು ಹೂಗುಚ್ಛವಾಗಿ ಅರಳಿಸುವ ವಿಶೇಷ ಜಾದೂ ಮೂಲಕ ಕಾರ್ಯಕ್ರಮದ ಉದ್ಘಾಟಿಸಿದರು.
ಆನಂತರ ಸಂಸ್ಥಾಪಕರ ಪುತ್ರಿ ಕುಮಾರಿ ಶ್ರೇಯಾ ಕೆ ಅಯ್ಯರ್ ರವರು ಕಲಾಸೃಷ್ಟಿ ಬಳಗದ ಜಾದೂ ಮೂಲಕ ಫ್ರೇಮ್ ಬಿಡುಗಡೆಗೊಳಿಸಿ ಜಾದೂ ಕಾರ್ಯಕ್ರಮಕ್ಜೆ ಚಾಲನೆ ನೀಡಿದರು.
ರಾಷ್ಟ್ರೀಯ ಪ್ರಶಸ್ತಿ ವಿಜೇತೆ ಪ್ರೊ. ಮುಬೀನ ಪರ್ವೀನ ತಾಜ್, ಅಂತಾರಾಷ್ಟ್ರೀಯ ಖ್ಯಾತಿಯ ಕುಮಾರಿ ಶಮಾ ಪರ್ವೀನ ತಾಜ್ ಮತ್ತು ಫಾತಿಮಾ ಶರೀಫ್, ಮಾಸ್ಟರ್ ಚಾಂದ್ ಷರೀಫ್ ಬಳಗದ ವತಿಯಂದ ಅತ್ಯಮೋಘ ಜಾದೂ ಕಾರ್ಯಕ್ರಮಗಳು ಸಂಪನ್ನವಾದುವು. ಈ ತಂಡದ ವಿವಿಧ ರೀತಿಯ ಕೈಚಳಕಗಳು ನೆರೆದವರನ್ನು ಮಂತ್ರಮುಗ್ಧಗೊಳಿಸಿದುವು.
ತರುವಾಯ ವಿವಿಧ ವಿನೋದಾವಳಿಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ವಿತರಣೆ ನಡೆಯಿತು. ಸಾರ್ವಜನಿಕರು, ವಿದ್ಯಾರ್ಥಿಗಳ ಹೆತ್ತವರೂ ಭಾಗಿಯಾಗಿದ್ದರು. ಸಂಸ್ಥೆಯ ಮುಖ್ಯಸ್ಥೆ ಸಹನಾ ಕಾರ್ತಿಕ್ ಸ್ವಾಗತಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ