ಪುತ್ತೂರು: ಪುತ್ತೂರಿನ ಸರ್ವತೋಮುಖ ಅಭಿವೃದ್ಧಿಗಾಗಿ ಧಾರ್ಮಿಕ ಕ್ಷೇತ್ರದಲ್ಲಿ, ಸಾಮಾಜಿಕ ಕ್ಷೇತ್ರದಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ, ಸಾಹಿತ್ಯ ಕ್ಷೇತ್ರದಲ್ಲಿ, ಉದ್ಯಮ ಕ್ಷೇತ್ರದಲ್ಲಿ ಜಿ ಎಲ್ ಆಚಾರ್ಯ ಅವರ ಕೊಡುಗೆ ಅಪಾರ. ನವಂಬರ್ 1924 ರಲ್ಲಿ ಜನಿಸಿದ ಕೊಡುಗೈ ದಾನಿ, ಧರ್ಮಾತ್ಮ ಜಿ.ಎಲ್ ಆಚಾರ್ಯ, 2024 ಅವರ ಜನ್ಮ ಶತಮಾನೋತ್ಸವ ವರ್ಷವಾಗಿದೆ.
ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸುದೀರ್ಘ 12 ವರ್ಷ ಸೇವೆಯನ್ನು ನೀಡಿದ್ದು ಕನ್ನಡ ಸಾಹಿತ್ಯ ಪರಿಷತ್ತಿಗೆ ಇವರ ಕೊಡುಗೆ ಅಪಾರ. ಈ ನಿಟ್ಟಿನಲ್ಲಿ ಅವರ ಜನ್ಮ ಶತಮಾನೋತ್ಸವವು ನವೆಂಬರ್ 17 ಭಾನುವಾರ ಆಶ್ಮಿ ಕಾಂಫರ್ಟ್ಸ್ ಕಿರು ಸಭಾಂಗಣದಲ್ಲಿ 'ಜಿ.ಎಲ್ ಆಚಾರ್ಯ ಸಂಸ್ಮರಣ' ಕಾರ್ಯಕ್ರಮವು ವಿವಿಧ ಗೋಷ್ಠಿಗಳ ಮೂಲಕ ಅವರು ನೀಡಿದ ಸೇವೆಯನ್ನು ಮತ್ತೊಮ್ಮೆ ನೆನಪಿಸುವ ಮೂಲಕ ಅತ್ಯಂತ ಅರ್ಥಪೂರ್ಣ ರೀತಿಯಲ್ಲಿ ಆಚರಿಸಲಾಯಿತು.
ಪುತ್ತೂರಿನ ಪ್ರತಿಷ್ಠಿತ ಸ್ವರ್ಣೋದ್ಯಮ ಮಳಿಗೆ ಜಿ.ಎಲ್ ಆಚಾರ್ಯ ಸಮೂಹ ಸಂಸ್ಥೆ ಹಾಗೂ ಜಿಎಲ್ ಆಚಾರ್ಯ ಜನ್ಮ ಶತಮಾನೋತ್ಸವ ಸಮಿತಿಯ ನೇತೃತ್ವದಲ್ಲಿ ಮುಂದಿನ ಒಂದು ವರ್ಷ ನಿರಂತರ ವಿವಿಧ ಕಾರ್ಯಕ್ರಮಗಳು ನಡೆಯಲಿದೆ. ಈ ನಿಟ್ಟಿನಲ್ಲಿ ಇದರ ಪ್ರಾರಂಭಿಕ ಕಾರ್ಯಕ್ರಮವು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ನಡೆದಿರುವುದು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿಗೆ ಒದಗಿದ ಭಾಗ್ಯವಾಗಿದೆ ಎಂದು ತಾಲೂಕು ಕಸಾಪ ಅಧ್ಯಕ್ಷ ಉಮೇಶ್ ನಾಯಕ್ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ