ಬದಿಯಡ್ಕ: ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಕಾರ್ಯಾಚರಿಸುತ್ತಾ ಇರುವ ಕುಮಾರಮಂಗಲದ ಧನ್ವಂತರಿ ಶ್ರೀವನ ಭಾನುವಾರ ಶ್ರೀ ಧನ್ವಂತರಿ ಪೂಜೆ ನಡೆಯಿತು.
ಬೆಳಗ್ಗೆ ದೀಪಪ್ರಜ್ವಲನೆ, ಧ್ವಜಾರೋಹಣದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಪೂಜಾಸೇವೆಗೈದವರು ಪೂಜಾಸಂಕಲ್ಪ ಕೈಗೊಂಡರು.
ಮುಳ್ಳೇರಿಯ ಮಂಡಲ ಧರ್ಮಕರ್ಮ ಸಂಯೋಜಕ ಕೇಶವ ಪ್ರಸಾದ ಕೂಟೇಲು ಅವರ ಮಾರ್ಗದರ್ಶನದಲ್ಲಿ ಪೂಜೆ ನಡೆಯಿತು. ಮುಳ್ಳೇರಿಯ ಮಂಡಲ ಗುರಿಕ್ಕಾರ ಮೊಗ್ರ ಸತ್ಯನಾರಾಯಣ ಭಟ್ಟ, ಅಧ್ಯಕ್ಷ ಕೃಷ್ಣಮೂರ್ತಿ ಮಾಡಾವು, ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕೆರೆಮೂಲೆ, ಜಯದೇವ ಖಂಡಿಗೆ, ಮಾತೃವಿಭಾಗದ ಈಶ್ವರಿ ಬೇರ್ಕಡವು, ಕುಸುಮಾ ಪೆರ್ಮುಖ, ಜ್ಯೋತಿಷಿ ಪುದುಕೋಳಿ ಕೃಷ್ಣಮೂರ್ತಿ, ವೇದಮೂರ್ತಿ ರಾಮಚಂದ್ರ ಭಟ್ ಕೋಡಿಯಡ್ಕ, ಡಾ| ವೈ.ವಿ.ಕೃಷ್ಣಮೂರ್ತಿ ಬದಿಯಡ್ಕ, ಧನ್ವಂತರಿ ಶ್ರೀವನದ ಅಧ್ಯಕ್ಷ ಹರಿಪ್ರಸಾದ ಪೆರ್ಮುಖ, ಸಂಚಾಲಕ ಗೋವಿಂದ ಬಳ್ಳಮೂಲೆ, ವಿವಿಧ ವಲಯಗಳ ಪದಾಧಿಕಾರಿಗಳು, ಗುರಿಕ್ಕಾರರು ಹಾಗೂ ಶಿಷ್ಯವೃಂದದವರು, ಸಾರ್ವಜನಿಕರು ಪಾಲ್ಗೊಂಡಿದ್ದರು.
ಧನ್ವಂತರಿ ಶ್ರೀವನಕ್ಕೆ ಸ್ಥಳದಾನಗೈದ ಮಧುರಕಾನನ ಕುಟುಂಬದವರ ಪರವಾಗಿ ರಾಮಚಂದ್ರ ಭಟ್ ದಂಪತಿಗಳು ಪೂಜಾಕರ್ತೃಗಳಾಗಿ ಪಾಲ್ಗೊಂಡರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ