ಮಂಗಳೂರು: ಸ್ಥಳೀಯ ಫಾದರ್ ಮುಲ್ಲರ್ಸ್ ಆಸ್ಪತ್ರೆಯ ಮಕ್ಕಳ ಚಿಕಿತ್ಸಾ ಹಾಗೂ ನರ್ಸಿಂಗ್ ವಿಭಾಗದ ವತಿಯಿಂದ ಮಕ್ಕಳ ದಿನಾಚರಣೆಯನ್ನು ಆಸ್ಪತ್ರೆಯ ಸಭಾಂಗಣದಲ್ಲಿ ವಿಶಿಷ್ಟವಾಗಿ ಆಚರಿಸಲಾಯಿತು.
ಇದೇ ವೇಳೆ ಸಣ್ಣ ಮಕ್ಕಳ ಮನಸೆಳೆಯಲು ಕಲಾಸೃಷ್ಟಿ ಬಳಗದ ಇನೊಳಿಯ ಬ್ಯಾರೀಸ್ ತಾಂತ್ರಿಕ ಸಂಸ್ಥೆಯ ಪ್ರೊಫೆಸರ್ ಹಾಗೂ ಜಾದೂ ಪ್ರಶಸ್ತಿ ವಿಜೇತೆ ಮುಬೀನಾ ಪರವೀನ್ ತಾಜ್ ಮತ್ತು ಕಲಾಸೃಷ್ಟಿ ಬಳಗದ ನಿರ್ದೇಶಕಿ ಅಂತಾರಾಷ್ಟ್ರೀಯ ಜಾದೂ ಪ್ರಶಸ್ತಿ ವಿಜೇತೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಸಾಧಾರಣ ಪ್ರತಿಭೆ ಪ್ರಶಸ್ತಿ ವಿಜೇತೆ ಶಮಾ ಪರವೀನ್ ಮತ್ತಿತರ ಕಲಾವಿದರು ಅನೇಕ ವಿಸ್ಮಯಕಾರೀ ಜಾದೂ ಪ್ರದರ್ಶನ ನೀಡಿದರು.
ಮಕ್ಕಳ ವಿಭಾಗದ ಮುಖ್ಯಸ್ಥ ಡಾ ಅನಿಲ್ ಶೆಟ್ಟಿಯವರ ಮೂಲಕ ಹಾಗೂ ನರ್ಸಿಂಗ್ ವಿಭಾಗ ಮುಖ್ಯಸ್ಥರ ಸಮ್ಮುಖದಲ್ಲಿ ಜಾದೂವಿನ ಮುಖಾಂತರವೇ ಉದ್ಘಾಟನೆ ಮಾಡಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಮುಬೀನಾರವರು ಚಿಕ್ಕ ಮಕ್ಕಳನ್ನೇ ವೇದಿಕೆಗೆ ಕರೆದು ಕೈ ಚಳಕ ತೋರಿಸಿದರು. ಈ ಪ್ರದರ್ಶನದ ಇನ್ನಿತರ ಮುಖ್ಯ ಕಲಾವಿದರಾಗಿ ಅಂಬಿಕಾ ವಿದ್ಯಾ ಸಂಸ್ಥೆಯ ಮಕ್ಕಳಾದ ಹತ್ತನೇ ತರಗತಿಯ ರೋಶನ್ ಷರೀಫ್ ಮತ್ತು ನಾಲ್ಕನೇ ತರಗತಿಯ ಚಾಙದ್ ಷರೀಫ್ ಅವರು ಅತ್ಯದ್ಭುತವಾದ ಹಲವಾರು ಮಾಯಾಜಾಲಗಳನ್ನು ಪ್ರದರ್ಶಿಸಿದರು.
ಫಾತಿಮಾ ಷರೀಫ್ ಮತ್ತು ಅಹ್ಮದ್ ಷರೀಫ್ ಅವರು ನಿರ್ವಹಣೆಯಲ್ಲಿ ಸಹಕರಿಸಿದ್ದರು. ಇದಲ್ಲದೆ ಸಂಸ್ಥೆಯ ವಿದ್ಯಾರ್ಥಿನಿಯರಿಂದ ಡ್ಯಾನ್ಸ್ ಮತ್ತು ಚಿಕ್ಕ ಮಕ್ಕಳ ಛದ್ಮವೇಷ, ಬಲೂನ್ ಜೋಡಣೆ ಮತ್ತು ಡ್ರಾಯಿಂಗ್ ಸ್ಪರ್ಧೆಗಳೂ ನಡೆದಿದ್ದುವು.
ಬಹುಮಾನ ವಿತರಣೆಯ ನಂತರ ಧನ್ಯವಾದ ಸಮರ್ಪಣೆಯೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.
ಮಂಗಳಾ ಆಸ್ಪತ್ರೆ ಹಾಗೂ ಕಣಚೂರು ಆಸ್ಪತ್ರೆಯ ಶಸ್ತ್ರ ಚಿಕಿತ್ಸಾ ವಿಭಾಗದ ಕ್ಷಾರ ತಜ್ಞ ಡಾ ಸುರೇಶ ನೆಗಳಗುಳಿ ಸಹಿತ ಇತರ ವಿಭಾಗದ ವೈದ್ಯರೂ, ಇಂಟರ್ನಿಗಳೂ, ವಿದ್ಯಾರ್ಥಿ ವಿದ್ಯಾರ್ಥಿನಿಯರೂ ಮಕ್ಕಳ ಪೋಷಕರೂ ಮತ್ತಿತರ ಗಣ್ಯ ವೈದ್ಯರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ