ಕಾರ್ತಿಕ ದೀಪೋತ್ಸವ: ಶ್ರೀ ಹೃದ್ಯಾ ಅಕಾಡಮಿ ತಂಡದಿಂದ ವಿಶೇಷ ಸಂಗೀತ- ನೃತ್ಯ ಪ್ರದರ್ಶನ

Chandrashekhara Kulamarva
0


ಬೆಂಗಳೂರು: ಶ್ರೀ ಕಾಶಿ ವಿಶ್ವನಾಥ ಸ್ವಾಮಿ ಬಯಲು ಬಸವೇಶ್ವರ ಸ್ವಾಮಿ ಅಭಿವೃದ್ಧಿ ಸೇವಾ ಸಮಿತಿಯು ಆಯೋಜಿಸಿದ ಗಿರಿಜಾ ಕಲ್ಯಾಣೋತ್ಸವ ಹಾಗೂ ಸಹಸ್ರ ಕಾರ್ತಿಕ ದೀಪೋತ್ಸವದ ಪ್ರಯುಕ್ತ ಕಾರ್ತಿಕ ಮಾಸದ ಕೊನೆಯ ಸೋಮವಾರ ಶ್ರೀ ಬಯಲು ಬಸವೇಶ್ವರ ಸ್ವಾಮಿ ಶ್ರೀ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.


ಕುಮಾರಿ ಹೃದ್ಯಾ ಭಟ್ ಕೆ. ಇವಳಿಂದ ಗಾಯನ ಹಾಗೂ ನೃತ್ಯ ಗುರು ಶ್ರೀಮತಿ ರೂಪಶ್ರೀ ಕೆ. ಎಸ್. ಅವರ ನಿರ್ದೇಶನದಲ್ಲಿ ಶ್ರೀ ಹೃದ್ಯಾ ಅಕಾಡೆಮಿ (ರಿ.) ತಂಡದ ವಿದ್ಯಾರ್ಥಿನಿಯರಾದ ಪ್ರಣತಿ, ಸೋನಿಕ, ತನ್ವಿಕ, ಸೇಜಲ್, ಅಭಿಶೃತ, ನಿದರ್ಶ, ಚಾರ್ವಿ, ಪ್ರಣಮ್ಯ, ವಿಶೃತ, ಅನನ್ಯ, ಐಶಾನಿ, ಹಾಗೂ ಹೃದ್ಯಾ ಪ್ರಸ್ತುತ ಪಡಿಸಿದ ನೃತ್ಯ ಕಾರ್ಯಕ್ರಮವು ಸಹಸ್ರ ಸಂಖ್ಯೆಯಲ್ಲಿ ನೆರೆದಿದ್ದ ಜನಮನ ಸೂರೆಗೊಂಡಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top