ಕಣಚೂರು ಆಯುರ್ವೇದ ಆಸ್ಪತ್ರೆ ಅಸೈಗೋಳಿಯಲ್ಲಿ ಉಚಿತ ಚಿಕಿತ್ಸಾ ಶಿಬಿರ

Upayuktha
1 minute read
0


ಮಂಗಳೂರು: ಅಸೈಗೋಳಿಯಲ್ಲಿರುವ ಕರ್ನಾಟಕ ಏಳನೇ ಬೆಟಾಲಿಯನ್ ರಿಸರ್ವ್ ಪೊಲೀಸ್ ಘಟಕದ ಪೊಲೀಸ್ ವೃತ್ತಿಪರರಿಗೆ ಉಚಿತವಾಗಿ ದೇಹ ತಪಾಸಣೆ ಮತ್ತು ಚಿಕಿತ್ಸೆಗಳನ್ನು ಇಂದು (ನ.25) ಕಣಚೂರು ಆಯುರ್ವೇದ ಆಸ್ಪತ್ರೆಯ ವತಿಯಿಂದ ನೀಡಲಾಯಿತು.


ಬೆಟಾಲಿಯನ್‌ನ ಮುಖ್ಯ ಅಧೀಕ್ಷಕ ಸತ್ಯನಾರಾಯಣ ಅವರ ಅಧ್ಯಕ್ಷತೆಯಲ್ಲಿ ಶಿಬಿರದ ವಿಧ್ಯುಕ್ತ ಉದ್ಘಾಟನೆ ಮಾಡಲಾಯಿತು.  ಕಣಚೂರು ಆಯುರ್ವೇದ ಆಸ್ಪತ್ರೆಯ ಮುಖ್ಯ ವೈದ್ಯಕೀಯ ನಿರ್ದೇಶಕ ಡಾ ಸುರೇಶ ನೆಗಳಗುಳಿ ಅವರು ದೀಪ ಬೆಳಗಿಸಿ ಶಿಬಿರಕ್ಕೆ ಚಾಲನೆ ನೀಡಿದರು. 


ಅವರು ಮಾತನಾಡುತ್ತಾ, ದೇಶ ಸೇವಕರಾದ ಪೋಲೀಸ್ ಅಧಿಕಾರಿಗಳು ಸದಾ ಸೇವಾ ತತ್ಪರರಾಗಿರುತ್ತಾರೆ. ಕಾಯಿಲೆಗಳು ಯಾರನ್ನೂ ಬಿಡಲಾರದು. ಕಾಯಿಲೆ ಬರದಂತೆ ನೋಡಿಕೊಳ್ಳುವುದೂ ಒಂದು ಅಗತ್ಯ ವಿಚಾರ. ಈ  ನಿಟ್ಟಿನಲ್ಲಿ ಆಯುರ್ವೇದದ್ದು ಮಹತ್ವದ ಪಾತ್ರವಿದೆ. ಜನ ಸೇವಾ ತತ್ಪರರಾಗಿ ಹಾಜಿ ಡಾ. ಕಣಚೂರು ಮೋನು ಅವರು ಹುಟ್ಟು ಹಾಕಿದ ಆಯುರ್ವೇದ ಆಸ್ಪತ್ರೆಯು ಆಯುರ್ವೇದದ ಎಲ್ಲಾ ವಿಭಾಗಗಳೂ ಪಂಚಕರ್ಮ ಶಸ್ತ್ರ ಕರ್ಮ ಸ್ತ್ರೀರೋಗ ಕಣ್ಣು ಕಿವಿ ಮೂಗು ಚರ್ಮ ಮುಂತಾದ ಚಿಕಿತ್ಸಾ ಸೌಲಭ್ಯಗಳ ಸಹಿತದ ಅತ್ಯಂತ ನುರಿತ ವೈದ್ಯ ತಂಡದಿಂದ ಕೂಡಿದೆ. ವಿಶೇಷವಾದ ರಕ್ಷಾ ಕವಚವೆಂಬ ರಿಯಾಯಿತಿ ದರದ ಚಿಕಿತ್ಸಾ ಸೌಲಭ್ಯವುಳ್ಳ ಕಾರ್ಡ್ ಸಹ ನೀಡಿ ಯಾವತ್ತೂ ಚಿಕಿತ್ಸಾ ಸೌಲಭ್ಯಪಡೆಯುವಂತೆ ಮಾಡಲಾಗಿದೆ ಎಂದರು.


ಅಧ್ಯಕ್ಷ ಭಾಷಣ ಮಾಡುತ್ತಾ ಕಮಾಂಡರ್ ಸತ್ಯನಾರಾಯಣ ಅವರು ಕಣಚೂರು ಆಯುರ್ವೇದ ಆಸ್ಪತ್ರೆಯ ವತಿಯಿಂದ ನಡೆಸಲಾಗುವ ಉಚಿತ ಸೇವಾ ಕಾರ್ಯಕ್ರಮಗಳನ್ನು ಶ್ಲಾಘಿಸಿದರು. ಸುಮಾರು 350 ಮಂದಿ ಈ ಸೌಲಭ್ಯದ ಸದುಪಯೋಗ ಪಡೆದರು.


ಆಸ್ಪತ್ರೆಯ ವೈದ್ಯಕೀಯ ಮುಖ್ಯಸ್ಥ ಡಾ. ಕಾರ್ತಿಕ್ ಶೇಟ್, ಡಾ. ಕೇಶವ ರಾಜ್, ಡಾ ಸೌಮ್ಯ ಅಶೋಕ್, ಡಾ ಚರಣ್, ಡಾ ರಾಜೇಶ್, ಡಾ ಮೈನಾಜ್ ರವರು ತಪಾಸಣೆ ನಡೆಸಿದರು.ದೀಕ್ಷಾ, ಶ್ರಾವ್ಯಾ ಹಾಗೂ ತಿಟ್ಟಿ ಯವರು ಸಹಾಯಕರಾಗಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top