ನವೆಂಬರ್ 26: ಭಾರತದ ಸಂವಿಧಾನ ದಿನ

Upayuktha
0


ಬ್ಬ ಮನುಷ್ಯನ ದೇಹಕ್ಕೆ ಶಿರವೆಷ್ಟು ಮುಖ್ಯವೋ ಹಾಗೇ ಒಂದು ರಾಷ್ಟ್ರಕ್ಕೆ ಸಂವಿಧಾನ ಬಹಳ ಮುಖ್ಯ. ದೇಶದ ಅಭಿವೃದ್ಧಿಗೆ ಸಂವಿಧಾನವು ರಾಷ್ಟ್ರದ ಶಿರವಾಗಿ ಕಾರ್ಯನಿರ್ವಹಿಸುವತ್ತದೆ. ವಿಶ್ವದ ಅತ್ಯಂತ ದೊಡ್ಡ ಸಂವಿಧಾನವೆಂಬ ಹೆಗ್ಗಳಿಕೆಗೆ ಪಾತ್ರವಾದ ನಮ್ಮ ಸಂವಿಧಾನವು ನವೆಂಬರ್ 26, 1949 ರಂದು ಅಂಗೀಕರಿಸಿ, ಜನವರಿ 26, 1950 ರಂದು ಜಾರಿಗೆ ಬಂದಿತು. ಸಂವಿಧಾನವೆಂದರೆ ಒಂದು ರಾಷ್ಟ್ರದ ಮೂಲಭೂತ ಕಾನೂನುಗಳ ಭಂಡಾರ. ಇದು ರಾಷ್ಟ್ರದ ಆಡಳಿತ ವ್ಯವಸ್ಥೆಗೆ ಚೌಕಟ್ಟನ್ನು ಒದಗಿಸುತ್ತದೆ. 1946 ರಲ್ಲಿ ಭಾರತೀಯರಿಂದ ಕೂಡಿದ ಸಂವಿಧಾನ ರಚನಾ ಸಭೆಯನ್ನು ರಚಿಸಲಾಯಿತು. ಈ ಸಭೆಯು 389 ಸದಸ್ಯರನ್ನು ಒಳಗೊಂಡಿತ್ತು. ಸಂವಿಧಾನ ರಚನಾ ಸಭೆಯ ಮೊದಲ ಅಧಿವೇಶನ ಡಿಸೆಂಬರ್ 9, 1946 ರಂದು ನಡೆಯಿತು. ಈ ಸಭೆಗೆ ಸಚ್ಚಿದಾನಂದ ಸಿನ್ಹಾ ಹಂಗಾಮಿ ಅಧ್ಯಕ್ಷರಾಗಿದ್ದರು.


ಡಿಸೆಂಬರ್ 11, 1946 ರಂದು ಡಾ.ರಾಜೇಂದ್ರಪ್ರಸಾದ್ ರವರನ್ನು ಖಾಯಂ ಅಧ್ಯಕ್ಷರನ್ನಾಗಿಯೂ ಮತ್ತು ಟಿ. ಟಿ ಕೃಷ್ಣಮಾಚಾರಿಯವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಜವಾಹರಲಾಲ್ ನೆಹರೂ, ಸರ್ದಾರ್ ವಲ್ಲಭಭಾಯಿ ಪಟೇಲ್, ಡಾ. ಬಿ. ಆರ್. ಅಂಬೇಡ್ಕರ್, ಮೌಲಾನ ಅಬುಲ್ ಕಲಾಂ ಅಜಾದ್, ಸಿ. ರಾಜಗೋಪಾಲಚಾರಿ, ಕೆ.ಎಂ. ಮುನ್ಷಿ, ಶ್ರೀಮತಿ ಸರೋಜಿನಿ ನಾಯ್ಡು, ಶ್ರೀಮತಿ ಸುಚೇತ ಕೃಪಲಾನಿ, ಕರ್ನಾಟಕದ ಎಸ್. ನಿಜಲಿಂಗಪ್ಪ, ಕೆ. ಸಿ. ರೆಡ್ಡಿ, ಕೆಂಗಲ್ ಹನುಮಂತಯ್ಯ, ಟೇಕೂರು ಸುಬ್ರಹ್ಮಣ್ಯಂ ಇನ್ನು ಅನೇಕರು ಸಂವಿಧಾನ ರಚನೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ.


ನಮ್ಮ ಸಂವಿಧಾನವನ್ನು ರಚಿಸುವ ಕಾರ್ಯವು 2 ವರ್ಷ, 11 ತಿಂಗಳು ಮತ್ತು 18 ದಿನಗಳನ್ನು ತೆಗೆದುಕೊಂಡಿತು. ಇದರಲ್ಲಿ 165 ದಿನಗಳ ಅವಧಿಯಲ್ಲಿ 11 ಸಭೆಗಳು ನಡೆದವು. ಭಾರತದ ಸಂವಿಧಾನ ಅಂತಿಮ ಕರಡಿನ ಎರಡು ಕೈ-ಲಿಖಿತ ಪ್ರತಿಗಳಲ್ಲಿ (ಹಿಂದಿ ಮತ್ತು ಇಂಗ್ಲಿಷ್) 616 ಸಹಿಗಳನ್ನು ವಿಧಾನಸಭೆಯ 308 ಸದಸ್ಯರು ಮಾಡಿದರು. ಬ್ರಿಟಿಷ್ ಸರ್ಕಾರ ಹೊರಡಿಸಿದ 1909,1919, ಮತ್ತು 1935 ರ ಕಾಯಿದೆ, ಬ್ರಿಟನ್ನಿನ ಸಂಸದೀಯ ವ್ಯವಸ್ಥೆ, ಅಮೆರಿಕಾದ ಬಿಲ್ ರೈಟರ್, ಐರ್ಲೆಂಡಿನ ಸಾಮಾಜಿಕ ನಿರ್ದೇಶಕ ತತ್ವಗಳು ಮುಂತಾದವುಗಳನ್ನು ನಮ್ಮ ಸಂವಿಧಾನಕ್ಕೆ ಅಳವಡಿಸಿಕೊಳ್ಳಲು ನಿರ್ಣಯಿಸಲಾಯಿತು.  ಸಂವಿಧಾನವನ್ನು ವಿವರವಾಗಿ ಪರಿಶೀಲನೆ ಮಾಡಲು ಅಂತ ‘ಕರಡು ರಚನಾ ಸಮಿತಿ ' ಯನ್ನು ರಚನೆ ಮಾಡಿಕೊಂಡಿದ್ದರು.


ಸಂವಿಧಾನ ರಚನಾ ಸಭೆ 22 ಸಮಿತಿಗಳು, 5 ಉಪಸಮಿತಿಗಳನ್ನು ಹೊಂದಿದ್ದಿತು. ಅತೀ ಮುಖ್ಯವಾದದ್ದು ಕರಡು ಸಮಿತಿ. ಡಾ ll ಬಿ. ಆರ್. ಅಂಬೇಡ್ಕರ್ ಇದರ ಅಧ್ಯಕ್ಷರಾಗಿದ್ದರು. ಇವರು ಸಲ್ಲಿಸಿದ ಅಪಾರ ಕೊಡುಗೆಯನ್ನು ಆಧರಿಸಿ ಇವರನ್ನು 'ಭಾರತದ ಸಂವಿಧಾನ ಶಿಲ್ಪಿ' ಎಂದು ಕರೆಯುತ್ತಾರೆ. ನಮ್ಮ ಸಂವಿಧಾನದ ಪೂರ್ವ ಪೀಠಿಕೆಯಲ್ಲಿ ಸಂವಿಧಾನದ ರೂಪುರೇಷೆ, ಮೌಲ್ಯ ಸಿದ್ಧಾಂತ ಮತ್ತು ಉದ್ದೇಶಗಳು ವ್ಯಕ್ತವಾಗಿದೆ. ಇದನ್ನು 'ಸಂವಿಧಾನದ ಒಡವೆ' ಹಾಗೂ ಕೆ. ಎಂ. ಮುನ್ಷಿರವರು ಇದನ್ನು 'ರಾಜಕೀಯ ಜಾತಕ' ಎಂದು ಕರೆಯುತ್ತಾರೆ.


ನಮ್ಮ ಸಂವಿಧಾನವು 25 ಭಾಗ, 448 ವಿಧಿ, 12 ಪರಿಚ್ಛೇದ ಮತ್ತು ಬಹಳಷ್ಟು ತಿದ್ದುಪಡಿಗಳನ್ನು ಒಳಗೊಂಡಿದೆ. ನಮ್ಮ ಸಂವಿಧಾನವು ಲಿಖಿತ ಮತ್ತು ಬೃಹತ್ ಸಂವಿಧಾನವಾಗಿದೆ. ಭಾರತದ, ಸಂವಿಧಾನವು ಅತಿ ಸುಲಭವೂ ಆಗಿರದೆ, ಅತಿ ಕಠಿಣವೂ ಆಗಿರದೆ ಇರುವ ಕಾರಣ ಈ ಸಂವಿಧಾನವನ್ನು ನಮ್ಯ ಮತ್ತು ಅನಮ್ಯ ಸಂವಿಧಾನ ಎಂದು ಕರೆಯಲಾಗುತ್ತದೆ. ಸಂಸದೀಯ ಸರ್ಕಾರ ಪದ್ಧತಿ, ಗಣತಂತ್ರ ವ್ಯವಸ್ಥೆ, ಸಂಯುಕ್ತ ಪದ್ಧತಿ, 6 ಮೂಲಭೂತ ಹಕ್ಕುಗಳು, 11 ಮೂಲಭೂತ ಕರ್ತವ್ಯಗಳು, ರಾಜ್ಯ ನಿರ್ದೇಶಕ ತತ್ವಗಳು, ಸ್ವತಂತ್ರ ಮತ್ತು ಏಕೀಕೃತ ನ್ಯಾಯಾಂಗ ವ್ಯವಸ್ಥೆ, ಏಕ ಪೌರತ್ವ, ವಯಸ್ಕ ಮತದಾನ ಪದ್ಧತಿ, ದ್ವಿಸದನ ಶಾಸಕಾಂಗ, ಈ ಪಕ್ಷ ಪದ್ಧತಿ ಸೇರಿದಂತೆ ಬಹಳಷ್ಟು ಲಕ್ಷಣಗಳೊಳಗೊಂಡಿದೆ.


ನಮ್ಮದು ಗಣತಂತ್ರ ವ್ಯವಸ್ಥೆಯುಳ್ಳ ಸಂವಿಧಾನವಾಗಿದೆ. ಈ ನಮ್ಮ ಹೆಮ್ಮೆಯ ಸಂವಿಧಾನದ ಮೂಲ ಕೈಬರಹದ ಪ್ರತಿಗಳನ್ನು ಹೀಲಿಯಂ ತುಂಬಿದ ಪೆಟ್ಟಿಗೆಯಲ್ಲಿ ಸಂಸತ್ ಭವನದ ಗ್ರಂಥಾಲಯದಲ್ಲಿ ಭದ್ರವಾಗಿ ಇಡಲಾಗಿದೆ. 1950 ಜನವರಿ 26 ರಂದು ಸಂವಿಧಾನವನ್ನು ಜಾರಿಗೆ ತಂದು ಗಣರಾಜ್ಯವಾದ ದಿನವನ್ನು ಗಣರಾಜ್ಯೋತ್ಸವ ಎಂದು ಆಚರಿಸಲಾಗುತ್ತದೆ. ನಮ್ಮ ಸಂವಿಧಾನದ ಆಶಯವನ್ನು ಅರಿತು ಒಳ್ಳೆಯ ಪ್ರಜೆಗಳಾಗಿ ನಮ್ಮ ರಾಷ್ಟ್ರದ ಘನತೆಯನ್ನು ಸಾರುವ ವ್ಯಕ್ತಿಗಳಾಗಿ ಬದುಕೋಣ ಹಾಗೂ ಎಲ್ಲರೊಡನೆ ಭ್ರಾತೃತ್ವ, ಸೌಹಾರ್ದತೆಯಿಂದ ನಡೆದುಕೊಳ್ಳೋಣ.  




- ಕು|| ಸುಕನ್ಯ

10ನೇ ತರಗತಿ ವಿದ್ಯಾರ್ಥಿ

ಜಿ.ಜಿ.ಜೆ.ಸಿ. (ಪ್ರಧಾನ) ಗಂಧದಕೋಠಿ, ಹಾಸನ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top