'ಎಕ್ಸೆಲ್ಸಿಯರ್ ಪ್ರೀ- ಯುನಿಕ್ 2024' ಸ್ಪರ್ಧೆ: ಫಿಲೋಮಿನಾ ಪ ಪೂ ಕಾಲೇಜಿನ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿ

Upayuktha
0


ಪುತ್ತೂರು: ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜು ಮಂಗಳೂರು ಆಯೋಜಿಸಿದ 'ಎಕ್ಸೆಲ್ಸಿಯರ್ ಪ್ರೀ- ಯುನಿಕ್ 2024' ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ.


ರಸಪ್ರಶ್ನೆಯಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ಸೃಧನ್ ಆಳ್ವ. ಕೆ ಹಾಗೂ ಅರುಣ್ ನೋಯೆಲ್ ಡಿ ಸೋಜಾ ದ್ವಿತೀಯ, ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ಜೀವನ್ ಮ್ಯಾಥ್ಯೂ, ಗೋಪಾಲ ಕೃಷ್ಣ ಪ್ರಭು ಪ್ರಥಮ ವಿಜ್ಞಾನ ವಿಭಾಗದ ವೈಭವ್ ವಿ ಕೆ ನಾಯ್ಕ್ ತೃತೀಯ, ಯುಗಳ ರೆಟ್ರೋ ನೃತ್ಯದಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ರೋಹನ್ ತೊರಾಸ್ ಮತ್ತು ಪ್ರಿನ್ಸಿ ಸೆಲ್ವಿ ಲೋಬೋ ತೃತೀಯ ಹಾಗೂ


ಕಿರು ಚಿತ್ರ ಸ್ಪರ್ಧೆಯಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ಹಲಾ ಫಾತಿಮಾ, ನಿಹಾ ನೌರೀನ್, ನಫೀಸಾತುಲ್ ಅಸೀಮಾ, ಶಝ ನಹ್ಲಾ ದ್ವಿತೀಯ ವಾಣಿಜ್ಯ ವಿಭಾಗದ ಆಯಿಶಾತ್ ಮುಫೀಜ, ತನಿಷ ಎಸ್ ಮತ್ತು ನಿಷ್ಮಾ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.


ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ. ಅಶೋಕ್ ರಾಯನ್ ಕ್ರಾಸ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಪ್ರದರ್ಶನ ಕಲಾ ಸಂಘದ ನಿರ್ದೇಶಕರಾದ ಸುಮನಾ ರಾವ್, ರಶ್ಮಿ ಪಿ.ಎಸ್ ಹಾಗೂ ಭರತ್ ಜಿ. ಪೈ ಉಪಸ್ಥಿತರಿದ್ದರು.



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top