ಕೃಷಿ ರಾಸಾಯನಿಕಗಳು ಜೀವ ವೈವಿಧ್ಯಕ್ಕೆ ಮಾರಕವಾಗದಿರಲಿ: ಶಾಸಕ ನಾರಾ ಭರತ್ ರೆಡ್ಡಿ

Upayuktha
0


ಬಳ್ಳಾರಿ: ಕೃಷಿ ಪರಿಕರಗಳ ಮಾರಾಟಗಾರರ ಜವಾಬ್ದಾರಿ ಹೆಚ್ಚಿಸಲು ಈ ಕಾರ್ಯಕ್ರಮ ಮಾಡಲಾಗಿದೆ, ಇದರ ಸದುಪಯೋಗ ಆಗಬೇಕು ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.


ಭಾರತ ಸರ್ಕಾರ, ಮ್ಯಾನೇಜ್(MANAGE) ಹೈದರಾಬಾದ್, ಕೃಷಿ ವಿಶ್ವವಿದ್ಯಾಲಯ ಧಾರವಾಡ ಮತ್ತು ರಾಯಚೂರು, ಕೃಷಿ ಇಲಾಖೆ - ಕೃಷಿ ತಂತ್ರಜ್ಞರ ಸಂಸ್ಥೆ ಬಳ್ಳಾರಿ ಇವರ ಸಹಯೋಗದಲ್ಲಿ ಗುರುವಾರ ಬೆಳಿಗ್ಗೆ ಬಳ್ಳಾರಿ ನಗರದ ಖಾಸಗಿ ಹೊಟೇಲ್'ನಲ್ಲಿ ಏರ್ಪಡಿಸಿದ್ದ (ಕೃಷಿ ವಿಸ್ತರಣಾ ಸೇವೆ) ಕೃಷಿ ಪರಿಕರಗಳ ಮಾರಾಟಗಾರರಿಗಾಗಿ ಡಿಪ್ಲೋಮಾ ಪ್ರಮಾಣ ಪತ್ರಗಳ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ನೀವು ಕೃಷಿಕರಿಗೆ ಒದಗಿಸುವ ರಾಸಾಯನಿಕ, ಗೊಬ್ಬರ ಅವರ ಬದುಕನ್ನೇ ನಿರ್ಧರಿಸುತ್ತದೆ, ನೀವು ನೀಡುವ ಯಾವುದೇ ವಸ್ತುಗಳು ಕೃಷಿ ಮಾತ್ರವಲ್ಲ, ಇಡೀ ಪರಿಸರದ ಮೇಲೆ ಪರಿಸರ ಬೀರುತ್ತದೆ, ಹೀಗಾಗಿ ನಿಮ್ಮ ಕೆಲಸ ಜವಾಬ್ದಾರಿಯುತವಾದದ್ದು ಎಂದರು.


ರೈತರಿಗೆ ಬೆಳೆ ಚೆನ್ನಾಗಿ ಬಂದರೆ ಮಾತ್ರ ನಿಮಗೆ ಹಣ ಸಿಗುತ್ತದೆ, ಇಲ್ಲದಿದ್ದರೆ ಕಷ್ಟ, ರೈತರಿಗಿಂತ ಸಂಕಷ್ಟದ ಕೆಲಸ ನಿಮ್ಮದು, ನೀವು ಉತ್ತಮ ರಾಸಾಯನಿಕ ನೀಡಿದಾಗ ಉತ್ತಮ ಬೆಳೆ ಬರುತ್ತದೆ, ಅದರಿಂದ ಜನರ ಆರೋಗ್ಯ ಕಾಪಾಡಲು ಸಾಧ್ಯ ಎಂದು ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.


ರಾಸಾಯನಿಕಗಳು ಜೀವ ವೈವಿಧ್ಯ, ಜೀವ ಸಂಕುಲವನ್ನು ಹಾಳು ಮಾಡಬಾರದು ಎಂದು ಹೇಳಿದ ಅವರು, ಮನುಷ್ಯ ಬದುಕಬೇಕು ಅದರ ಜೊತೆಗೆ ಎಲ್ಲ ಜೀವಿಗಳು ಕೂಡ ಉಳಿಯಬೇಕು ಎಂದರು.


ಕೃಷಿ ಪರಿಕರಗಳ ಮಾರಾಟಗಾರರ ಕೆಲಸ ಬುದ್ಧಿವಂತರ ಕೆಲಸ, ಜನರ ನಡುವೆ ಇರುವ, ಜನರ ಮನವೊಲಿಸುವ ಕೌಶಲ್ಯ ಇದ್ದವರು ಈ ಕೆಲಸ ಮಾಡಲು ಸಾಧ್ಯ ವಿನಃ ಕೇವಲ ಅತಿ ಹೆಚ್ಚು ಅಂಕ ಗಳಿಸುವರಿಗೆ ಕಷ್ಟಕರವಾದುದು ಎಂದರು.


ಡಿಪ್ಲೋಮಾ ಪ್ರಮಾಣ ಪತ್ರಗಳನ್ನು ವಿತರಿಸಿದರು.


ಈ ವೇಳೆ ಡಾ.ಜಾಧವ ಎಸ್.ಎನ್, ಡಾ.ಬಿ.ಡಿ.ಬಿರಾದಾರ, ಸೋಮಸುಂದರ ಕೆ.ಎಂ, ಮಂಜುನಾಥ ಎನ್, ಡಾ.ರವಿಶಂಕರ್ ಜಿ, ಡಾ.ಗೋವಿಂಪ್ಪ ಎಂ.ಆರ್, ದಯಾನಂದ ಎಂ ಸೇರಿದಂತೆ ಮೊದಲಾದವರು ಹಾಜರಿದ್ದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top