ಮಂಗಳೂರು: ಕ್ರೈಸ್ತ ಧರ್ಮಪ್ರಾಂತ್ಯದ ಅಧಿಕೃತ ಮಾತೆ ಮೇರಿಗೆ ಸಮರ್ಪಿಸಿದ ನಗರದ ಲೇಡಿಹಿಲ್ ಉರ್ವ ಚರ್ಚಿನ ದೇವಾಲಯದಲ್ಲಿರುವ ಪೊಂಪೈ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಹಬ್ಬ ಡಿ.8ರಂದು ನಡೆಯಲಿದ್ದು ಇದಕ್ಕೆ ಪೂರ್ವಭಾವಿಯಾಗಿ ನವದಿನಗಳ ನೊವೆನಾಕ್ಕೆ ಗುರುವಾರ ಚಾಲನೆ ನೀಡಲಾಯಿತು.
ಮಂಗಳೂರು ಎಪಿಸ್ಕೋಪಲ್ ಸಿಟಿ ಡೀನರಿಯ ಮುಖ್ಯಗುರು ಹಾಗೂ ಮಿಲಾಗ್ರಿಸ್ ಚರ್ಚಿನ ಪ್ರಧಾನ ಧರ್ಮಗುರು ಫಾ.ಬೊನವೆಂಚರ್ ನಜರೇತ್ ಅವರು ನವದಿನಗಳ ನೊವೆನಾಕ್ಕೆ ಚಾಲನೆಯನ್ನು ನೀಡಿದರು. ನೊವೆನಾಕ್ಕೂ ಮೊದಲು ಪುಣ್ಯ ಕ್ಷೇತ್ರದಲ್ಲಿ ಹಬ್ಬದ ಅಂಗವಾಗಿ ಧ್ವಜರೋಹಣವನ್ನು ನಡೆಸಲಾಯಿತು. ಈ ಸಂದರ್ಭ ಉರ್ವ ಲೇಡಿಹಿಲ್ ಚರ್ಚಿನ ಪ್ರಧಾನ ಧರ್ಮಗುರು ಫಾ. ಬೆಂಜಮಿನ್ ಪಿಂಟೋ, ಸಹಾಯಕ ಧರ್ಮಗುರು ಫಾ. ಲ್ಯಾನ್ಸನ್ ಪಿಂಟೋ, ವಿಶ್ರಾಂತ ಧರ್ಮಗುರು ಫಾ. ಹೆನ್ರಿ ಸಿಕ್ವೇರಾ, ಚರ್ಚಿನ ಪಾಲನಾ ಸಮಿತಿ ಉಪಾಧ್ಯಕ್ಷ ಲೋಯ್ಡ್ ಲೋಬೋ, ಕರ‍್ಯದರ್ಶಿ ಸಿಲ್ವಿಯಾ ಮಸ್ಕರೇನಸ್, 21 ಆಯೋಗದ ಸಂಯೋಜಕ ಕೆವಿನ್ ಮಾರ್ಟಿಸ್ ಸೇರಿದಂತೆ ನೂರಾರು ಭಕ್ತಾದಿಗಳು ಹಾಜರಿದ್ದರು. ಡಿ.7ರ ವರೆಗೆ ನಾನಾ ವಿಷಯಗಳಲ್ಲಿ ಒಂಬತ್ತು ಧರ್ಮಗುರುಗಳ ನೇತೃತ್ವದಲ್ಲಿ ನವ ದಿನಗಳ ನೊವೆನಾಗಳು ಸಾಗಲಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ