ಧರ್ಮಸ್ಥಳ: ಧರ್ಮಸ್ಥಳ ಲಕ್ಷದೀಪೋತ್ಸವ ಪ್ರಯುಕ್ತ ವಸ್ತು ಪ್ರದರ್ಶನ ಮಂಟಪದಲ್ಲಿ ಎರಡನೇಯ ದಿನವಾದ ಬುಧವಾರ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು. ವಿದುಷಿ.ಎಮ್‌ಎಸ್.ಕೀರ್ತನಾ ಮತ್ತು ಎಮ್.ಎಸ್.ಪ್ರಾರ್ಥನಾ ಮೈಸೂರು ಗಾನಸುಧೇ ಜನರ ಮನಸನ್ನು ಸೂರೆಗೊಳಿಸಿತು.
‘ಸೌರಾಷ್ಟ್ರ ಸೋಮನಾಥಂಚ ಶ್ರೀಶೈಲೇ ಮಲ್ಲಿಕಾರ್ಜುನೌ’ ಎಂಬ ಶಿವನ ಶ್ಲೋಕದಿಂದ ಕಾರ್ಯಕ್ರಮವನ್ನು ಪ್ರಾರಂಭಿಸಿ ‘ಬ್ರಹ್ಮ ಮುರಾರಿಸುರಾರ್ಚಿತ ಲಿಂಗ ನಿರ್ಮಲಭಾಷಿತ ಶೋಭಿತಲಿಂಗಂ’ ಎಂಬ ಲಿಂಗಾಷ್ಟಕವನ್ನು ಸುಶ್ರಾವ್ಯವಾಗಿ ಹಾಡಿದರು. ‘ನಮಸ್ತೇಸ್ತು ಭಗವನ್ ವಿಶ್ವೇಶ್ವರಾಯ ಮಹಾದೇವಾಯ ತೃಯಂಬಕಾಯ ತ್ರಿಪುರಾಂತಕಾಯ’ ಶಿವನಾಮವನ್ನು ಭಜಿಸುತ್ತಾ ‘ಭೋ ಶಂಭೋ ಶಿವ ಶಂಭೋ ಸ್ವಯಂ ಭೋ’ ಎಂಬ ಹಾಡು ಕೇಳುಗರ ಕರ್ಣಗಳಿಗೆ ಸೊಗಸಾಗಿ ಕೇಳಿಬಂತು.
‘ಶಿವ ಪಾಹಿಮಾಂ ಅಂಬಿಕೆ’ ಎಂಬ ಗೀತೆಯನ್ನು ಪ್ರಸ್ತುತಪಡಿಸಿ ‘ಶಕ್ತಿ ಪುರಾಧಿಶ್ವರಿ ಶಾರದೆ ಸರ್ವಮಂಗಳೆ ರ‍್ವಾಭಿಷ್ಠಪ್ರದೆ’ ಎಂಬ ಸಾಲುಗಳೊಂದಿಗೆ ದೇವಿಯನ್ನು ಭಜಿಸಿದರು. ‘ದೇವ ದೇವಾದಿ ದೇವಾ ಮಹಾದೇವ’ ಎಂಬ ಹಾಡು ಜನರ ಚಿತ್ತವನ್ನು ಆಕರ್ಷಿಸಿತು. ‘ಈಶಪತೀಶ ಜಗನ್ನಿವಾಸ ಜಗದೋಧ್ಧಾರ ನಮಃ ಶಿವಾಯ’ ಎಂದು ಇಬ್ಬರೂ ಗಾಯಕರೂ ಜೊತೆಯಾಗಿ ಸ್ವರವನ್ನು ಸೇರಿಸಿದರು. ‘ತಾಂ ತಾಂ ಉದನಿತೋಂತನನಂ ತನನನಂ’ ಎಂಬ ಹಾಡಿನ ಮೂಲಕ ಸಂಗೀತ ಕಾರ್ಯಕ್ರಮವನ್ನು ಸಂಪನ್ನಗೊಳಿಸಿದರು.
ಈ ಕಾರ್ಯಕ್ರಮದ ಹಿಮ್ಮೇಳದಲ್ಲಿ ವಯೋಲಿನ್ ಅಮೋಘ ನಾಡಾದೂರು, ಮೃದಂಗದಲ್ಲಿ ಹೆಚ್.ಎಲ್.ಶಿವಶಂಕರಸ್ವಾಮಿ. ತಬಲಾದಲ್ಲಿ ಅನುಶ್ ಶೆಟ್ಟಿ ಸಹಕರಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ