ಧರ್ಮಸ್ಥಳ: ರಾಗ, ಭಾವ, ತಾಳ ಮೇಳೈಸುವ ಲಯಲಹರಿ ಕಾರ್ಯಕ್ರಮವು ಧರ್ಮಸ್ಥಳ ಲಕ್ಷದೀಪೋತ್ಸವದ ವಸ್ತು ಪ್ರದರ್ಶನ ಮಂಟಪದಲ್ಲಿ ಎರಡನೇಯ ದಿನವಾದ ಬುಧವಾರ ಮೂಡಿಬಂತು.
ಕೊಳಲಿನ ನಾದವು ಸೇರಿದ್ದ ಜನರ ಮನಸ್ಸನ್ನು ಸೂರೆಗೊಳಿಸಿತು. ‘ಶಂಭೋ ಶಿವ ಶಂಭೋ ಸ್ವಯಂಭೋ’ ಎಂಬ ಶಿವನ ಕುರಿತ ನಾದ ಲಹರಿಯು ಜನರನ್ನು ಭಕ್ತಿಯ ಲೋಕದಲ್ಲಿ ಮಿಂದೇಳುವಂತೆ ಮಾಡಿತು. ಹಿಂದೋಳ ರಾಗದಲ್ಲಿ ತ್ಯಾಗರಾಜರ ರಚನೆಯ ‘ಸಾಮಜವರಗಮನ’ ಹಾಡು ನೆರೆದಿದ್ದ ಜನರಮನ ಸೆಳೆಯಿತು.
ಕೊನೆಯಲ್ಲಿ ಮಧ್ಯಮ ವರ್ಜ್ಯ ರಾಗದ ‘ಭಾಗ್ಯದ ಲಕ್ಷ್ಮೀ ಬಾರಮ್ಮ’ ಹಾಡನ್ನು ನುಡಿಸಿ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.
ಹಿಮ್ಮೇಳದಲ್ಲಿ ಸೊಗಸಾಗಿ ಸಾಥ್ ನೀಡಿ ಸಹಕರಿಸಿದರು. ಮೃದಂಗದಲ್ಲಿ ವಿದ್ವಾನ್ ಹೆಚ್.ಎಲ್ ಶಿವಶಂಕರ್ ಸ್ವಾಮಿ, ವಯೋಲಿನ್ ಅಮೋಘ್ ನಡದುರ್, ಕೋಳಲಿನಲ್ಲಿ ರಘು ಸಿಂಹಾ ಮೊರೆಲಿಂಗ್‌ನಲ್ಲಿ ವಿ.ಎಸ್ ರಮೇಶ್, ತಬಲಾ ಅನುಶ್ ಶೆಟ್ಟಿ, ರಿದಂ ಪಾಡ್ ಅನಂತ ಕೃಷ್ಣ ಸ್ವಾಮಿ, ತವಿಲ್‌ನಲ್ಲಿ ಎಂ ನಾರಾಯಣ್ ಅದ್ಭುತವಾಗಿ ಸಹಕರಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ