ಬೆಳ್ಳಾರೆ: ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ (ರಿ)ಮಂಗಳೂರು ಇದರ ವತಿಯಿಂದ ನೀಡಲ್ಪಡುವ, ಎರಡನೆಯ ವರ್ಷದ ಚೂಂತಾರು ಲಕ್ಷ್ಮೀನಾರಾಯಣ ನಾರಾಯಣ ಭಟ್ಟ ವೈದಿಕ ಪುರಸ್ಕಾರ ಸಮಾರಂಭವು ಚೂಂತಾರಿನ ಉಪಾಸನಾ ಮನೆಯಲ್ಲಿ ಜರಗಿತು.
ಪುರೋಹಿತರೂ ಪೌರೋಹಿತ್ಯ ಸಹಾಯಕರೂ ಆಗಿರುವ ಕಾಪುತಡ್ಕ ಶಂಕರನಾರಾಯಣ ಶಾಸ್ತ್ರಿ ಮತ್ತು ಶ್ರೀಮತಿ ಸವಿತಾ ಶಾಸ್ತ್ರಿ ಮತ್ತು ಪುರೋಹಿತರಾದ ಮಾಡಾವಿನ ಎಲ್ಯಡ್ಕ ಗೋಪಾಲಕೃಷ್ಣ ಭಟ್ ಮತ್ತು ಶ್ರೀಮತಿ ಸಹನಾ ಇವರನ್ನು ಚೂಂತಾರು ಮನೆತನದ ಕುಲಪುರೋಹಿತರಾದ ವಡ್ಯ ಶ್ರೀಕೃಷ್ಣ ಭಟ್ ಮತ್ತು ಹಿರಿಯರಾದ ಆನೆಕಾರ ಗಣಪ್ಪಯ್ಯನವರು ಫಲ ತಾಂಬೂಲ, ಕಾಣಿಕೆಯೊಂದಿಗೆ ದಂಪತಿಯುಕ್ತವಾಗಿ ಪುರಸ್ಕೃತರನ್ನು ಸನ್ಮಾನಿಸಿದರು. ಸನ್ಮಾನಿತರ ಪರವಾಗಿ ಶಂಕರನಾರಾಯಣ ಶಾಸ್ತ್ರಿಯವರು ಅನಿಸಿಕೆಗಳನ್ನು ತಿಳಿಸಿದರು.
ಸನ್ಮಾನ ಸಮಿತಿಯ ಸಂಚಾಲಕ ರಾಮಕೃಷ್ಣ ಭಟ್ ಚೂಂತಾರುರವರು ಸನ್ಮಾನ ಪತ್ರ ವಾಚಿಸಿ, ಸನ್ಮಾನಿತರನ್ನು ಅಭಿನಂದಿಸಿ ಮಾತನಾಡಿದರು.
ಸಮಾರಂಭದಲ್ಲಿ ಟ್ರಸ್ಟಿನ ಚೂಂತಾರು ಮಹೇಶ ಭಟ್, ಶ್ರೀಮತಿ ಗಂಗಾ ಮಹೇಶ್, ಶ್ರೀಮತಿ ಗೀತಾ ಗಣೇಶ್ ಕುರಿಯ, ಡಾ. ರಾಜಶ್ರೀ ಮೋಹನ್, ಚೊಕ್ಕಾಡಿ ಶ್ರೀರಾಮ ದೇವಾಲಯದ ಕಾರ್ಯದರ್ಶಿ ಕೃಷ್ಣಮೂರ್ತಿ ನೇಣಾರು ಉಪಸ್ಥಿತರಿದ್ದರು.
ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ಟ್ರಸ್ಟಿ ಡಾ. ಮುರಲೀಮೋಹನ ಚೂಂತಾರುರವರು ಸ್ವಾಗತಿಸಿ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ