ಸುರತ್ಕಲ್: ಭಾರತದ ಸಂವಿಧಾನ ಅಂಗೀಕರಿಸಿದ 75ನೇ ವರ್ಷಾಚರಣೆಯ ಅಂಗವಾಗಿ ನವೆಂಬರ್ 26ರಂದು ಹಿಂದು ವಿದ್ಯಾದಾಯಿನೀ ಸಂಘ (ರಿ), ಸುರತ್ಕಲ್‌ನ ಆಡಳಿತಕ್ಕೊಳಪಟ್ಟ ಗೋವಿಂದದಾಸ ಕಾಲೇಜು, ಸುರತ್ಕಲ್‌ನ ಆಂತರಿಕ ಗುಣಮಟ್ಟ ಖಾತರಿ ಕೋಶ, ಮಾನವ ಹಕ್ಕುಗಳ ವೇದಿಕೆ, ಮಾನವಿಕ ವಿಭಾಗ, ಗ್ರಾಹಕ ಹಕ್ಕುಗಳು ಮತ್ತು ಮಹಿಳಾ ವೇದಿಕೆಗಳ ಜಂಟಿ ಆಶ್ರಯದಲ್ಲಿ ಮಾನವ ಹಕ್ಕುಗಳ ಹೋರಾಟಗಾರ ‘ಜಸ್ಟಿಸ್ ಸುರೇಶ್ ಹೊಸಬೆಟ್ಟು ದತ್ತಿನಿಧಿ’ ಕಾರ್ಯಕ್ರಮದ ಅಂಗವಾಗಿ ‘ಮಾನವ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯ’ ವಿಷಯದ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣ ನಡೆಯಲಿದೆ.
ಅಂತರಾಷ್ಟ್ರೀಯ ವಿಷಯತಜ್ಞ, ಜವಾಹರ್‌ಲಾಲ್ ನೆಹರು ವಿಶ್ವವಿದ್ಯಾನಿಲಯ, ನವ ದೆಹಲಿ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ವಲೆರಿಯನ್ ರೋಡ್ರಿಗಾಸ್ ವಿಚಾರ ಸಂಕಿರಣವನ್ನು ಉದ್ಘಾಟಿಸಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಮುಖ್ಯ ಅತಿಥಿಯಾಗಿ ಹಿಂದು ವಿದ್ಯಾದಾಯಿನೀ ಸಂಘ (ರಿ), ಸುರತ್ಕಲ್‌ನ ಅಧ್ಯಕ್ಷ ಹೆಚ್.ಜಯಚಂದ್ರ ಹತ್ವಾರ್, ಗೌರವ ಅತಿಥಿಯಾಗಿ ಕಾಲೇಜಿನ ಆಡಳಿತಾತ್ಮಕ ನಿರ್ದೆಶಕ ಪ್ರೊ. ಗೋಪಾಲ ಎಂ.ಗೋಖಲೆ ಭಾಗವಹಿಸಲಿದ್ದಾರೆ.ಕಾಲೇಜಿನ ಪ್ರಾಚಾರ್ಯ ಪ್ರೊ. ಕೃಷ್ಣಮೂರ್ತಿ ಪಿ.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಪ್ರಥಮ ಗೋಷ್ಠಿಯಲ್ಲಿ ಭಾರತ ಮಂಗಳಮುಖಿಯರ ಹಕ್ಕುಗಳು- ವಿಶೇಷ ಉಲ್ಲೇಖದೊಂದಿಗೆ ಮಾನವ ಹಕ್ಕುಗಳು ಮತ್ತು ಲಿಂಗತ್ವ ನ್ಯಾಯದ ಕುರಿತು ಸ್ವತಂತ್ರ ಸಂಶೋಧಕಿ ಡಾ. ರೇಷ್ಮಾ ಉಲ್ಲಾಳ್ ಪ್ರಬಂಧ ಮಂಡನೆ ಮಾಡಲಿದ್ದು, ಮಂಗಳಮುಖಿ ಸಾಮಾಜಿಕ ಕಾರ್ಯಕರ್ತೆ ಡಾ.ಅರುಧಂತಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.
ದ್ವಿತೀಯ ಗೋಷ್ಠಿಯಲ್ಲಿ ವಿದ್ಯಾರ್ಥಿನಿಯರಾದ ಸ್ಮಿತಾ ಸಿ. ಮತ್ತು ಜುವೇರಿಯಾ ನಾಸಿರ ಭಾರತದಲ್ಲಿ ಮಕ್ಕಳ ಹಕ್ಕುಗಳು ಮತ್ತು ಸವಾಲುಗಳ ಕುರಿತು, ಹಿತಾ ಉಮೇಶ್ ಭಾರತದಲ್ಲಿ ಮಹಿಳೆಯರ ಹಕ್ಕುಗಳು : ಸಮಸ್ಯೆಗಳು ಮತ್ತು ಸಾಧ್ಯತೆಗಳ ಕುರಿತು, ಸುಶ್ಮಿತಾ ನಾರಾಯಣಗುರು ಮತ್ತು ಸಾಮಾಜಿನ ನ್ಯಾಯದ ಕುರಿತು, ವರ್ಷಿತಾ ಎಸ್. ಮಾನವ ಹಕ್ಕುಗಳು ಮತ್ತು ಪರಿಸರದ ಕುರಿತು ಪ್ರಬಂಧಗಳನ್ನು ಮಂಡಿಸಲಿದ್ದು, ಶಮಾ ಫರ್ಹಾನ ಅಧ್ಯಕ್ಷತೆ ವಹಿಸಲಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ