ಬಾಗಲಕೋಟೆ: ಭಕ್ತ ಕನಕದಾಸರು ನಮ್ಮ ಭಾರತೀಯ ಧರ್ಮ ಪರಂಪರೆಯನ್ನು ಉತ್ಕರ್ಷಕ್ಕೆ ಕೊಂಡೊಯ್ದವರು. ರಾಮಾಯಣ ಮಹಾಭಾರತ ಸಂಪೂರ್ಣ ಗ್ರಂಥಗಳ ಅಧ್ಯಯನ ಮಾಡಿ ವ್ಯಾಸರಾಯರ ಮುಖಾಂತರ ದೀಕ್ಷೆಯನ್ನು ಪಡೆದು ಸಂತ ಶ್ರೇಷ್ಠರಾದರೂ ನಾಡಿನುದ್ದಕ್ಕೂ ಜಾತಿ ಜಾತಿ ಪಿಡುಗನ್ನು ಹೋಗಲಾಡಿಸಲು ದಾಸವಾಣಿ ಮುಖಾಂತರ ತಿಳಿಸಿಕೊಟ್ಟರು. ಇವರು ಸಂತ ಶ್ರೇಷ್ಠರಾದರು ಎಂದು ವಿಧಾನ ಪರಿಷತ್ ಶಾಸಕ ಪಿ ಎಚ್ ಪೂಜಾರ್ ಹೇಳಿದರು.
ತಮ್ಮ ಜನಸಂಪರ್ಕ ಕಾರ್ಯಾಲಯದಲ್ಲಿ "ಸಂತ ಶ್ರೇಷ್ಠ ಭಕ್ತ ಕನಕದಾಸರ" 537ನೇ ಜಯಂತಿ ಕಾರ್ಯಕ್ರಮದಲ್ಲಿ ಪೂಜೆ ಸಲ್ಲಿಸಿ ಮಾತನಾಡಿದರು.
ಇದಕ್ಕೂ ಮೊದಲು ಶಂಭುಗೌಡ ಪಾಟೀಲ್, ಸಂಗಪ್ಪ ಕುಪ್ಪಸ್ತ, ಕುಮಾರ ಗಿರಿಜಾ, ಕನಕದಾಸರ ಪೂರ್ವಾಪರ ಹಾಗೂ ಜೀವನ ಪದ್ಧತಿ ಮತ್ತು ಜಾತಿಯ ಪಿಡುಗು ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ಪಾರ್ಟಿಯ ಹಿರಿಯರಾದ, ಗಂಗಪ್ಪ ಕರಡಿ, ಬಸಪ್ಪ ಮಂಗಾಟಿ, ಚಂದ್ರಕಾಂತ್ ಕೇಸನೂರ, ಸಂಗನಗೌಡ ಗೌಡರ, ಮಲ್ಲಿಕಾರ್ಜುನ್ ಭೂಸರೆಡ್ಡಿ, ರಾಜು ಚಿತ್ತವಾಡಗಿ, ಡಾಕ್ಟರ್ ಕೃಷ್ಣ ಚೌದರಿ ಸಂಜೀವ್ ಡಿಗ್ಗಿ, ಯಲ್ಲಪ್ಪ ಅಂಬಗೇರ, ರಾಜು ಶ್ರೀರಾಮ, ಅನಂತ ಮಳಗಿ, ಶ್ರೀಮತಿ ಗಂಗಾಬಾಯಿ ರಜಪೂತ, ಶಾಂತಾಬಾಯಿ ಗೋಣಿ, ರಾಜು ಲಮಾಣಿ, ಆಸಂಗೇಪ್ಪ ತಳವಾರ, ಮಂಜುನಾಥ್ ಚೌವ್ಹಾಣ, ಹುಲಿಗೆಪ್ಪ ಗುರಿಕಾರ ಈ ಸಂದರ್ಭದಲ್ಲಿ ಪಾರ್ಟಿಯ ಪ್ರಮುಖರು ಕಾರ್ಯಕರ್ತರು ಹಿತೈಷಿಗಳು ಭಾಗವಹಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ