ಮೈಸೂರು: ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ನ.10ರಿಂದ ಮೂರು ದಿನಗಳ ಕಾಲ ನಡೆಯುವ 38ನೇ ಅಖಿಲ ಭಾರತ ಅಂಚೆ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ, ವಿವಿಧ ರಾಜ್ಯಗಳ 20 ಪುರುಷರ ಮತ್ತು 17 ಮಹಿಳಾ ತಂಡಗಳು ಭಾಗವಹಿಸಿದ್ದವು. ಮೊದಲ ದಿನವಾದ ಇಂದು ಪ್ರೀ ಕ್ವಾರ್ಟರ್ ಪಂದ್ಯಾವಳಿಗಳು ನಡೆದಿದ್ದು, ಪುರುಷರ ವಿಭಾಗದಲ್ಲಿ 10 ಪಂದ್ಯಗಳು ಮತ್ತು ಮಹಿಳೆಯರ ವಿಭಾಗದಲ್ಲಿ 9 ಪಂದ್ಯ ನಡೆದಿದೆ.
ಪುರುಷರ ವಿಭಾಗದ ಟೀಮ್ ಚಾಂಪಿಯನ್ಶಿಪ್ ನಲ್ಲಿ, ಜಾರ್ಖಂಡ್ ತಂಡವು ಜಮ್ಮು ಕಾಶ್ಮೀರ ತಂಡವನ್ನು 3- 0, ಹರ್ಯಾಣ ತಂಡವು ವೆಸ್ಟ್ ಬೆಂಗಾಲ್ ತಂಡವನ್ನು 3-1,ಕೇರಳ ತಂಡವು ರಾಜಸ್ಥಾನ ತಂಡವನ್ನು 3-1, ಮಹಾರಾಷ್ಟ್ರ ತಂಡವು ಉತ್ತರಾಖಂಡ ತಂಡವನ್ನು 3-0, ಒಡಿಸ್ಸಾ ತಂಡವು ಅಸ್ಸಾಂ ತಂಡವನ್ನು 3-2, ಝಾರ್ಖಂಡ್ ತಂಡವು ಕರ್ನಾಟಕ ತಂಡವನ್ನು 3-1, ತೆಲಂಗಾಣ ತಂಡವು ಪಂಜಾಬ್ ತಂಡವನ್ನು 3-0, ತಮಿಳುನಾಡು ತಂಡವು ಹಿಮಾಚಲ ಪ್ರದೇಶ ತಂಡವನ್ನು 3-1, ಹರಿಯಾಣ ತಂಡವು ಛತ್ತಿಸಘರ್ ತಂಡವನ್ನು 3-0, ಗುಜರಾತ್ ತಂಡವು ದೆಹಲಿ ತಂಡವನ್ನು 3-1 ಅಂತರದಿಂದ ಪರಾಭಾವಗೊಳಿಸಿ ನಾಳೆ ನಡೆಯುವ ಫೈನಲ್ಸ್ ಗೆ ಲಗ್ಗೆ ಇಟ್ಟಿದ್ದಾರೆ.
ಮಹಿಳೆಯರ ವಿಭಾಗದ ಟೀಮ್ ಚಾಂಪಿಯನ್ಶಿಪ್ ನಲ್ಲಿ, ಮಹಿಳೆಯರ ವಿಭಾಗದಲ್ಲಿ ಗುಜರಾತ್ ತಂಡವು ಪಂಜಾಬ್ ತಂಡವನ್ನು 2-0 ಒಡಿಸ್ಸಾ ತಂಡವು ಜಮ್ಮು ಕಾಶ್ಮೀರ್ ತಂಡವನ್ನು 2-0 ಹರಿಯಾಣ ತಂಡವು ಛತ್ತೀಸ್ಗಡವನ್ನು 2-0, ವೆಸ್ಟ್ ಬೆಂಗಾಲ್ ತಂಡವು ಹಿಮಾಚಲ್ ಪ್ರದೇಶ ತಂಡವನ್ನು 2-0 ಅಸ್ಸಾಂ ತಂಡವು ಡೆಲ್ಲಿ ತಂಡವನ್ನು 2-1 ಗುಜರಾತ್ ತಂಡವು ಕರ್ನಾಟಕವನ್ನು 2-1 ತಮಿಳುನಾಡು ತಂಡವು ತೆಲಂಗಾಣ ತಂಡವನ್ನು 2-0ಯಿಂದ ಮಹಾರಾಷ್ಟ್ರ ತಂಡವು ಉತ್ತರಾಖಂಡವನ್ನು 2-9 ಹಾಗೂ ಕೇರಳವು ರಾಜಸ್ಥಾನ ತಂಡವನ್ನು 2-0 ಪರಾಭಾವಗೊಳಿಸಿ ನಾಳೆ ನಡೆಯುವ ಕ್ವಾರ್ಟರ್ ಫೈನಲ್ಸ್ ಗೆ ಲಗ್ಗೆ ಇಟ್ಟಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ