38ನೇ ಅಖಿಲ ಭಾರತ ಅಂಚೆ ಬ್ಯಾಡ್ಮಿಂಟನ್ ಪಂದ್ಯಾವಳಿ
ಮೈಸೂರು: ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 38ನೇ ಅಖಿಲ ಭಾರತ ಅಂಚೆ ಬ್ಯಾಡಿಂಟನ್ ಪಂದ್ಯಾವಳಿಯಲ್ಲಿ ಎರಡನೆಯ ದಿನವಾದ ಇಂದು ನಡೆದ ಕ್ವಾರ್ಟರ್ ಫೈನಲ್ ಮತ್ತು ಸೆಮಿ ಫೈನಲ್ ಪಂದ್ಯದಲ್ಲಿ, ಪುರುಷರ ಹಾಗೂ ಮಹಿಳಾ ವಿಭಾಗದಲ್ಲಿ 8 ರಾಜ್ಯದ ತಂಡಗಳು ಭಾಗವಹಿಸಿದ್ದು, ಮಹಿಳೆಯರ ವಿಭಾಗದ ರೋಚಕ ಫೈನಲ್ಸ್ ಪಂದ್ಯಾಟದಲ್ಲಿ ದೆಹಲಿ ತಂಡದ ತೀನು ದಹಿಯಾ ಮತ್ತು ಮಯೂರಿ ಯಾದವ್ ಉತ್ತಮ ಪ್ರದರ್ಶನದ ಮೂಲಕ ಕೇರಳ ತಂಡವನ್ನು 2-0 ಅಂತರದಿಂದ ಸೋಲಿಸಿ ಟೀಮ್ ಚಾಂಪಿಯನ್ ಶಿಪ್ ಮುಡಿಗೇರಿಸಿಕೊಂಡಿದ್ದಾರೆ.
ಪುರುಷರ ವಿಭಾಗದಲ್ಲಿ ಕೇರಳ ಮತ್ತು ತಮಿಳುನಾಡು ತಂಡಗಳು ಫೈನಲ್ಸ್ ನಲ್ಲಿ ಮುಖಾಮುಖಿಯಾಗಲಿದ್ದಾರೆ.
ಪಂದ್ಯಗಳ ವಿವರ:
ಪುರುಷರ ವಿಭಾಗದ ಟೀಮ್ ಚಾಂಪಿಯನ್ ಶಿಪ್ ನ ಕ್ವಾರ್ಟರ್ ಫೈನಲ್ ನಲ್ಲಿ, ಕೇರಳ ತಂಡವು ಮಹಾರಾಷ್ಟ್ರ ತಂಡವನ್ನು 3-1 ಅಂತರದಿಂದ, ಒಡಿಶಾ ತಂಡವು ಜಾರ್ಖಂಡ್ ತಂಡವನ್ನು 3-0 ಅಂತರದಿಂದ, ತಮಿಳುನಾಡು ತಂಡವು ತೆಲಂಗಾಣ ತಂಡವನ್ನು 3-1 ಅಂತರದಿಂದ, ಗುಜರಾತ್ ತಂಡವನ್ನು 3-1 ಅಂತರದಿಂದ, ಪರಾಭಾವಗೊಳಿಸಿ ಸೆಮಿ ಫೈನಲ್ಸ್ ಗೆ ಆಯ್ಕೆಯಾದರು.
ಸೆಮಿ ಫೈನಲ್ ಪಂದ್ಯಾಟದಲ್ಲಿ ಕೇರಳ ತಂಡವು ಒಡಿಶಾ ತಂಡವನ್ನು 3-2 ಅಂತರದಿಂದ, ತಮಿಳುನಾಡು ತಂಡವು ಗುಜರಾತ್ ತಂಡವನ್ನು 3-2 ಅಂತರದಿಂದ ಸೋಲಿಸಿ ಟೀಮ್ ಚಾಂಪಿಯನ್ಶಿಪ್ ಫೈನಲ್ಗೆ ಲಗ್ಗೆ ಇಟ್ಟಿದ್ದಾರೆ.
ಮಹಿಳೆಯರ ವಿಭಾಗದ ಟೀಮ್ ಟೀಮ್ ಚಾಂಪಿಯನ್ ಶಿಪ್ ನ ಕ್ವಾರ್ಟರ್ ಫೈನಲ್ ನಲ್ಲಿ, ಹರಿಯಾಣ ತಂಡವು ಒಡಿಶಾ ತಂಡವನ್ನು 2-1 ಅಂತರದಿಂದ ದೆಹಲಿ ತಂಡವು ವೆಸ್ಟ್ ಬೆಂಗಾಲ್ ತಂಡವನ್ನು 2-1 ಅಂತರದಿಂ̧ದ ಗುಜರಾತ್ ತಂಡವು ತಮಿಳುನಾಡು ತಂಡವನ್ನು 2-0 ಅಂತರದಿಂದ, ಕೇರಳ ತಂಡವು ರಾಜಸ್ಥಾನ ತಂಡವನ್ನು 2-0 ಅಂತರದಿಂದ ಸೆಮಿ ಫೈನಲ್ಸ್ ಗೆ ಆಯ್ಕೆಯಾದರು.
ಸೆಮಿ ಫೈನಲ್ ಪಂದ್ಯಾಟದಲ್ಲಿ ದೆಹಲಿ ತಂಡವು ಹರಿಯಾಣ ತಂಡವನ್ನು 2-0 ಅಂತರದಿಂದ, ಕೇರಳ ತಂಡವು ಗುಜರಾತ್ ತಂಡವನ್ನು 2-1 ಅಂತರದಿಂದ ಸೋಲಿಸಿ ಫೈನಲ್ಗೆ ಆಯ್ಕೆ ಆಗಿದ್ದಾರೆ. ರೋಚಕ ಫೈನಲ್ಸ್ ಪಂದ್ಯಾಟದಲ್ಲಿ ದೆಹಲಿ ತಂಡವು ಕೇರಳ ತಂಡವನ್ನು 2-0 ಅಂತರದಿಂದ ಸೋಲಿಸುವ ಮೂಲಕ ಟೀಮ್ ಚಾಂಪಿಯನ್ಶಿಪ್ ಮುಡಿಗೇರಿಸಿಕೊಂಡಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ