ಆಳ್ವಾಸ್ ಶಾಲೆಗೆ 27 ಪದಕದೊಂದಿಗೆ ತಂಡ ಪ್ರಶಸ್ತಿ

Upayuktha
0

ರಾಜ್ಯ ಮಟ್ಟದ 17 ವರ್ಷ ವಯೋಮಿತಿಯ ಪ್ರೌಢಶಾಲಾ ಬಾಲಕ ಬಾಲಕಿಯರ ಅಥ್ಲೆಟಿಕ್ಸ್ ಕ್ರೀಡಾಕೂಟ



ಮೂಡುಬಿದಿರೆ: ನವೆಂಬರ್ 08 ರಿಂದ 10ರವರೆಗೆ ನಡೆದ ಶಾಲಾ ಶಿಕ್ಷಣ ಇಲಾಖೆ, ಕೋಲಾರ ಜಿಲ್ಲೆ, ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ಕೋಲಾರ ಜಿಲ್ಲೆ, ಇವರ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಮಟ್ಟದ 17 ವರ್ಷ ವಯೋಮಿತಿಯ ಪ್ರೌಢಶಾಲಾ ಬಾಲಕ ಬಾಲಕಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ಆಳ್ವಾಸ್ ಶಾಲೆಯ ಕ್ರೀಡಾಪಟುಗಳು ಒಟ್ಟು 14 ಚಿನ್ನ, 08 ಬೆಳ್ಳಿ ಮತ್ತು 05 ಕಂಚಿನ ಪದಕಗಳೊಂದಿಗೆ 27 ಪದಕದೊಂದಿಗೆ ನಾಗಿಣಿ 800ಮೀ, 1500ಮೀನಲ್ಲಿ ನೂತನ ದಾಖಲೆ, ಜಾಸ್ಮಿನ ಹ್ಯಾಮರ್ ತ್ರೋನಲ್ಲಿ ಕ್ರೀಡಾಕೂಟದ ನೂತನ ಕೂಟ ದಾಖಲೆಯೊಂದಿಗೆ 17ವರ್ಷ ವಯೋಮಿತಿಯ ಬಾಲಕ ಬಾಲಕಿಯರ ತಂಡ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.


ಪ್ರೌಢ ಶಾಲಾ 17 ವರ್ಷ ವಯೋಮಿತಿಯ ಬಾಲಕಿಯರ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ:

ಬಾಲಕಿಯರ ವಿಭಾಗ: ನಾಗಿಣಿ – 10 ಅಂಕ


ಫಲಿತಾಂಶ:

ಪ್ರೌಢ ಶಾಲಾ 17 ವರ್ಷ ವಯೋಮಿತಿಯ ಬಾಲಕ ಮತ್ತು ಬಾಲಕಿಯರ ಫಲಿತಾಂಶ : ಇಶಾನಿ ಅರುಣ್-ಚಕ್ರ ಎಸೆತ (ದ್ವಿತೀಯ), ಚಸ್ಮಿತಾ-ಚಕ್ರ ಎಸೆತ (ತೃತೀಯ), ನಾಗಿಣಿ–800ಮೀ (ಪ್ರಥಮ), 1500ಮೀ (ಪ್ರಥಮ), ಕಿರಣ–1500ಮೀ (ದ್ವಿತೀಯ), ಪ್ರಿಯಾಂಕ–800ಮೀ (ದ್ವಿತೀಯ), 3000ಮೀ (ದ್ವಿತೀಯ), ಜಾಸ್ಮಿನ್-ಹ್ಯಾಮರ್ ತ್ರೋ (ಪ್ರಥಮ), ಸ್ಪೂರ್ತಿ-ಹ್ಯಾಮರ್ ತ್ರೋ (ತೃತೀಯ), ಗೋಪಿಕಾ–100ಮೀ (ಪ್ರಥಮ), 4x100ಮೀ ರಿಲೇ (ಪ್ರಥಮ), ಪ್ರೀತಿ-400ಮೀ ಹರ್ಡಲ್ಸ್ (ಪ್ರಥಮ), ವರ್ಷಾ-400ಮೀ ಹರ್ಡಲ್ಸ್ (ತೃತೀಯ), ಚಿನ್ಮಯಿ-4x100ಮೀ ರಿಲೇ (ಪ್ರಥಮ), ಸಹನಾ-4x100ಮೀ ರಿಲೇ (ಪ್ರಥಮ),


 ನಯೋನಿಕ-4x100ಮೀ ರಿಲೇ (ಪ್ರಥಮ), ಗೌತಮ್ ರೈ – 110ಮೀ ಹರ್ಡಲ್ಸ್ (ದ್ವಿತೀಯ), 4x100ಮೀ ರಿಲೇ (ಪ್ರಥಮ), ಧನುಷ್‌ಚಂದ್ರ-ಚಕ್ರ ಎಸೆತ (ತೃತೀಯ), ಗುಂಡು ಎಸೆತ-(ದ್ವಿತೀಯ), ಸಮರ್ಥ್–800ಮೀ (ದ್ವಿತೀಯ), ಪೃಥ್ವಿಕ್–ತ್ರಿವಿಧ ಜಿಗಿತ (ತೃತೀಯ), ಸಾಹಿಲ್–100ಮೀ (ದ್ವಿತೀಯ), 4x100ಮೀ ರಿಲೇ (ಪ್ರಥಮ), ಆಕಾಶ್–400ಮೀ ಹರ್ಡಲ್ಸ್ (ಪ್ರಥಮ), 4x100ಮೀ ರಿಲೇ (ಪ್ರಥಮ), ರಿನೀಶ್-4x100ಮೀ ರಿಲೇ (ಪ್ರಥಮ)


ನವೆಂಬರ್ ತಿಂಗಳಿನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ಒಂದೇ ಶಾಲೆಯಿಂದ 16 ಕ್ರೀಡಾಪಟುಗಳು ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರವಾಗಿದೆ. ವಿಜೇತ ಕ್ರೀಡಾಪಟುಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top