Alloxen ಸೇರಿಸಿರುವ ಆಹಾರ ಸೇವಿಸಿದರೆ ಪೆಂಕ್ರಿಯಾಸಿನ [ಮೆದ್ಧೋಜೀರಕ ಗ್ರಂಥಿ] ಜೀವಕೋಶಗಳು ಹೈಡ್ರೋಕ್ಸಿನ್ ರೇಡಿಕಿಲ್ ಫಾರ್ಮೇಶನಿಗೆ ತುತ್ತಾಗಿ ಕ್ಷಯಿಸುತ್ತದೆ ಮಾತ್ರವಲ್ಲ ಇನ್ಸುಲಿನ್ ಕಡಿಮೆಯಾಗುವುದು, ಗುಣಇಲ್ಲದಾಗುವುದು, ನಾಶವಾಗುವುದು ಇತ್ಯಾದಿ ಪರಿಣಾಮಗಳು ಉಂಟಾಗುತ್ತವೆ. ಇದು ಡಯಾಬಿಟೀಸ್ ರೋಗ ಉತ್ಪತ್ತಿಗೆ ಕಾರಣ ವಾಗುತ್ತದೆ. ಅಲೊಕ್ಷಿನ್ ಎಂಬ ಯೂರಿಕ್ ಏಸಿಡ್ ಕಾರ್ಯವಾಗಿ ಬೀಟಾ ಸೆಲ್ ಟೋಕ್ಸಿನ್ [ವಿಷಾಣು] ಆಗಿ ಪ್ರವರ್ತಿಸುತ್ತದೆ.
ಈ ವಿಷಯ ಭರಣಾಧಿಕಾರಿಗಳಿಗೂ, ಆರೋಗ್ಯವಿಭಾಗದವರಿಗೂ, ವ್ಯವಸಾಯಪ್ರಮುಖರಿಗೂ ತಿಳಿದಿರುವ ವಿಚಾರ. ಆದರೆ ದುರಂತವೇನೆಂದರೆ ಯಾವುದೇ ಕಡಿವಾಣವಿಲ್ಲದೆ ಮೈದಾ ಉಪಯೋಗವಾಗುತ್ತ ಇದೆ. ಅಂಗಡಿಗಳಲ್ಲಿ ಇಂದಿನ ದಿನಗಳಲ್ಲಿ ಲಭಿಸುವ ಗೋಧಿ ಪುಡಿ, ಮೈದಾ, ಅಕ್ಕಿ ಪುಡಿ, ಪುಟ್ಟುಹೊಡಿ ಮೊದಲಾದ ಎಲ್ಲ ಧಾನ್ಯದ ಪುಡಿಗಳಿಗೆ ಬಿಳಿಬಣ್ಣ ಉಂಟಾಗಲು, ಮೃದುತ್ವ ಉಂಟಾಗಲು, ಕೆಡದೆ ಇರಲು ಆಲೋಕ್ಸಿನ್ ಸೇರಿಸಲಾಗುತ್ತದೆ. ಇದನ್ನು ಗೊತ್ತು ಮಾಡಲು ಯಾವುದೇ ಲೇಬುಗಳಿಗೆ ಹೋಗುವ ಅಗತ್ಯವಿಲ್ಲ ಸ್ವಾಮೀ. ನಾವು ಮನೆಯಲ್ಲಿ ತಯಾರು ಮಾಡಿದ ಈ ರೀತಿಯ ಹೊಡಿಗಳಿಗೆ ಈ ರಿಸಲ್ಟ್ ಬರುವುದೇ ಇಲ್ಲ ನೋಡಿ.
ಬಂಧುಗಳೇ.... ಮೈದಾ ಎಂಬ ರಾಕ್ಷಸ ನಿಮ್ಮನ್ನೂ ನಿಮ್ಮ ಕುಟುಂಬವನ್ನೂ ನಾಶ ಮಾಡೀತು. ಮೈದಾವನ್ನು ಅರಿತುಕೊಳ್ಳಿ. ಅದನ್ನು ಬಳಸದಿರೋಣ.ನಮ್ಮ ಮುಂದಿನ ಮಕ್ಕಳ ಭವಿಷ್ಯಕ್ಕಾಗಿ, ವಂಶದ ರಕ್ಷಣೆಗೆ ಬದ್ಧರಾಗೋಣ..!
- ಬಳ್ಳಮೂಲೆ ಗೋವಿಂದ ಭಟ್
(ಲೇಖಕರು ನಿವೃತ್ತ ಶಿಕ್ಷಕರು, ನಾಟಿ-ಆಯುರ್ವೇದ ಔಷಧಗಳ ತಜ್ಞರು)
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ