ಉಡುಪಿ: ಪರ್ಕಳದ ಸರಿಗಮ ಭಾರತಿ ಸಂಗೀತ ವಿದ್ಯಾಲಯದಲ್ಲಿ ಶನಿವಾರ ವಿಜಯದಶಮಿ ಸಂಗೀತೋತ್ಸವ, ಸಂಸ್ಥೆಯ ರಜತ ಸಂಭ್ರಮ ಸಮಾರಂಭ ಜರಗಿತು. ಬೆಳಗ್ಗೆ 8 ಗಂಟೆಗೆ ಮಣಿಪಾಲದ ಹಿಂದುಸ್ತಾನಿ ಗಾಯಕ ಪಂಡಿತ್ ರವಿಕಿರಣ್ ಅವರು 'ಶ್ರೀ ದುರ್ಗಾ ಮಾತೆ'ಯ ಪ್ರಾರ್ಥನೆಯನ್ನು ಪ್ರಸ್ತುತ ಪಡಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು.
ಬಳಿಕ 8.45ರಿಂದ ಸಂಗೀತ ಶಾಲೆಯ ವಿದ್ಯಾರ್ಥಿಗಳು ಪಿಳ್ಳಾರಿ ಗೀತೆಗಳನ್ನು ಹಾಡಿದರು. 9.30ರಿಂದ ಅಭಿನವ್ ಭಟ್ ಹಾಗೂ ತನ್ವಿ ಶಾಸ್ತ್ರಿ ಅವರಿಂದ ಹಾಡುಗಾರಿಕೆ ನಡೆಯಿತು. ಬೆಳಗ್ಗ 10 ಗಂಟೆಗೆ ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಅತಿಥಿಗಳಾಗಿ ಉಡುಪಿಯ ಹಿರಿಯ ಸಾಹಿತಿ ಪ್ರೊ| ಮುರಲೀಧರ ಉಪಾಧ್ಯ ಹಾಗೂ ಪರ್ಕಳದ ಮಂಜುನಾಥ ಉಪಾಧ್ಯ ಭಾಗವಹಿಸಿ ಶುಭಹಾರೈಸಿದರು.
ಸಮ್ಮಾನ: ಸಂದರ್ಭದಲ್ಲಿ ಬಹುಮುಖ ಪ್ರತಿಭೆಯ ಕಲಾವಿದೆ ಶ್ರೀಮತಿ ಸುರೇಖಾ ಭಟ್, ಪಟ್ಲ ಅವರನ್ನು ಅಭಿನಂದಿಸಿ ಸರಿಗಮ ಭಾರತಿ ಪರವಾಗಿ ಗೌರವಿಸಲಾಯಿತು.
ಸಂಸ್ಥೆಯ ನಿರ್ದೇಶಕ ಡಾ| ಉದಯಶಂಕರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ನಿರ್ದೇಶಕಿ, ಸಂಗೀತ ಗುರು ಉಮಾಶಂಕರಿ ಅವರು ವಂದಿಸಿದರು. ಶಿಲ್ಪಾ ಜೋಶಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಹೇಮಲತಾ ರಾವ್ ಉಡುಪಿ - ಸಂಗೀತ ಕಛೇರಿ ನಡೆಯಿತು. ವಯೋಲಿನ್ ಪ್ರಮಥ್ ಭಾಗವತ್, ಮೃದಂಗದಲ್ಲಿ ಶಾಶ್ವತ್ ಕೆ. ಭಟ್. ಸಹಕರಿಸಿದರು.
ಸ್ವಸ್ತಿ ಎಂ. ಭಟ್ , ಅನುಶ್ರೀ, ರೋಶ್ನಿ ಎನ್.ಶೆಟ್ಟಿ, ಕಶಿಕ ಕೆ.ಶೆಟ್ಟಿ, ಕ್ಷಿತಿಜ್ ಕೆ. ಶರ್ಮ, ತೀಕ್ಷಣ್ ಎಸ್.ಶೆಟ್ಟಿ, ಮನ್ವಿ ಹಾಗೂ ಸಾನ್ವಿಕ ಅವರು ಸಂಗೀತ ಕೃತಿಗಳ ಪ್ರಸ್ತುತ ಪಡಿಸಿದರು. ವಯೊಲಿನ್‌ನಲ್ಲಿ ಪ್ರಮಥ್ ಭಾಗವತ್, ಅನುಶ್ರೀ ಮಳಿ, ಮೃದಂಗದಲ್ಲಿ ಶ್ರೀವರ್ಚಸ್, ಶಾಶ್ವತ್ ಕೆ.ಭಟ್ ಸಹಕರಿಸಿದರು. ಸರಸ್ವತಿ ಪೂಜೆ ನೆರವೇರಿತು.
ಅಪರಾಹ್ನ ಉಷಾ ರಾಮಕೃಷ್ಣ ಭಟ್ ಬೆಂಗಳೂರು ಅವರ ಹಾಡುಗಾರಿಕೆ, ವಯೋಲಿನ್‌ನಲ್ಲಿ ಕೇಶವ ಮೋಹನ್ ಕುಮಾರ್ ಬೆಂಗಳೂರು, ಮೃದಂಗದಲ್ಲಿ ಸುನಾದಕೃಷ್ಣ ಅಮೈ ಸಹಕರಿಸಿದರು. ಬಳಿಕ ಕಲಾವಿದರಿಂದ 'ಶ್ರೀ ತ್ಯಾಗರಾಜರ ಪಂಚರತ್ನ ಗೋಷ್ಠಿ ಗಾಯನ' ಹಾಗೂ 'ನವಾವರಣ ಕೃತಿ'ಗಳ ಪ್ರಸ್ತುತಿ ನಡೆಯಿತು.
ಸಂಜೆ ದಿವ್ಯಶ್ರೀ ಭಟ್ ಮಣಿಪಾಲ ಹಾಡುಗಾರಿಕೆ, ವಯೋಲಿನ್‌ನಲ್ಲಿ ಪೃಥ್ವಿ ಭಾಸ್ಕರ್, ಮೈಸೂರು ಮೃದಂಗದಲ್ಲಿ ನಿಕ್ಷಿತ್ ಟಿ. ಪುತ್ತೂರು ಸಹಕರಿಸಿದರು. ಅನಂತರ ಉಡುಪಿಯ ಮಾನಸಾ ಹಾಗೂ ಮಂಗಳೂರಿನ 'ನೃತ್ಯಾಂಗನ್'ದ ನಿರ್ದೇಶಕಿ ವಿದುಷಿ ರಾಧಿಕಾ ಶೆಟ್ಟಿ ಅವರಿಂದ ಭರತನಾಟ್ಯ ಕಾರ್ಯಕ್ರಮ ಸೇರಿದ್ದವರ ಮನಸೂರೆಗೊಂಡಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ