ಪುತ್ತೂರು: ಕಳೆದ 35 ವರ್ಷಗಳಿಂದ ಉಪನ್ಯಾಸಕಿಯಾಗಿ ಸುದೀರ್ಘ ಸೇವೆಯನ್ನು ಸಲ್ಲಿಸಿ ನಿವೃತ್ತರಾದ ಶ್ರೀಮತಿ ಉಷಾ ಕೆ ಅವರು ನಿರಂತರವಾಗಿ ಪತ್ರಿಕೆಗಳಲ್ಲಿ ಪ್ರಕಟಿಸುತ್ತಿದ್ದ ವೈಚಾರಿಕ- ಮಾನವೀಯ ಮೌಲ್ಯಗಳುಳ್ಳ ಲೇಖನಗಳ ಸಂಗ್ರಹ 'ತೆರೆದ ಗವಾಕ್ಷಿ' ಕೃತಿ ಅಕ್ಟೋಬರ್ 12, ಶನಿವಾರ ಸಂಜೆ 4:30ಕ್ಕೆ ಪುತ್ತೂರಿನ ಅನುರಾಗ ವಠಾರದಲ್ಲಿ ರಘುನಾಥ ರಾವ್, ಮಾಲಕರು ರಾಜೇಶ್ ಪವರ್ ಪ್ರೆಸ್ ಇವರು ಲೋಕಾರ್ಪಣೆ ಗೊಳಿಸಿದರು.
ಹಿರಿಯ ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ ಅವರು ಕೃತಿ ಕುರಿತು, ಸಾರಸ್ವತ ಸೌರಭದ ವ್ಯವಸ್ಥಾಪಕ ಸಂಪಾದಕ ಸುಳ್ಳಿ ರಾಧಾಕೃಷ್ಣ ನಾಯಕ್ ಅವರು ಕೃತಿಕಾರರ ಕುರಿತು ಮಾತನಾಡಿದರು. ಹಿರಿಯ ಸಾಹಿತಿ ವಿ ಬಿ ಆರ್ತಿಕಜೆ, ಕರ್ನಾಟಕ ಸಂಘದ ಅಧ್ಯಕ್ಷ ಬಿ ಪುರಂದರ ಭಟ್, ಪತ್ರಕರ್ತ ಜಯಾನಂದ ಪೆರಾಜೆ ಇನ್ನಿತರರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ