ಬೆಂಗಳೂರು: ದಿಶಾ ಭಾರತ್ ತನ್ನ 20ನೇ ವರ್ಷದ ಯಶಸ್ವಿ ಪ್ರಯಾಣವನ್ನು ಸಂಭ್ರಮಿಸುತ್ತಿದ್ದು, UG ಮತ್ತು PG ವಿದ್ಯಾರ್ಥಿಗಳಿಗಾಗಿ (ಕರ್ನಾಟಕ) ಅತ್ಯಂತ ವಿಶೇಷವಾದ ರಾಜ್ಯಮಟ್ಟದ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಿದೆ. “India Inspires: Discover the Heritage of Bharat” ಎಂಬ ಶೀರ್ಷಿಕೆಯಡಿ ನಡೆಯುವ ಈ ಕ್ವಿಜ್, ಭಾರತದ ವೈಭವಶಾಲಿ ಇತಿಹಾಸ, ಶ್ರೀಮಂತ ಸಂಸ್ಕೃತಿ, ಪರಂಪರೆ, ಮಹಾನ್ ಸಾಧನೆಗಳು, ಸ್ವಾತಂತ್ರ್ಯ ಹೋರಾಟದ ತ್ಯಾಗ ಮತ್ತು ಶೌರ್ಯವನ್ನು ವಿದ್ಯಾರ್ಥಿಗಳಲ್ಲಿ ಹರಡುವ ಮಹತ್ತರ ಉದ್ದೇಶವನ್ನು ಹೊಂದಿದೆ.
ಸ್ಪರ್ಧೆಯ ಪ್ರಾಥಮಿಕ ಹಂತವು ಆನ್‌ಲೈನ್ ಮೂಲಕ ಜರುಗಲಿದ್ದು, 2024 ಸೆಪ್ಟೆಂಬರ್ 25 ರಿಂದ ಅಕ್ಟೋಬರ್ 25ರವರೆಗೆ ಸ್ಪರ್ಧಾರ್ಥಿಗಳು ಭಾಗವಹಿಸಬಹುದು. ಕೇವಲ 15 ನಿಮಿಷಗಳಲ್ಲಿ ಮುಗಿಸಬಹುದಾದ ಈ ಆನ್‌ಲೈನ್ ಕ್ವಿಜ್‌ನಲ್ಲಿ ಎಲ್ಲ ವಿದ್ಯಾರ್ಥಿಗಳು ಉಚಿತವಾಗಿ ನೋಂದಣಿ ಮಾಡಿಕೊಳ್ಳಬಹುದು.
ಪ್ರಾಥಮಿಕ ಹಂತದಲ್ಲಿ ಯಶಸ್ವಿಯಾಗುವ ಸ್ಪರ್ಧಾರ್ಥಿಗಳು ಆಫ್‌ಲೈನ್‌ನಲ್ಲಿ ನಡೆಯುವ ಅಂತಿಮ ಹಂತಕ್ಕೆ ಆಯ್ಕೆಯಾಗುತ್ತಾರೆ. ಈ ಹಂತವು ಎರಡು ಭಾಗಗಳಲ್ಲಿ ನಡೆಯಲಿದ್ದು, ಮೊದಲ ಭಾಗವು ಬರವಣಿಗೆ ಆಧಾರಿತ ಮೌಲ್ಯಮಾಪನ ಮತ್ತು ಎರಡನೇ ಭಾಗವು ವೇದಿಕೆ ಮೇಲೆ ನೇರವಾಗಿ ನಡೆಯುವ ಫೈನಲ್ ಸ್ಪರ್ಧೆಯಾಗಿರುತ್ತದೆ.
ಈ ಸ್ಪರ್ಧೆಯಲ್ಲಿ ವಿಜೇತರಿಗೆ ಆಕರ್ಷಕ ಬಹುಮಾನಗಳಿವೆ– ಮೊದಲ ಬಹುಮಾನ ₹10,000, ದ್ವಿತೀಯ ಬಹುಮಾನ ₹8,000, ಮತ್ತು ತೃತೀಯ ಬಹುಮಾನ ₹6,000. ಆಯ್ಕೆಯಾದ ಮೂವರಿಗೆ ಪ್ರೋತ್ಸಾಹಕರ ಬಹುಮಾನಗಳೂ ಕೊಡಲಾಗುತ್ತವೆ. ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಆನ್ಲೈನ್ ಮೂಲಕ ಪ್ರಮಾಣ ಪತ್ರಗಳನ್ನು ನೀಡಲಾಗುವುದು.
ಹೆಚ್ಚಿನ ಮಾಹಿತಿಗೆ: quiz.dishabharat.org
7411652455 / 8951051588
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ