ಎಸ್‌ಡಿಎಂ ಡಿ.ಇಎಲ್.ಇಡಿ: ವಿದ್ಯಾರ್ಥಿ ಸಂಘ ಉದ್ಘಾಟನೆ

Upayuktha
0

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಕರ ತರಬೇತಿ (ಡಿ.ಇಎಲ್. ಇಡಿ) ಸಂಸ್ಥೆಯಲ್ಲಿ 2024-25ನೇ ಸಾಲಿನ ಸ್ವಾಗತ ದಿನಾಚರಣೆ ವಿದ್ಯಾರ್ಥಿ ಸಂಘ ಹಾಗೂ ವಿಷಯವಾರು ಸಂಘಗಳ ಉದ್ಘಾಟನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 


ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಂಗಳೂರಿನ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್)ಯ ಹಿರಿಯ ಉಪನ್ಯಾಸಕ ಹಾಗೂ ಬೆಳ್ತಂಗಡಿ ತಾಲೂಕು ನೋಡಲ್ ಅಧಿಕಾರಿ ಶಶಿಧರ ಜಿ.ಎಸ್. ಮಾತನಾಡುತ್ತಾ ಅರಿವಿನ ಅನುಭವದ ನೆಲೆಯಲ್ಲಿ ಪ್ರಶಿಕ್ಷಣಾರ್ಥಿಗಳು  ಶಿಕ್ಷಕ ವೃತ್ತಿಯನ್ನು ಗೌರವಿಸಿ, ಪ್ರೀತಿಸಿ ಬೋಧಿಸಬೇಕೆಂದು ತಿಳಿಸುವುದರೊಂದಿಗೆ ಗುರು ಶಿಷ್ಯರ ಪರಂಪರೆ ಅವಿಸ್ಮರಣೀಯ ಎಂದು ಹೇಳುತ್ತಾ ಜಗತ್ತಿನಲ್ಲಿ ಶ್ರೇಷ್ಠ ಸಂಪತ್ತು ಅದುವೇ ಮಾನವ ಸಂಪತ್ತು ಎಂದರು. 


"ಮಗುವಿನ ಅತ್ಯುತ್ತಮವಾದ ಕೌಶಲ್ಯ ಬೆಳವಣಿಗೆಯಲ್ಲಿ ಗುರುವಿನ ಪಾತ್ರ ಮಹತ್ತರವಾದದ್ದು ಹಾಗಾಗಿ ಶಿಕ್ಷಕರು ಮಗುವಿಗೆ ಹೇಗೆ ಪ್ರಭಾವಿತರಾಗುವರು ಎಂಬುವುದಕ್ಕೆ ಕಲಾಂ ಅವರ ಜೀವನವೇ ಒಂದು ಉತ್ತಮ ಉದಾಹರಣೆ" ಎಂದು ತಿಳಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಇ. ಸೊಸೈಟಿಯ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಧನ್ಯಕುಮಾರ್ ವಿಷಯವಾರು ಸಂಘಗಳನ್ನು ಉದ್ಘಾಟಿಸಿ ಮಾತನಾಡುತ್ತಾ,  ಮಗುವಿನ ಶೈಕ್ಷಣಿಕ ಮತ್ತು ಬೌದ್ಧಿಕ ಬೆಳವಣಿಗೆಯನ್ನು ಉತ್ತೇಜಿಸುವಲ್ಲಿ ಶಿಕ್ಷಕರ ಜ್ಞಾನ ಮತ್ತು ಕೌಶಲ ಮುಖ್ಯವಾಗಿರುತ್ತದೆ. ಶಿಕ್ಷಣವು ವ್ಯಕ್ತಿಯ ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆಯಲ್ಲದೆ ಬೇರೇನೂ ಅಲ್ಲ. ಶಿಕ್ಷಣವು ಮನುಷ್ಯನನ್ನು ರೂಪಿಸುವ ಪ್ರಕ್ರಿಯೆಯಾಗಿದೆ. ಹಾಗಾಗಿ ಎಲ್ಲರಿಗೂ ಶಿಕ್ಷಣ ಅಗತ್ಯ ಎಂದು ಅಭಿಪ್ರಾಯಪಟ್ಟರು.


2024-25ನೇ ಸಾಲಿನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾಗಿ ಆಯ್ಕೆಯಾದವರಿಗೆ ಪ್ರಾಂಶುಪಾಲರು ಪ್ರತಿಜ್ಞಾವಿಧಿ ಬೋಧಿಸಿದರು.


ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿ ಫಾತಿಮಾ (ದ್ವಿತೀಯ ಡಿ.ಎಡ್) ಉಪ ಕಾರ್ಯದರ್ಶಿಯಾಗಿ ಪ್ರಭಾವತಿ (ಪ್ರಥಮ ಡಿ.ಎಡ್) ಕ್ರೀಡಾ ಕಾರ್ಯದರ್ಶಿಯಾಗಿ ಚಿತ್ರಲೇಖ (ದ್ವಿತೀಯ ಡಿ.ಎಡ್) ಉಪ ಕಾರ್ಯದರ್ಶಿಯಾಗಿ ಶ್ರೀಕುಮಾರ್ (ಪ್ರಥಮ ಡಿ.ಎಡ್) ಸಾಂಸ್ಕೃತಿಕ ಸಂಘದ ಕಾರ್ಯದರ್ಶಿಯಾಗಿ ಅನುಷಾ (ದ್ವಿತೀಯ ಡಿ.ಎಡ್) ಉಪ ಕಾರ್ಯದರ್ಶಿಯಾಗಿ ಜಯಶ್ರೀ (ಪ್ರಥಮ ಡಿ.ಎಡ್) ಶಿಸ್ತುಪಾಲನ ಕಾರ್ಯದರ್ಶಿಯಾಗಿ ತೇಜು (ದ್ವಿತೀಯ ಡಿ.ಎಡ್) ಉಪ ಕಾರ್ಯದರ್ಶಿಯಾಗಿ ಸತ್ಯನಾರಾಯಣ (ಪ್ರಥಮ ಡಿ.ಎಡ್).


ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ಮಂಜು ಆರ್, ಪ್ರಿಯದರ್ಶಿನಿ. ಸಿಬ್ಬಂದಿ ವರ್ಗದವರು ಮತ್ತು ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.


ಪ್ರಾಂಶುಪಾಲರಾದ ಸ್ವಾಮಿ ಕೆ. ಎ. ಪ್ರಾಸ್ತಾವಿಕ ನುಡಿಗಳನ್ನಾಡಿ ಮುಖ್ಯ ಅತಿಥಿಗಳನ್ನು ಸ್ವಾಗತಿಸಿದರು. ಪ್ರಶಿಕ್ಷಣಾರ್ಥಿಗಳಾದ ಅಂಬಿಕಾ,ಅಶ್ವಿತಾ ಮತ್ತು ಅನುಷ ಪ್ರಾರ್ಥಿಸಿ, ಶಹನಾಝ್ ವಂದಿಸಿ, ಮುಝೈನಾ ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top