ಹಿಂದೂಸ್ತಾನಿ ಗಾಯಕ ವೆಂಕಟೇಶ್ ಕುಮಾರ್ ಅವರಿಗೆ ಮನ್ಸೂರ್ ಮಲ್ಲಿಕಾರ್ಜುನ್ ಪ್ರಶಸ್ತಿ ಪ್ರದಾನ
ಬೆಂಗಳೂರು: ಬೆಂಗಳೂರು ಕಿಡ್ನಿ ಫೌಂಡೇಶನ್ ಬಿಕೆಎಫ್ ಸೆಪ್ಟೆಂಬರ್ 28 -29ರಂದು ಬೆಂಗಳೂರಿನ ಕೆ ಆರ್ ರಸ್ತೆಯ ಗಾಯನ ಸಮಾಜದಲ್ಲಿ "19ನೇ ಧ್ವನಿ-ಪಂಡಿತ್ ಮಲ್ಲಿಕಾರ್ಜುನ್ ಮನ್ಸೂರ್ ಹಿಂದೂಸ್ತಾನಿ ಸಂಗೀತೋತ್ಸವ" ಕಾರ್ಯಕ್ರಮವನ್ನು ಆಯೋಜಿಸಿತ್ತು.
ಇದೇ ಸಂದರ್ಭದಲ್ಲಿ ಹಿಂದೂಸ್ತಾನಿ ಗಾಯಕ ಪಂಡಿತ್ ವೆಂಕಟೇಶ್ ಕುಮಾರ್ ಅವರಿಗೆ ಮಲ್ಲಿಕಾರ್ಜುನ್ ಮನ್ಸೂರ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಕ್ರಿಯೇಟಿವ್ ಟೀಚಿಂಗ್ ಆಕಾಡೆಮಿ ಅಧ್ಯಕ್ಷ ಡಾ.ಗುರುರಾಜ್ ಕರ್ಜಗಿ, ಬಿಕೆ ಎಫ್ ಸಂಸ್ಥೆ ಕಿಡ್ನಿ ವೈಫಲ್ಯರಿಗೆ ಇಂತಹ ಕಾರ್ಯಕಮದಿಂದ ಬರುವ ಹಣದಿಂದ ಗ್ರಾಮೀಣ ಭಾಗದ ಡಯಾಲಿಸಿಸ್ ರೋಗಿಗಳ ಚಿಕಿತ್ಸೆಗೆ ಬಳಸುವುದು ದೊಡ್ಡ ಮಹತ್ವದ ದಾನದ ಕಾರ್ಯಕ್ರಮವಾಗಿದೆ, ದಾನದ ಮುಂದೆ ಯಾವುದೇ ಕಾರ್ಯವೂ ಇಲ್ಲ ಇನ್ನೊಬ್ಬರಿಗೆ ಕಿಡ್ನಿ ದಾನದ ಕಾರ್ಯವನ್ನು ಬಿಕೆಎಫ್ ಮಾಡಿದೆ. ಮೂತ್ರ ಪಿಂಡದ ಕಾಯಿಲೆಗಳ ಚಿಕಿತ್ಸೆಯಲ್ಲಿ ಮುಂಚೂಣಿಯಲ್ಲಿ ರುವುದು ಶ್ಲಾಘನೀಯ ಎಂದು ಹೇಳಿದರು.
ಲೋಕಾಯುಕ್ತ ಎಸ್. ಪಿ. ಶ್ರೀನಾಥ್ ಮಾತನಾಡಿ, ಹಿಂದೂಸ್ತಾನಿ ಗಾಯಕ ವೆಂಕಟೇಶ್ ಕುಮಾರ್, ಗುರುರಾಜ್ ಕರ್ಜಗಿ, ಖ್ಯಾತ ವೈದ್ಯ ವಿವೇಕ್ ಜವಳಿ ಅವರನ್ನು ಇಂತಹ ಕಾರ್ಯಕ್ರಮದಲ್ಲಿ ನೋಡುತ್ತಿರುವುದು ಹಿಮಾಲಯ ಪರ್ವತ ನೋಡಿದಂತೆ, ಬಿಕೆಎಫ್ ಸಂಸ್ಥೆ ಮೂತ್ರ ಪಿಂಡ ಕಾಯಿಲೆಯಿಂದ ಬಳಲುತ್ತಿರುವವರಿಗೆ ಒಂದು ಅರ್ಥಪೂರ್ಣ ಕಾರ್ಯಕ್ರಮದ ಮೂಲಕ ನೆರವಾಗುತ್ತಿರುವುದು ಪ್ರಶಂಸನೀಯ ಎಂದರು.
ಕಾರ್ಯಕ್ರಮದಲ್ಲಿ ಖ್ಯಾತ ವೈದ್ಯ ವಿವೇಕ್ ಜವಳಿ, ಬಿಕೆಎಫ್ ಅಧ್ಯಕ್ಷ ಡಾ.ಶ್ರೀರಾಮ್, ಟ್ರಸ್ಟಿ ಡಾ. ಶ್ರೀನಿವಾಸ್ ಮತ್ತಿತರರು ಭಾಗವಹಿಸಿದ್ದರು.
ಈ ಕಾರ್ಯಕ್ರಮದಿಂದ ಬರುವ ಆದಾಯವನ್ನು ಬಿಕೆಎಫ್ ನ ಗ್ರಾಮೀಣ ಡಯಾಲಿಸಿಸ್ ರೋಗಿಗಳ ಚಿಕಿತ್ಸೆಗೆ ಬಳಸಲಾಗುತ್ತದೆ ಎಂದು ಪ್ರಕಟಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ