ಚಿರತೆಯ ಓಡಾಟ: ಸಾಗರ ತಾಲೂಕಿನ ಗ್ರಾಮಸ್ಥರಿಂದ ಅರಣ್ಯಾಧಿಕಾರಿಗಳಿಗೆ ಮನವಿ

Upayuktha
0


ಸಾಗರ: ಸಾಗರ ತಾಲೂಕಿನ ಮೇಲಿನ ಗೋಳಗೋಡು, ಖಂಡಿಕಾ, ಹುಳೇಗಾರು, ಗುಡ್ಡೆದಿಂಬ, ಕಲ್ಮಕ್ಕಿ ಗ್ರಾಮಗಳ ಪರಿಸರದಲ್ಲಿ ಒಂದೂವರೆ ತಿಂಗಳಿನಿಂದ ಚಿರತೆಯೊಂದು ಓಡಾಟ ನಡೆಸುತ್ತಿದ್ದು, ಸಾಕು ನಾಯಿಗಳನ್ನು, ದನಕರುಗಳನ್ನು ಹಿಡಿದು ತಿನ್ನುತ್ತಿದೆ.


ಇದರಿಂದ ಜನತೆಗೆ ಭಯ, ಆತಂಕ ಸೃಷ್ಟಿಯಾಗಿದ್ದು, ಚಿರತೆಯನ್ನು ಹಿಡಿದು ಬೇರೆ ಕಡೆ ಸ್ಥಳಾಂತರಿಸುವಂತೆ ಒತ್ತಾಯಿಸಿ ಸಾಗರ ವಲಯ ಅರಣ್ಯಾಧಿಕಾರಿಗಳಿಗೆ ಗ್ರಾಮಸ್ಥರು ಇಂದು ಮನವಿ ಸಲ್ಲಿಸಿದರು.


ನಿನ್ನೆಯಷ್ಟೇ ಮೇಲಿನ ಗೋಳಗೋಡು ನಿವಾಸಿ ರತ್ನಮ್ಮ ಅವರ ಮನೆಯ ಅಂಗಳಕ್ಕೆ ಚಿರತೆ ಬಂದಿದ್ದು, ಜನರು ಒಟ್ಟು ಸೇರಿದಾಗ ಅದು ಪರಾರಿಯಾಗಿದೆ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಅವರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದಾಗ ಚಿರತೆ ಕಾಣಸಿಗದಿದ್ದರೂ ಬಂದಿರುವ ಗುರುಗಳು ಖಾತ್ರಿಯಾಗಿವೆ.


ಆದಷ್ಟು ಬೇಗನೆ ಈ ಚಿರತೆಯನ್ನು ಬೋನಿಗೆ ಹಾಕಿ ಹಿಡಿದು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಿಸಿ ಜನತೆಗೆ ರಕ್ಷಣೆ ನೀಡಬೇಕೆಂದು ಮನವಿ ಪತ್ರದಲ್ಲಿ ಕೋರಲಾಗಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top